ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೀವ್‌ನಿಂದ ತುರ್ತಾಗಿ ನಿರ್ಗಮಿಸಿ: ಭಾರತೀಯರಿಗೆ ಸಲಹೆ

|
Google Oneindia Kannada News

ನವದೆಹಲಿ, ಮಾರ್ಚ್ 01: ಉಕ್ರೇನ್‌ ಹಾಗೂ ರಷ್ಯಾ ನಡುವೆ ಯುದ್ಧವು ಭೀಕರ ಹಂತಕ್ಕೆ ತಲುಪುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಒಂದೆಡೆ ಮಾತುಕತೆ ನಡೆಯುತ್ತಿದೆ. ಇನ್ನೊಂದೆಡೆ ರಷ್ಯಾ ಮಾತ್ರ ಉಕ್ರೇನ್‌ ಮೇಲೆ ದಾಳಿಯನ್ನು ನಡೆಸುತ್ತಲೇ ಇದೆ. ಅಷ್ಟು ಮಾತ್ರವಲ್ಲದೇ ಭಾರೀ ಪ್ರಮಾಣದ ಬೆಂಗಾವಲು ಪಡೆಯು ಕೀವ್‌ನತ್ತ ಸಾಗಿದೆ. ಈ ನಡುವೆ ಭಾರತವು ತನ್ನ ಪ್ರಜೆಗಳನ್ನು ತಕ್ಷಣವೇ ಉಕ್ರೇನ್ ರಾಜಧಾನಿ ಕೀವ್‌ನಿಂದ ನಿರ್ಗಮಿಸುವಂತೆ ತಿಳಿಸಿದೆ.

ಇಂದು ಮುಂಜಾನೆಯಿಂದ ಕೀವ್‌ನಲ್ಲಿ ಭಾರೀ ಸಮರ ನಡೆಯುತ್ತಿದೆ. ರಷ್ಯಾ ಸೇನೆ ತನ್ನ ಎಲ್ಲಾ ಶಕ್ತಿಯೊಂದಿಗೆ ಕೀವ್‌ಗೆ ಸಮೀಪಿಸುತ್ತಿದೆ. ರಷ್ಯಾದ ಫಿರಂಗಿ ಮತ್ತು ಟ್ಯಾಂಕ್‌ಗಳು ಕೀವ್‌ಗೆ ಸಮೀಪದಲ್ಲಿ 40 ಮೈಲಿಗಳವರೆಗೆ ಸಾಲಾಗಿ ನಿಂತಿದೆ ಎಂದು ಉಪಗ್ರಹ ಚಿತ್ರಗಳು ತೋರಿಸುತ್ತವೆ.

 40 ಮೈಲಿ ಉದ್ದದ ರಷ್ಯಾದ ಬೆಂಗಾವಲು ಪಡೆ: ಉಪಗ್ರಹ ಚಿತ್ರದಿಂದ ಬಹಿರಂಗ 40 ಮೈಲಿ ಉದ್ದದ ರಷ್ಯಾದ ಬೆಂಗಾವಲು ಪಡೆ: ಉಪಗ್ರಹ ಚಿತ್ರದಿಂದ ಬಹಿರಂಗ

ಉಕ್ರೇನ್ ವಿರುದ್ಧ ರಷ್ಯಾದ ಮಿಲಿಟರಿ ಆಕ್ರಮಣದ ನಂತರ, ಭಾರತವು ಶನಿವಾರದಿಂದ ಆ ದೇಶದಿಂದ 1,000 ಕ್ಕೂ ಹೆಚ್ಚು ನಾಗರಿಕರನ್ನು ಮರಳಿ ಕರೆತಂದಿದೆ. ಬುಕಾರೆಸ್ಟ್‌ನಿಂದ 219 ಜನರೊಂದಿಗೆ ಮೊದಲ ವಿಮಾನವು ಆಪರೇಷನ್ ಗಂಗಾ ಯೋಜನೆ ಅಡಿಯಲ್ಲಿ ಮುಂಬೈಗೆ ಬಂದಿಳಿದಿತು. ಈಗಾಗಲೇ ಒಂಬತ್ತು ವಿಮಾನಗಳು ಬುಕಾರೆಸ್ಟ್‌ನಿಂದ ಭಾರತೀಯರನ್ನು ಹೊತ್ತು ಹೊರಟಿದೆ.

ರೊಮೇನಿಯನ್ ರಾಜಧಾನಿ ಬುಕಾರೆಸ್ಟ್ ಮತ್ತು ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಿಂದ ಮೂರು ಏರ್ ಇಂಡಿಯಾ ವಿಮಾನಗಳಲ್ಲಿ 688 ಭಾರತೀಯ ಪ್ರಜೆಗಳು ಭಾನುವಾರ ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತಕ್ಕೆ ಮರಳಿದ್ದಾರೆ. ಸದ್ಯಕ್ಕೆ ಉಕ್ರೇನ್‌ನಲ್ಲಿ ಸುಮಾರು 13,000 ಭಾರತೀಯರು ಸಿಲುಕಿಕೊಂಡಿದ್ದಾರೆ ಮತ್ತು ಸಾಧ್ಯವಾದಷ್ಟು ಬೇಗ ಅವರನ್ನು ಮರಳಿ ಕರೆತರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

Ukraine-Russia War: Leave Kyiv Immediately, India’s Latest Advisory to Its Nationals in Ukraine

ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ ವಿ ಕೆ ಸಿಂಗ್ ಉಕ್ರೇನ್‌ನಿಂದ ಭಾರತೀಯರ ಸ್ಥಳಾಂತರ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಲು ಗಡಿ ಪ್ರದೇಶಕ್ಕೆ ತೆರಳಿದ್ದಾರೆ.

 ಉಕ್ರೇನ್‌ ವಿಚಾರದಲ್ಲಿ ಭಾರತವೇಕೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ?, ಇಲ್ಲಿದೆ ಕಾರಣ ಉಕ್ರೇನ್‌ ವಿಚಾರದಲ್ಲಿ ಭಾರತವೇಕೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ?, ಇಲ್ಲಿದೆ ಕಾರಣ

ವಾಯುಪಡೆಯ ಸಹಾಯ ಕೋರಿದ ಪ್ರಧಾನಿ ಮೋದಿ

ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ವಾಯುಪಡೆಯ ಸಹಾಯವನ್ನು ಕೋರಿದ್ದಾರೆ ಎಂದು ಮೂಲಗಳು ತಿಳಿಸಿದೆ. ಭಾರತೀಯರನ್ನು ಭಾರತಕ್ಕೆ ವಾಪಾಸ್‌ ಕರೆತರುವ ಪ್ರಕ್ರಿಯೆಯಲ್ಲಿ ವಾಯುಪಡೆ ಜೊತೆಯಾದರೆ ಇನ್ನಷ್ಟು ಸುಲಭವಾಗಲಿದೆ ಎಂಬುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯವಾಗಿದೆ ಎಂದು ವರದಿಯು ಹೇಳಿದೆ. ಭಾರತದ ವಾಯುಪಡೆಯ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ಕಡಿಮೆ ಸಮಯದಲ್ಲಿಉಕ್ರೇನ್‌ನಿಂದ ಹೆಚ್ಚಿನ ಜನರನ್ನು ಸ್ಥಳಾಂತರಿಸಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಆಪರೇಷನ್‌ ಗಂಗಾ ಕಾರ್ಯಾಚರಣೆಯ ಭಾಗವಾಗಿ ಐಎಎಫ್ ಹಲವಾರು ಸಿ-17 ವಿಮಾನಗಳನ್ನು ನಿಯೋಜಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ಸಂಜೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಕ್ರೇನ್‌ನಿಂದ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಹಗಲಿರುಳು ಕೆಲಸ ಮಾಡುತ್ತಿದೆ ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್‌ರನ್ನು ಭೇಟಿ ಮಾಡಿದ್ದು, ಉಕ್ರೇನ್ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿವರಿಸಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ. ಉಕ್ರೇನ್ ವಿರುದ್ಧದ ರಷ್ಯಾದ ಮಿಲಿಟರಿ ಆಕ್ರಮಣದ ನಂತರ, ಭಾರತವು ಶನಿವಾರದಿಂದ ಆ ದೇಶದಿಂದ 1,000 ಕ್ಕೂ ಹೆಚ್ಚು ನಾಗರಿಕರನ್ನು ಮರಳಿ ಕರೆತಂದಿದೆ. (ಒನ್‌ಇಂಡಿಯಾ ಸುದ್ದಿ)

Recommended Video

ಥೂ ಇಂಥಾ ಕೀಳು ಮಟ್ಟಕ್ಕಿಳೀತಾ ರಷ್ಯಾ | Oneindia Kannada

English summary
Ukraine-Russia War: Leave Kyiv immediately, India’s latest advisory to its nationals in Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X