ಕಾಸರಗೋಡು ಮೂಲದ ರಾಜಕಾರಣಿ ದುಬೈನಲ್ಲಿ ದುರಂತ ಅಂತ್ಯ

Subscribe to Oneindia Kannada

ದುಬೈ/ಕಾಸರಗೋಡು, ಆಗಸ್ಟ್ 17: ಚಲಿಸುತ್ತಿದ್ದ ಕಾರಿನಿಂದ ಬಿದ್ದು, ಕೇರಳದ ಕಾಸರಗೋಡು ಮೂಲದ ಮಹಿಳಾ ರಾಜಕಾರಣಿಯೊಬ್ಬರು ದುಬೈನಲ್ಲಿ ಸಾವನ್ನಪ್ಪಿದ್ದಾರೆ.

ಕಾಸರಗೋಡು ಪುರಸಭೆಯಲ್ಲಿ ಬಿ.ಜೆ.ಪಿ. ಕೌನ್ಸಿಲರ್ ಆಗಿದ್ದ 40 ವರ್ಷದ ಸುನಿತಾ ಪ್ರಶಾಂತ್ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಸುನಿತಾ ಪ್ರಶಾಂತ್ 2011 ರಲ್ಲಿ ಕೇರಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಉದುಮಾ ಕ್ಷೇತ್ರದಿಂದ ಅಭ್ಯರ್ಥಿಯಾಗಿಯೂ ಕಣಕ್ಕಿಳಿದಿದ್ದರು.

ಕಾಸರಗೋಡಿನ ಅಡಕ್ಕುತ್ ವಯಾಲ್ ಬೀಚ್ ನಿವಾಸಿಯಾಗಿದ್ದ ಸುನಿತಾ ಕುಟುಂಬ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿತ್ತು. ಈ ಕಾರಣಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ಶಾರ್ಜಾಕ್ಕೆ ತೆರಳಿ ಬ್ಯೂಟಿ ಸಲೂನ್ ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 5 ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದರು.

ಗುರುವಾರ ಸುನೀತಾ ಬ್ಯೂಟಿ ಸಲೂನ್ ಮಾಲಿಕರ ಜತೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಚಲಿಸುತ್ತಿದ್ದ ಕಾರಿನ ಡೋರ್ ಓಪನ್ ಆಗಿ ಸುನಿತಾ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಗ ಕಾರ್ ಚಾಲನೆ ಮಾಡುತ್ತಿದ್ದ ಮಾಲಿಕರು ತಿರುಗಿ ನೋಡಿದ್ದು, ನಿಯಂತ್ರಣ ತಪ್ಪಿದ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ.

ಸುನಿತಾ ಪತಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಸುನಿತಾ ಮೃತದೇಹವನ್ನು ಕೇರಳಕ್ಕೆ ತರಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Kerala politician Sunitha Prashanth was killed in an accident after falling from a moving car on Dhaid Road in Sharjah. The Khaleej Times quoted sources as saying that Sunitha Prashanth (40) from Kerala was killed in the incident after she hit her head on a lamppost after falling off the car.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ