Union Budget 2024: ಹಿರಿಯ ನಾಗರೀಕರ ನಿರೀಕ್ಷೆಗಳೇನು?, ಮಾಹಿತಿ, ವಿವರ

Union Budget 2024: ಸೋಮವಾರ (ಜುಲೈ 22) ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮಂಗಳವಾರ (ಜುಲೈ 23) ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಮೂಲಕ ಅವರು ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ ದಾಖಲೆಯನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ಹಾಗೆಯೇ ಈ ಬಜೆಟ್‌ನಲ್ಲಿ ಹಲವರು ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಹಾಗಾದರೆ ಹಿರಿಯ ನಾಗರೀಕರ ನಿರೀಕ್ಷೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇಡೀ ದೇಶದ ಜನಸಾಮಾನ್ಯರ ನಿರೀಕ್ಷೆಗಳು ಕೇಂದ್ರ ಬಜೆಟ್ ಮೇಲೆ ನಿಂತಿದೆ. ಹಿರಿಯ ನಾಗರಿಕರು ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸ್ಥಿರ ಆದಾಯದ ಹೂಡಿಕೆಗಳು ಅಥವಾ ಬಾಡಿಗೆ ಆದಾಯದ ಮೇಲೆ ಅವಲಂಬಿತರಾಗಿದ್ದಾರೆ ಎಂಬುದು ಇಲ್ಲಿ ಪ್ರಮುಖವಾದ ಅಂಶ ಆಗಿದೆ. ಇತರರಿಗೆ ಹೋಲಿಕೆ ಮಾಡಿದರೆ ಇವರಿಗೆ ಹೆಚ್ಚಿನ ನೆರವು ಹಾಗೂ ಮಾರ್ಗದರ್ಶನ ಬೇಕಾಗಿದೆ.

Union Budget 2024 What are the expectations of senior citizens

ದೇಶದಲ್ಲಿನ ಗ್ಲೋಬಲ್ ಮೊಬಿಲಿಟಿ ಸರ್ವೀಸಸ್, ತೆರಿಗೆ, KPMGನ ಪಾಲುದಾರ ಮತ್ತು ಮುಖ್ಯಸ್ಥ ಪರಿಝಾದ್ ಸಿರ್ವಾಲ್ಲಾ ಹೇಳುವಂತೆ, ಅಂಕಿಅಂಶಗಳ ಪ್ರಕಾರ, ಭಾರತದ ಜನಸಂಖ್ಯೆಯ 10 ಪ್ರತಿಶತಕ್ಕಿಂತ ಹೆಚ್ಚಿನವರು ಹಿರಿಯ ನಾಗರಿಕರಾಗಿದ್ದು, 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಾಗಿದ್ದಾರೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಜುಲೈ 23) ಬೆಳಗ್ಗೆ 11 ಗಂಟೆ ಲೋಕಸಭೆಯಲ್ಲಿ 2024-25ರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇದಾಗಿದೆ. ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವರಾಗಿ ಮಂಡಿಸುತ್ತಿರುವ 7ನೇ ಬಜೆಟ್ ಇದಾಗಿದೆ.

ನಿರ್ಮಲಾ ಸೀತಾರಾಮನ್ ಅವರು 2020ರಲ್ಲಿ 2 ಗಂಟೆ 40 ನಿಮಿಷಗಳ ಸುದೀರ್ಘ ಬಜೆಟ್ ಭಾಷಣ ಮಾಡಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅವರು ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಧ್ಯಂತರ ಬಜೆಟ್ ಅನ್ನು 56 ನಿಮಿಷಗಳಲ್ಲಿ ಮಂಡಿಸಿದ್ದರು. ಇದು ಕನಿಷ್ಠ ಸಮಯದ ಬಜೆಟ್ ಭಾಷಣ ಆಗಿತ್ತು.

ನಿರ್ಮಲಾ ಅವರು 2019ರಲ್ಲಿ, ಸಾಂಪ್ರದಾಯಿಕ ಬಜೆಟ್ ಬ್ರೀಫ್‌ಕೇಸ್ ಬಿಟ್ಟು ಟ್ಯಾಬ್ಲೆಟ್ ಭಾಷಣ ಮತ್ತು ಇತರ ದಾಖಲೆಗಳನ್ನು ಸಾಗಿಸಲು ರಾಷ್ಟ್ರೀಯ ಲಾಂಛನ ಇರುವ ಬಹಿ-ಖಾತಾ ವನ್ನು ಲೋಕಸಭೆಗೆ ತಂದಿದ್ದರು. ಜೊತೆಗೆ ಹೊಸ ಸಂಪ್ರದಾಯ ಶುರು ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+