ರಾಜಪಥದಲ್ಲಿ ಕವಾಯಿತು ನಡೆಸಿದ ಯುಎಇ ಸೇನಾ ತುಕಡಿ

ವಿದೇಶಿ ಸೇನಾ ತುಕಡಿಯೊಂದು ಭಾರತದ ಗಣರಾಜ್ಯೋತ್ಸವ ದಿನಾಚರಣೆ ವೇಳೆ ಹೀಗೆ ಪರೇಡ್ ಮಾಡುತ್ತಿರುವುದು ಹೊಸತೇನಲ್ಲ.ಕಳೆದ ವರ್ಷದ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ನ ಸೇನಾ ತುಕಡಿಯೊಂದು ಪರೇಡ್ ನಡೆಸಿತ್ತು.

ನವದೆಹಲಿ, ಜನವರಿ 26: ರಾಜಪಥದಲ್ಲಿ ಗುರುವಾರ ಬೆಳಗ್ಗೆ ಭಾರತದ 68ನೇ ಗಣರಾಜ್ಯ ಸಮಾರಂಭದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೇನೆಯ ಭೂ, ವಾಯು ಹಾಗೂ ನೌಕಾ ಪಡೆಗಳ ತುಕಡಿಗಳು ಪರೇಡ್ ನಡೆಸಿ ಗಮನ ಸೆಳೆದವು.

ಈ ಸಂದರ್ಭದಲ್ಲಿ ಭಾರತೀಯ ಸೇನೆಯ ನಾನಾ ಪಡೆಗಳು ಪಥ ಸಂಚಲನ ನಡೆಸಿ ವೇದಿಕೆಯ ಮೇಲಿದ್ದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಈ ಬಾರಿಯ ಗಣರಾಜ್ಯೋತ್ಸವದ ಅತಿಥಿ, ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಕುಮಾರ್ ಶೇಖ್ ಮೊಹಮ್ಮದ್ ಅವರಿಗೆ ಗೌರವ ವಂದನೆ ಸಲ್ಲಿಸಿದವು.

UAE troops take part in Republic day parade

ಯುಎಇ ಸೇನೆಯು ಪಥ ಸಂಚಲನ ನಡೆಸಲು ಬಂದಾಗ, ಆ ದೇಶದ ರಾಜಕುಮಾರ ಹಾಗೂ ಅಲ್ಲಿನ ಅಧಿಕಾರಿಗಳು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಬೆಂಬಲ ಸೂಚಿಸಿದರು.

ಅಂದಹಾಗೆ, ವಿದೇಶಿ ಸೇನಾ ತುಕಡಿಯೊಂದು ಭಾರತದ ಗಣರಾಜ್ಯೋತ್ಸವ ದಿನಾಚರಣೆ ವೇಳೆ ಹೀಗೆ ಪರೇಡ್ ಮಾಡುತ್ತಿರುವುದು ಹೊಸತೇನಲ್ಲ.ಕಳೆದ ವರ್ಷದ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ನ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಅವರು ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದಾಗ ಫ್ರಾನ್ಸ್ ಸರ್ಕಾರ ಕೂಡ ತನ್ನ ಸೇನಾ ತುಕಡಿಯನ್ನು ಭಾರತಕ್ಕೆ ಪರೇಡ್ ಗಾಗಿ ಕಳುಹಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+