• search

ಯುಕೆಯಲ್ಲಿ ನೀರವ್ ಮೋದಿ, ಹಸ್ತಾಂತರಕ್ಕೆ ಸಿಬಿಐನಿಂದ ಮನವಿ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿ, ಆಗಸ್ಟ್ 20: ಪಿಎನ್ ಬಿ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಯುನೈಟೆಡ್ ಕಿಂಗ್ಡಮ್ ನಲ್ಲಿ ನೆಲೆಸಿರುವುದು ಇದೀಗ ದೃಢಪಟ್ಟಿದೆ. ನೀರವ್ ಮೋದಿಯನ್ನು ಗಡೀಪಾರು ಮಾಡಿ, ಭಾರತಕ್ಕೆ ಹಸ್ತಾಂತರಿಸುವಂತೆ ಯುನೈಟೆಡ್ ಕಿಂಗ್ ಡಮ್ ಗೆ ಭಾರತದ ತನಿಖಾ ಸಂಸ್ಥೆ ಸಿಬಿಐ, ಅಧಿಕೃತ ಮನವಿ ಸಲ್ಲಿಸಿದೆ.

  ಸುಮಾರು 13, 500 ಕೋಟಿ ರು ಮೌಲ್ಯದ ಪಿಎನ್ ಬಿ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಅವರನ್ನು ಗಡೀಪಾರು ಮಾಡಿ, ಭಾರತಕ್ಕೆ ಹಸ್ತಾಂತರಿಸುವಂತೆ ಯುನೈಟೆಡ್ ಕಿಂಗ್ ಡಮ್ ಗೆ ಭಾರತದಿಂದ ಅಧಿಕೃತ ಮನವಿ ಸಲ್ಲಿಸಲಾಗಿದೆ. ವಿಜಯ್ ಮಲ್ಯ, ನೀರವ್ ಮೋದಿ ಸೇರಿದಂತೆ 29ಕ್ಕೂ ಅಧಿಕ ಮಂದಿ ಅಪರಾಧ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ದೇಶದಿಂದ ಪರಾರಿಯಾಗಿದ್ದಾರೆ. ನೀರವ್ ಮೋದಿ ಅವರ ಹಸ್ತಾಂತರ ಕುರಿತಂತೆ ರಾಜತಾಂತ್ರಿಕ ಕಚೇರಿಗೆ ಅಧಿಕೃತವಾಗಿ ಮನವಿ ಪತ್ರ ನೀಡಲಾಗಿದೆ.

  ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ ಇಂಟರ್ಪೋಲ್

  2002ರಿಂದ ಇಲ್ಲಿ ತನಕ ಈ ರೀತಿ 29 ಬಾರಿ ಮನವಿ ಸಲ್ಲಿಸಲಾಗಿದ್ದು, ಯುಕೆ ಕೇವಲ 9 ಮನವಿಗಳನ್ನು ಮಾತ್ರ ತಿರಸ್ಕರಿಸಿದೆ. ಮೂರು ಪ್ರಕರಣಗಳಲ್ಲಿ ಆರೋಪಿಗಳಿಗೆ ಯುಕೆ ನ್ಯಾಯಾಲಯವು ಬಂಧನ ವಾರೆಂಟ್ ಜಾರಿಗೊಳಿಸಿಲ್ಲ.

  UK confirms Nirav Modis presence in its territory, CBI sends extradition request

  ಮಲ್ಯ ಪ್ರಕರಣ ಸೇರಿ ಮಿಕ್ಕ 15 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಆದರೆ, ಕಳೆದ 16 ವರ್ಷಗಳಲ್ಲಿ ಸಮೀರ್ ಭಾಯಿ ವಿನುಭಾಯಿ ಪಟೇಲ್ ಅವರನ್ನು ಮಾತ್ರ ಯುಕೆಯಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ.

  ಚೋಕ್ಸಿ ಬಂಧಿಸಲು ಆಂಟಿಗುವಾ ಸರ್ಕಾರಕ್ಕೆ ಭಾರತದ ಕೋರಿಕೆ

  ಜನವರಿ 01, 2018ರಂದು ಭಾರತ ತೊರೆದ ನೀರವ್ ಮೋದಿ ಸದ್ಯ ಲಂಡನ್ನಿನಲ್ಲಿರುವುದು ಖಾತ್ರಿಯಾಗಿದೆ. ಮತ್ತೊಬ್ಬ ಆರೋಪಿ ಮೆಹುಲ್ ಚೋಕ್ಸಿ ಅವರು ಜನವರಿ 04ರಂದು ಭಾರತ ತೊರೆದು ಆಂಟಿಗುವಾ ಸೇರಿದ್ದಾರೆ. ಆಂಟಿಗುವಾ ಹಾಗೂ ಬರ್ಬುಡಾದ ಪೌರವತ್ವವನ್ನು 2017ರಲ್ಲೇ ಪಡೆದುಕೊಂಡಿರುವುದಾಗಿ ಇತ್ತೀಚೆಗೆ ಪ್ರಕಟಿಸಿದ್ದಾರೆ. ಮೆಹುಲ್ ಚೋಕ್ಸಿ ಹಾಗೂ ನೀರವ್ ಮೋದಿ ಅವರ ಪಾಸ್ ಪೋರ್ಟ್ ಬಳಕೆಗೆ ವಿದೇಶಾಂಗ ಸಚಿವಾಲಯ ನಿರ್ಬಂಧ ಹೇರಿ ಫೆಬ್ರವರಿ 16,2018ರಲ್ಲಿ ಆದೇಶಿಸಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  India has moved an extradition request after authorities have confirmed that fugitive businessman, Nirav Modi is in the United Kingdom. The extradition request was moved by the Central Bureau of Investigation.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more