ಮಲ್ಯ, ಲಲಿತ್ ಮೋದಿ, ಟೈಗರ್ ಮೆನನ್ ಹಸ್ತಾಂತರಕ್ಕೆ ಬ್ರಿಟನ್ ಸಮ್ಮತಿ?
ಭಾರತ ಹಾಗೂ ಬ್ರಿಟನ್ ಸರ್ಕಾರಗಳ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಮಟ್ಟದ ಸಭೆಯಲ್ಲಿ ಭಾರತದ ಮನವಿಗೆ ಬ್ರಿಟನ್ ಸಕಾರಾತ್ಮಕ ಸ್ಪಂದನೆ ನೀಡಿದೆಯೆಂದು ಮೂಲಗಳು ತಿಳಿಸಿವೆ.
ನವದೆಹಲಿ, ಫೆಬ್ರವರಿ 21: ಭಾರತದ ವಿವಿಧ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಲಂಡನ್ ನಲ್ಲಿ ನೆಲೆಸಿರುವ ಮದ್ಯದ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬ್ರಿಟನ್ ಸರ್ಕಾರ ಭಾರತಕ್ಕೆ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮಲ್ಯ ಅವರೊಂದಿಗೆ, ಬ್ರಿಟನ್ ನಲ್ಲಿ ತಲೆಮರೆಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರ್ಥಿಕ ಅವ್ಯವಹಾರಗಳ ಆರೋಪ ಹೊತ್ತಿರುವ ಲಲಿತ್ ಮೋದಿ ಹಾಗೂ 1993ರ ಮುಂಬೈ ಸ್ಫೋಟದ ಪ್ರಮುಖ ಆರೋಪಿ ಟೈಗರ್ ಮೆನನ್ ಅವರನ್ನೂ ಶೀಘ್ರವೇ ಭಾರತಕ್ಕೆ ಹಸ್ತಾಂತರಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಬ್ರಿಟನ್ ನೀಡಿದೆ ಎನ್ನಲಾಗಿದೆ.[ಮಲ್ಯ-ಯುಕೆಯಿಂದ ಕೋರ್ಟಿನ ಕಟಕಟೆಗೆ ಈಗ ಸಾಧ್ಯ!]

ಇತ್ತೀಚೆಗೆ, ಭಾರತ ಹಾಗೂ ಬ್ರಿಟನ್ ನ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳ ಮಟ್ಟದ ಸಭೆ ನಡೆದಿದ್ದು, ಆ ಸಭೆಯಲ್ಲಿ ಭಾರತವು ತನಗೆ ಅತ್ಯಗತ್ಯವಾಗಿ ಬೇಕಿರುವ ಮೇಲ್ಕಂಡ ಮೂವರನ್ನೂ ಬೇಗನೇ ಹಸ್ತಾಂತರಿಸುವಂತೆ ಕೋರಿತ್ತು. ಇದಕ್ಕೆ ಬ್ರಿಟನ್ ಸಕಾರತ್ಮಕ ಪ್ರತಿಕ್ರಿಯೆ ನೀಡಿದೆ ಎನ್ನಲಾಗಿದೆ.[ಯುಪಿಎ, ಎನ್ ಡಿಎ ಪಾಲಿಗೆ ನಾನು ಫುಟ್ಬಾಲ್ ಆಗಿದ್ದೇನೆ: ಮಲ್ಯ ವಿಷಾದ]












Click it and Unblock the Notifications