ಆಧಾರ್ ಬಳಸಿ ನಕಲಿ ಖಾತೆ ತೆರೆದರೆ ಬ್ಯಾಂಕ್‌ಗಳೇ ಹೊಣೆ ಎಂದ ಪ್ರಾಧಿಕಾರ
ಬೆಂಗಳೂರು, ಆಗಸ್ಟ್ 23: ಗ್ರಾಹಕರ ಆಧಾರ್ ಪ್ರತಿ ಅಥವಾ ಜೆರಾಕ್ಸ್ ಪ್ರತಿಯನ್ನು ಬಳಸಿ ನಕಲಿ ಬ್ಯಾಂಕ್ ಖಾತೆಯನ್ನು ತೆರೆದರೆ ಅದಕ್ಕೆ ಬ್ಯಾಂಕ್‌ಗಳೇ ಹೊಣೆಯಾಗುತ್ತದೆ ಎಂದು ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ(ಯುಐಡಿಎಐ) ಹೇಳಿದೆ.
ಗ್ರಾಹಕರ ಆಧಾರ್ ಪ್ರತಿಯನ್ನು ಬಳಸಿ ನಕಲಿ ಖಾತೆ ಹೊಂದಲು ಯಾರಿಗೂ ಸಾಧ್ಯವಿಲ್ಲ, ಒಂದೊಮ್ಮೆ ಆ ರೀತಿಯಾದರೆ ಅದಕ್ಕೆ ಬ್ಯಾಂಕ್‌ಗಳೇ ನೇರ ಹೊಣೆ ಎಂದು ಪ್ರಾಧಿಕಾರ ಹೇಳಿದೆ.
ಆಧಾರ್ ಪ್ರತಿಯೊಂದನ್ನೇ ಬ್ಯಾಂಕ್‌ಗಳು ಗ್ರಾಹಕರ ಖಾತೆಗಳನ್ನು ತೆರೆಯಬಾರದು, ಗ್ರಾಹಕರ ಬಯೋಮೆಟ್ರಿಕ್, ಒಟಿಪಿ ದೃಢೀಕರಿಸಿಕೊಳ್ಳದೆ ಖಾತೆ ತೆರೆಯಲು ಅವಕಾಶ ನೀಡಿದರೆ ಆಗುವ ನಷ್ಟಗಳಿಗೆ ಬ್ಯಾಂಕ್‌ಗಳು ಹೊಣೆಯಾಗಲಿದೆ.

ಪಿಎಂಎಲ್ ನೀತಿ ಹಾಗೂ ಆರ್‌ಬಿಐ ಸುತ್ತೋಲೆ ಪ್ರಕಾರ ಬ್ಯಾಂಕ್ ಖಾತೆ ತೆರೆಯಲು ಗ್ರಾಹಕರ ಬಯೋಮೆಟ್ರಿಕ್ ಅಥವಾ ಒಟಿಪಿ ಅಗತ್ಯವಿದೆ. ಒಂದು ವೇಳೆ ಇದನ್ನು ಪಾಲಿಸದೇ ಖಾತೆ ತೆರೆಯಲು ಅವಕಾಶ ನೀಡಿದರೆ ಅದು ಬ್ಯಾಂಕ್‌ನ ಜವಾಬ್ದಾರಿಯಾಗಿರುತ್ತದೆ. ಆಧಾರ್ ಹೊಂದಿರುವ ವ್ಯಕ್ತಿಯನ್ನು ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ ಮಾಡುವಹಾಗಿಲ್ಲ.












Click it and Unblock the Notifications