ಬಜೆಟ್ 2021: ಏಕ ವ್ಯಕ್ತಿ ಕಂಪೆನಿ ಸ್ಥಾಪನೆಗೆ ಎನ್ಆರ್ಐಗಳಿಗೆ ಅನುಮತಿ
ನವದೆಹಲಿ, ಫೆಬ್ರವರಿ 1: ಭಾರತದ ಉದ್ಯಮ ವಹಿವಾಟುಗಳಲ್ಲಿ ನೇರ ಪಾತ್ರ ವಹಿಸಲು ಅನಿವಾಸಿ ಭಾರತೀಯರಿಗೆ (ಎನ್ಆರ್ಐ) ಅವಕಾಶ ನೀಡುವುದಾಗಿ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಈ ಮೂಲಕ ಅನಿವಾಸಿ ಭಾರತೀಯ ಉದ್ಯಮಶೀಲರು ದೇಶದಲ್ಲಿ ಏಕ ವ್ಯಕ್ತಿ ಕಂಪೆನಿಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ.
ಇದರಲ್ಲಿ ಪಾವತಿಸಲಾಗುವ ಬಂಡವಾಳ ಮತ್ತು ಒಟ್ಟಾರೆ ವಹಿವಾಟಿನ ಮೇಲೆ ನಿರ್ಬಂಧವಿರುವುದಿಲ್ಲ. ಒಂದಕ್ಕಿಂತ ಹೆಚ್ಚು ಏಕ ವ್ಯಕ್ತಿ ಕಂಪೆನಿಗಳನ್ನು ಒಳಗೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಭಾರತದಲ್ಲಿ ವಾಸವಿರಬೇಕಾದ ದಿನಗಳನ್ನು 182 ರಿಂದ 120 ದಿನಗಳಿಗೆ ಇಳಿಸುವ ಮೂಲಕ ಏಕ-ವ್ಯಕ್ತಿ ಕಂಪೆನಿಯನ್ನು ಇನ್ನೊಂದು ಮಾದರಿಗೆ ಪರಿವರ್ತಿಸಲು ಅನುಮತಿ ನೀಡಲಾಗುತ್ತದೆ.

ಭಾರತದಲ್ಲಿ ನೆಲೆಸಿರದ ವ್ಯಕ್ತಿಗಳು ಭಾರತದಲ್ಲಿ ಏಕ ವ್ಯಕ್ತಿ ಕಂಪೆನಿಗಳನ್ನು ಆರಂಭಿಸಲು ಇದು ಅನುಮತಿ ನೀಡಲಿದೆ. ಕಂಪೆನಿ ಕಾಯ್ದೆ 2013ರಲ್ಲಿ ಏಕ ವ್ಯಕ್ತಿ ಕಂಪೆನಿ ಪರಿಕಲ್ಪನೆಯನ್ನು ಅಡಕಮಾಡಲಾಗಿತ್ತು. ಇದು ಉದ್ಯಮಶೀಲರಿಗೆ ಪ್ರಾಥಮಿಕವಾಗಿ ಪ್ರಯೋಜನ ನೀಡಲಿದ್ದು, ಸಾಂಸ್ಥಿಕ ಸ್ಥಾಪನೆಯ ಮೂಲಕ ಅನುದಾನದ ಮೂಲಗಳನ್ನು ಹುಡಕಲು ಅನುಕೂಲವಾಗುವಂತೆ ಮಾಡಲಾಗಿದೆ. ಭಾರತವಲ್ಲದೆ ಅಮೆರಿಕ, ಚೀನಾ ಮತ್ತು ಸಿಂಗಪುರ ಸೇರಿದಂತೆ ಅನೇಕ ದೇಶಗಳು ಒಪಿಸಿ ಸ್ವರೂಪದಲ್ಲಿ ಉದ್ಯಮ ಸಂರಚನೆ ಹೊಂದಲು ಅವಕಾಶ ನೀಡಿವೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications