ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ನಲ್ಲಿ ಭಾರತೀಯರಿಗೆ ಸಹಾಯವಾಣಿ: ಇಲ್ಲಿದೆ ವಿವರ

|
Google Oneindia Kannada News

ನವದೆಹಲಿ, ಫೆಬ್ರವರಿ 25: ಉಕ್ರೇನ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಸಹಾಯ ಮಾಡಲು, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇತರೆ ನೆರೆ ರಾಷ್ಟ್ರಗಳ ಸಹಾಯವನ್ನು ಪಡೆಯುತ್ತಿದೆ. ಹಂಗೇರಿ, ಪೋಲೆಂಡ್, ಸ್ಲೋವಾಕ್ ರಿಪಬ್ಲಿಕ್‌ ಹಾಗೂ ರೊಮೇನಿಯಾದಲ್ಲಿನ ಗಡಿ ಭಾಗಕ್ಕೆ ಭಾರತ ತನ್ನ ತಂಡವನ್ನು ಈಗಾಗಲೇ ಕಳುಹಿಸಿದೆ.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಗಡಿ ಪ್ರದೇಶಗಳಲ್ಲಿ ಶಿಬಿರವನ್ನು ಸ್ಥಾಪಿಸಲು ಈ ನಾಲ್ಕು ದೇಶಗಳಲ್ಲಿನ ತನ್ನ ಸಹವರ್ತಿಗಳೊಂದಿಗೆ ಮಾತನಾಡಿದ್ದೇನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವಿಟರ್‌ನಲ್ಲಿ ಈಗಾಗಲೇ ಮಾಹಿತಿ ನೀಡಿದ್ದಾರೆ.

ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಕರೆ ತರುವಂತೆ ಸುಪ್ರೀಂನಲ್ಲಿ ಪಿಐಎಲ್ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಕರೆ ತರುವಂತೆ ಸುಪ್ರೀಂನಲ್ಲಿ ಪಿಐಎಲ್

ಉಕ್ರೇನ್‌ ದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ಯುದ್ಧಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಸೂಕ್ತವಾದ ಆಹಾರ, ಔಷಧ ಮತ್ತು ವಸತಿಗೆ ಅಗತ್ಯವಾಗುವಂತಹ ಜೀವನಾವಶ್ಯಕ ಮತ್ತು ತುರ್ತು ಸಾಮಗ್ರಿಗಳನ್ನು ಒದಗಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ವಕೀಲ ವಿಶಾಲ್ ತಿವಾರಿ ಅವರು ನ್ಯಾಯಾಲಯವನ್ನು ಕೋರಿದ್ದಾರೆ. ಈ ನಡುವೆ ಭಾರತ ಸರ್ಕಾರವು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಸಹಾಯವಾಣಿಯನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

Ukraine War: Mea Teams Enroute Borders of Ukraine to Evacuate Stranded Indians, Contact Details

ತಂಡಗಳ ವಿವರಗಳನ್ನು ಈ ಕೆಳಗಿದೆ

ಹಂಗೇರಿ: ಉಕ್ರೇನ್‌ನ ಜಕಾರ್‌ಪಾಟಿಯಾ ಒಬ್ಲಾಸ್ಟ್‌ನ ಉಜ್ಹೋರೋಡ್ ಎದುರು ಜಹೋನಿ ಗಡಿ ಪೋಸ್ಟ್‌ಗೆ ತಂಡವು ಸಾಗುತ್ತಿದೆ.

ಎಸ್. ರಾಮ್‌ ಜೀ
ಮೊಬೈಲ್: +36305199944

ವಾಟ್ಸಾಪ್: +917395983990
ಅಂಕುರ್
ಮೊಬೈಲ್ ಮತ್ತು ವಾಟ್ಸಾಪ್: +36308644597
ಮೋಹಿತ್ ನಾಗ್ಪಾಲ್
ಮೊಬೈಲ್: +36302286566

ವಾಟ್ಸಾಪ್: +918950493059

ಪೋಲೆಂಡ್: ಉಕ್ರೇನ್‌ನೊಂದಿಗಿನ ಕ್ರಾಕೋವಿಕ್ ಭೂ ಗಡಿಯತ್ತ ಸಾಗುತ್ತಿರುವ ತಂಡ
ಪಂಕಜ್ ಗಾರ್ಗ್
ಮೊಬೈಲ್: +48660460814 / +48606700105

ಸ್ಲೋವಾಕ್ ರಿಪಬ್ಲಿಕ್: ತಂಡವು ಉಕ್ರೇನ್‌ನೊಂದಿಗೆ ವೈಸ್ ನೆಮೆಕೆ ಭೂ ಗಡಿಯತ್ತ ಸಾಗುತ್ತಿದೆ

ಮನೋಜ್ ಕುಮಾರ್
ಮೊಬೈಲ್: +421908025212
ಐವಾನ್ ಕೊಜಿಂಕಾ
ಮೊಬೈಲ್: +421908458724

 ರಷ್ಯಾದ ವಿರುದ್ಧ ಸೈಬರ್‌ ದಾಳಿ ಘೋಷಣೆ: ರಾಷ್ಟ್ರದ ಸುದ್ದಿ ವೆಬ್‌ಸೈಟ್‌ ನಿಷ್ಕ್ರಿಯ ರಷ್ಯಾದ ವಿರುದ್ಧ ಸೈಬರ್‌ ದಾಳಿ ಘೋಷಣೆ: ರಾಷ್ಟ್ರದ ಸುದ್ದಿ ವೆಬ್‌ಸೈಟ್‌ ನಿಷ್ಕ್ರಿಯ

ರೊಮೇನಿಯಾ: ಉಕ್ರೇನ್‌ನೊಂದಿಗಿನ ಸುಸೇವಾ ಭೂ ಗಡಿಗೆ ತಂಡವು ದಾರಿಯಲ್ಲಿದೆ.
ಗೌಶುಲ್ ಅನ್ಸಾರಿ
ಮೊಬೈಲ್: +40731347728
ಉದ್ದೇಶ್ಯ ಪ್ರಿಯದರ್ಶಿ
ಮೊಬೈಲ್: +40724382287
ಆಂಡ್ರಾ ಹರಿಯೊನೊವ್
ಮೊಬೈಲ್: +40763528454
ಮಾರಿಯಸ್ ಸಿಮಾ
ಮೊಬೈಲ್: +40722220823

Ukraine War: Mea Teams Enroute Borders of Ukraine to Evacuate Stranded Indians, Contact Details

ಐಎಎಫ್‌ ವಿಮಾನವು ಸ್ಥಳಾಂತರ ಸೇವೆಗೆ ಸಿದ್ಧ

ಈ ನಡುವೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಭಾರತೀಯ ವಾಯುಪಡೆಯ (ಐಎಎಫ್) ವಿಮಾನಗಳು ಸಿದ್ಧವಾಗಿವೆ ಎಂದಿದ್ದಾರೆ. "ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಕ್ಷಣಾ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದೆ. ಏರ್‌ಲಿಫ್ಟ್‌ಗೆ ವ್ಯವಸ್ಥೆ ಮಾಡಬೇಕೆಂದು ನಾವು ಅವರಿಗೆ ಹೇಳಿದ್ದೇವೆ. ಈ ಸಂದರ್ಭದಲ್ಲಿ ಐಎಎಫ್‌ ವಾಣಿಜ್ಯ ವಿಮಾನಗಳ ಮೂಲಕ ಈ ಕಾರ್ಯವನ್ನು ನಡೆಸಲಿದೆ," ಎಂದು ತಿಳಿಸಿದ್ದಾರೆ.

ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ MEA ಸಲಹೆಯನ್ನು ನೀಡಿದೆ. ,ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಉಕ್ರೇನ್‌ನಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಪ್ರಜೆಗಳಿಗೆ ಸಲಹೆಯನ್ನು ನೀಡಿದೆ. ರಷ್ಯಾದ ದಾಳಿಯ ನಡುವೆ ಉಕ್ರೇನ್ ದೇಶದಲ್ಲಿ ಪ್ರಯಾಣವನ್ನು ಕಷ್ಟಕರವಾಗಿಸಿದೆ. ಕೀವ್‌ನಲ್ಲಿ ಸಿಲುಕಿರುವ ಮತ್ತು ಉಳಿಯಲು ಸ್ಥಳದ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಸ್ಥಳೀಯ ಸಂಸ್ಥೆಗಳೊಂದಿಗೆ ಅವರು ಸಂಪರ್ಕದಲ್ಲಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿಕೊಂಡಿದೆ. ಉಕ್ರೇನ್‌ನಲ್ಲಿ ಭಾರತದ ಸುಮಾರು 18 ಸಾವಿರ ಜನರಿದ್ದಾರೆ ಎಂದು ವಿದೇಶಾಂಗ ಇಲಾಖೆಯ ರಾಜ್ಯಖಾತೆಯ ಸಚಿವ ವಿ ಮುರಳೀಧರನ್​​ ತಿಳಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

ಭಾರತದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಉಕ್ರೇನ್‌‌ನ್ನು ಯಾಕೆ ಆಯ್ಕೆ ಮಾಡಿಕೊಳ್ತಾರೆ? | Oneindia Kannada

English summary
Ukraine-Russia War: MEA Teams Enroute Borders of Ukraine to Evacuate Stranded Indians, Here's Contact Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X