ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್: ಸಾಮಾಜಿಕ ಜಾಲತಾಣದಲ್ಲಿ ಮೋದಿ ಸರ್ಕಾರಕ್ಕೆ ಛೀಮಾರಿ?!

|
Google Oneindia Kannada News

Recommended Video

Union Budget 2018 : ಮೋದಿ ಸರ್ಕಾರಕ್ಕೆ ಛೀಮಾರಿ | ಟ್ವಿಟ್ಟರ್ ಸಮರ | Oneindia Kannada

ನವದೆಹಲಿ, ಫೆಬ್ರವರಿ 01: ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸುತ್ತಿರುವ 2018-19ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಕೃಷಿ ಪ್ರಧಾನ ಬಜೆಟ್ ಎಂಬ ಕಾರಣಕ್ಕೆ ಮಹತ್ವದ್ದೆನಿಸಿದೆ.

ಕೃಷಿ ಕ್ಷೇತ್ರಕ್ಕೆ ಆದ್ಯತೆ, ಬಡವರಿಗೆ ಉಚಿತ ಡಯಾಲಿಸಿಸ್, ಸ್ಟೆಂಟ್ ದರ ಇಳಿಕೆ ಸೇರಿದಂತೆ ಆರೋಗ್ಯ ಕಾಳಜಿ, ಮಾಲಿನ್ಯ ತಡೆಗೆ ಒತ್ತು ಮುಂತಾಗಿ ಹಲವು ಮಹತ್ವದ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ.

ಕೇಂದ್ರ ಬಜೆಟ್ 2018-19 : ಯಾರು, ಏನು ಹೇಳಿದರು?ಕೇಂದ್ರ ಬಜೆಟ್ 2018-19 : ಯಾರು, ಏನು ಹೇಳಿದರು?

ಆದರೆ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಆಗದಿರುವ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಬಜೆಟ್ ಕುರಿತು ಚರ್ಚೆ ಆರಂಭವಾಗಿದ್ದು, ಕೇಂದ್ರ ಬಜೆಟ್ ಅನ್ನು ಕೆಲವರು ಜನಪರ ಬಜೆಟ್ ಅಂದಿದ್ದರೆ ಮತ್ತಷ್ಟು ಜನ ಹೊಸತೇನೂ ಇಲ್ಲ ಎಂದಿದ್ದಾರೆ.

ಶ್ರೀಮಂತರನ್ನು ಕೊಳ್ಳೆಹೊಡೆದು ಬಡವರನ್ನು ಸಲಹಿ...

ನಾವೆಲ್ಲರು ಈ ಸೆಸ್ ಗಳಿಂದ ಮುಕ್ತವಾಗುವುದು ಯಾವಾಗ? ಕಖೇಂದ್ರ ಬಜೆಟ್ ಶ್ರೀಮಂತರನ್ನು ದೋಚಿ, ಬಡವರನ್ನು ಸಲಹುವಂತಿದೆ. ಬಡವರು ಮತಹಾಕಬೇಕು, ಉಳಿದವರು ತೆರಿಗೆ ಕಟ್ಟುತ್ತಿರಬೇಕು. ಅತ್ಯಂತ ಶ್ರೀಮಂತರಾಗಿರುವವರನ್ನು ಸರ್ಕಾರಕ್ಕೂ ಮುಟ್ಟುವುದಕ್ಕೆ ಸಾಧ್ಯವಿಲ್ಲ! ಎಂದಿದ್ದಾರೆ ರಾಜದೀಪ ಸರ್ದೇಸಾಯಿ.

ಅತ್ಯುತ್ತಮ ಬಜೆಟ್ ನೀಡಿದ್ದಕ್ಕೆ ಧನ್ಯವಾದ

ನಮ್ಮ ಕನಸುಗಳನ್ನು ಸಲಹುವ ಮತ್ತು ಅದು ಮತ್ತಷ್ಟು ಸಮೃದ್ಧವಾಗುವಂತೆ ಮಾಡುವ ಬಜೆಟ್ ಎಂದರೆ 2018 ರ ಬಜೆಟ್! ಇಂಥ ಬಜೆಟ್ ನೀಡಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ ಪೂನಂ ಮಹಾಜನ್.

ಎರಡೇ ತರದ ಬಜೆಟ್ ಇರುವುದು!

ನಾನು ಹುಟ್ಟಿದಾಗಿನಿಂದ ನೋಡುತ್ತಿದ್ದೇನೆ. ಇಲ್ಲಿ ಎರಡೇ ಥರದ ಬಜೆಟ್ ಇರುವುದು.
1. ಕೆಟ್ಟ ಬಜೆಟ್ . ಇದರಲ್ಲಿ ಮಧ್ಯಮ ವರ್ಗದ ಜನರಿಗೆ ಏನೂ ಇಲ್ಲ!
2. ಒಳ್ಳೆಯ ಬಜೆಟ್. ಇದರಲ್ಲಿ ಮಧ್ಯಮ ವರ್ಗದ ಜನರಿಗೆ ಏನೂ ಇಲ್ಲ! ಎಂದು ಶಶ್ ಎಂಬ ಖಾತೆಯಿಂದ ವ್ಯಂಗ್ಯವಾಗಿ ಟ್ವೀಟ್ ಮಾಡಲಾಗಿದೆ.

ಬ್ರಿಟೀಶ್ ಆಡಳಿತ ಎನ್ನಿಸುತ್ತಿದೆ.

ತೆರಿಗೆ ಅಸಮಾನತೆಯ ಕುರಿತು ಮಧ್ಯಮ ವರ್ಗದ ಜನರು ದೇಶದಾದ್ಯಂತ ಪ್ರತಿಭಟನೆ ನಡೆಸುವ ಕಾಲ ಈಗ ಬಂದಿದೆ. ನಿಜಕ್ಕೂ ಇದೀಗ ಬ್ರಿಟೀಷ್ ಸರ್ಕಾರದ ಆಡಳಿತದ ಕೆಳಗೆ ಬದುಕುತ್ತಿರುವಂತೆ ಅನ್ನಿಸುತ್ತಿದೆ ಎಂದಿದ್ದಾರೆ ಅಂಜುಲ್ ಬನ್ಸಾಲ್.

ಅನುಮಾನ ಬಗೆಹರಿಸಿದ್ದೀರಿ!

2019 ರಲ್ಲಿ ಬಿಜೆಪಿಗೆ ಮತ ಚಲಾಯಿಸದಿರುವುದಕ್ಕೆ ಇದ್ದ ಅನುಮಾನವನ್ನೆಲ್ಲ ಈಡೇರಿಸಿದ್ದಕ್ಕೆ ಅರುಣ್ ಜೇಟ್ಲಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ ನೇಹಾ ಜೈನ್

ಎಲ್ಲಾ ಬಜೆಟ್ ಗಳೂ ಹೀಗೇ!

ಎಲ್ಲಾ ಬಜೆಟ್ ಗಳೂ ಹೀಗೆ. ಸರ್ಕಾರಗಳು ಮಧ್ಯಮ ವರ್ಗದ ತೆರಿಗೆಯನ್ನು ಕಸಿದುಕೊಂಡು ಬಡವರ ಮತ ಪಡೆಯುತ್ತವೆ. ಮತ್ತು ಶ್ರೀಮಂತಿಗೆ ಸಬ್ಸೀಡಿ ನೀಡುತ್ತವೆ ಎಂದು ದಿ ಬ್ಯಾಡ್ ಡಾಕ್ಟರ್ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.

English summary
Finance minister of India Arun Jaitley is presenting union budget for the financial year 2018-19 today(feb 1st). Here ate twitter reactions from the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X