ದೇಶದ 20 ವಿಶ್ವವಿದ್ಯಾಲಯಗಳನ್ನು 'ನಕಲಿ' ಎಂದು ಘೋಷಿಸಿದ ಯುಜಿಸಿ: ಕರ್ನಾಟಕದಲ್ಲಿ ಯಾವುದು ತಿಳಿಯಿರಿ
ನವದೆಹಲಿ, ಆಗಸ್ಟ್ 02: ದೇಶದ 20 ವಿಶ್ವವಿದ್ಯಾಲಯಗಳನ್ನು ನಕಲಿ ಎಂದು ಯುಜಿಸಿ ಘೋಷಿಸಿದೆ. ಇಂತಹ ವಿದ್ಯಾಲಯಗಳು ಪದವಿ ನೀಡಲು ಯಾವುದೇ ಅಧಿಕಾರ ಹೊಂದಿಲ್ಲವೆಂದು ಯುಜಿಸಿ ಹೇಳಿದೆ.
ಇಪ್ಪತ್ತು ವಿಶ್ವವಿದ್ಯಾಲಯಗಳ ಪೈಕಿ ಎಂಟು ವಿಶ್ವವಿದ್ಯಾಲಯಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿವೆ. ಇವುಗಳು ಯಾವುದೇ ಪದವಿಯನ್ನು ನೀಡಲು ಅಧಿಕಾರ ಹೊಂದಿಲ್ಲ. ವಿದ್ಯಾರ್ಥಿಗಳು ಈ ಕುರಿತು ತಿಳಿಯುವುದು ಅಗತ್ಯವಾಗಿದೆ ಎಂದು ತಿಳಿಸಿದೆ.

ಯುಜಿಸಿ ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿ ಹಲವಾರು ಸಂಸ್ಥೆಗಳು ಪದವಿಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ವಿಶ್ವವಿದ್ಯಾಲಯಗಳು ನೀಡುವ ಪದವಿಗಳು ಉನ್ನತ ಶಿಕ್ಷಣ ಅಥವಾ ಉದ್ಯೋಗದ ಉದ್ದೇಶಕ್ಕಾಗಿ ಮಾನ್ಯತೆ ಹೊಂದಿರುವುದಿಲ್ಲ. ಈ ವಿಶ್ವವಿದ್ಯಾಲಯಗಳಿಗೆ ಯಾವುದೇ ಪದವಿ ನೀಡಲು ಅಧಿಕಾರವಿಲ್ಲ ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ.
ದೆಹಲಿಯು ಎಂಟು ನಕಲಿ ವಿಶ್ವವಿದ್ಯಾಲಯಗಳು
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಂಡ್ ಫಿಸಿಕಲ್ ಹೆಲ್ತ್ ಸೈನ್ಸಸ್
ವಾಣಿಜ್ಯ ವಿಶ್ವವಿದ್ಯಾಲಯ ಲಿಮಿಟೆಡ್, ದರಿಯಾಗಂಜ್
ಯುನೈಟೆಡ್ ನೇಷನ್ಸ್ ವಿಶ್ವವಿದ್ಯಾಲಯ
ವೆಕೇಷನಲ್ ವಿಶ್ವವಿದ್ಯಾಲಯ
ಎಡಿಆರ್-ಸೆಂಟ್ರಲ್ ಜುರಿಡಿಕಲ್ ವಿಶ್ವವಿದ್ಯಾಲಯ
ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಸ್ಥೆ
ವಿಶ್ವಕರ್ಮ ಸೆಲ್ಫ್ ಎಂಪ್ಲಾಯ್‌ಮೆಂಟ್ ಒಪನ್ ವಿಶ್ವವಿದ್ಯಾಲಯ
ಆಧ್ಯಾತ್ಮಿಕ್ ವಿಶ್ವವಿದ್ಯಾಲಯ

ಉತ್ತರ ಪ್ರದೇಶದ ನಾಲ್ಕು ನಕಲಿ ವಿಶ್ವವಿದ್ಯಾಲಯಗಳು
ಗಾಂಧಿ ಹಿಂದಿ ವಿದ್ಯಾಪೀಠ;
ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ;
ನೇತಾಜಿ ಸುಭಾಷ್ ಚಂದ್ರ ಬೋಸ್ ವಿಶ್ವವಿದ್ಯಾಲಯ (ಮುಕ್ತ ವಿಶ್ವವಿದ್ಯಾಲಯ)
ಭಾರತೀಯ ಶಿಕ್ಷಾ ಪರಿಷತ್ತು
ಕರ್ನಾಟಕದ ನಕಲಿ ವಿಶ್ವವಿದ್ಯಾಲಯ
ಬಡಗನ್ವಿ ಸರ್ಕಾರ್ ವಿಶ್ವವಿದ್ಯಾಲಯ ಕರ್ನಾಟಕ
ಇದೇ ರೀತಿಯಾಗಿ ಮಹಾರಾಷ್ಟ್ರ, ಪುದುಚೇರಿ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿಯೂ ನಕಲಿ ವಿಶ್ವವಿದ್ಯಾಲಯಗಳಿವೆ ಎಂದು ಯುಜಿಸಿ ಹೇಳಿದೆ.












Click it and Unblock the Notifications