ಆಧಾರ್ ಕುರಿತ ವದಂತಿಯನ್ನು ಸಾರಾಸಗಟು ತಳ್ಳಿಹಾಕಿದ UIDAI

ಪತ್ರಿಕೆಯೊಂದರಲ್ಲಿ ಇತ್ತೀಚೆಗೆ ಪ್ರಕಟವಾಗಿದ್ದ ಆಧಾರ್ ಕುರಿತ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಯುಐಡಿಎಐ(Unique Identification Authority of India) ಇಂಥ ವದಂತಿಗಳಿಗೆ ಯಾವುದೇ ಕಾರಣಕ್ಕೂ ಕಿವಿಕೊಡಬೇಡಿ ಎಂದಿದೆ.

"ಕೇವಲ 500 ರೂ ನೀಡಿದರೆ ಹತ್ತು ನಿಮಿಷಗಳಲ್ಲಿ ಶತಕೋಟಿ ಆಧಾರ್ ವಿವರಗಳನ್ನು ಪಡೆಯಬಹುದು" ಎಂದು ಇತ್ತೀಚೆಗೆ ಪತ್ರಿಕೆಯೊಂದು ವರದಿ ಮಾಡಿತ್ತು. ಇದರಿಂದಾಗಿ ಖಾಸಗಿ ಮಾಹಿತಿಗಳು ಸೋರಿಕೆಯಾಗುತ್ತವೆ ಎಂಬ ಆತಂಕ ಜನರನ್ನು ಕಾಡಿತ್ತು. ಆದರೆ ಈ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿದ ಆಧಾರ್ ಅಥಾರಿಟಿ, ಇದು ಜನರನ್ನು ಹಾದಿತಪ್ಪಿಸುವಂಥ ವರದಿಯಾಗಿದೆ ಎಂದಿದೆ.

UIDAI rejects media report on getting Aadhaar data in minutes

ಆಧಾರದ ಡೆಟಾ ಮತ್ತು ಬೆರಳಚ್ಚುಗಳ ಮಾಹಿತಿ ಅತ್ಯಂತ ಸುರಕ್ಷಿತವಾಗಿದ್ದು, ಇದು ಯಾವ ಕಾರಣಕ್ಕೂ ಸೋರಿಕೆಯಾಗಿಲ್ಲ. ಸೋರಿಕೆ ಮಾಡುವುದಕ್ಕೆ ಸಾಧ್ಯವೂ ಇಲ್ಲ. ಸಾರ್ವಜನಿಕರು ಈ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂದು ಅದು ಭರವಸೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+