ಕೇರಳದಲ್ಲಿ ಕಾಣಿಸಿಕೊಂಡ ನಿಗೂಢ ಜ್ವರ: ವೈದ್ಯೆ ಸೇರಿ ಇಬ್ಬರು ಮಹಿಳೆಯರ ಸಾವು- ನಿಪಾ ಸಂದರ್ಭದಲ್ಲೇ ಸೃಷ್ಟಿಯಾದ ಮತ್ತೊಂದು ಆತಂಕ
ತಿರುವರೂರು ( ಕೇರಳ ) ಸೆಪ್ಟೆಂಬರ್ 15: ತಿರುವರೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ವೈದ್ಯೆ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ. ನಿಗೂಢ ಜ್ವರದಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಆಕೆಯ ಸಾವಿನ ಕಾರಣವನ್ನು ತಿಳಿಯುವ ನಿಟ್ಟಿನಲ್ಲಿ ವೈದ್ಯರು ಕೆಲಸ ಮಾಡುತ್ತಿದ್ದಾರೆ.
ನಿಗೂಢ ಜ್ವರದಿಂದ ಸಾವಿಗೀಡಾಗಿರುವ ವೈದ್ಯೆಗೆ ಸಂಬಂಧಿಸಿದ ವೈದ್ಯಕೀಯ ವರದಿಗಳು ಮತ್ತು ಮಾದರಿಗಳನ್ನು ಚೆನ್ನೈಗೆ ಕಳುಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ಕೇರಳ ಮೂಲದ ಸಿಂಧು ಎಂದು ಗುರುತಿಸಲಾಗಿದ್ದು, ತಿರುವರೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ್ದರು. ಅದೇ ತಿರುವರೂರು ಸರ್ಕಾರಿ ಆಸ್ಪತ್ರೆಯಲ್ಲಿ ಇಂಟರ್ನಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ ಕೆಲವು ದಿನಗಳಿಂದ ಶೀತ ಮತ್ತು ಜ್ವರದಿಂದ ವೈದ್ಯೆ ಬಳಲುತ್ತಿದ್ದರು. ಚಿಕಿತ್ಸೆಯ ಹೊರತಾಗಿಯೂ, ಆಕೆಗೆ ಜ್ವರ ಕಡಿಮೆಯಾಗಲಿಲ್ಲ ಎಂದು ತಿಳಿದುಬಂದಿದೆ. ಆಕೆಯ ಉಷ್ಣತೆಯು ಹೆಚ್ಚುತ್ತಲೇ ಇತ್ತು. ನಂತರ ಆಕೆಯನ್ನು ಉನ್ನತ ಚಿಕಿತ್ಸೆಗಾಗಿ ಗುರುವಾರ ತಿರುವರೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವೈದ್ಯಾಧಿಕಾರಿ ಹೇಳಿದ್ದಾರೆ.
ಸಂತ್ರಸ್ತೆಯ ಡೆಂಗ್ಯೂ ಮತ್ತು ಟೈಫಾಯಿಡ್ ಪರೀಕ್ಷೆಯು ನಕಾರಾತ್ಮಕವಾಗಿದೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲಾ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ನಿಧನರಾದ್ದಾರೆ. ಜ್ವರದಿಂದ ವೈದ್ಯೆಯೊಬ್ಬರು ಸಾವನ್ನಪ್ಪಿರುವುದು ಆಸ್ಪತ್ರೆಯಲ್ಲಿ ತಲ್ಲಣ ಸೃಷ್ಟಿಸಿದೆ.
ಅದೇ ರೀತಿ ಇಂದು ಬೆಳಗ್ಗೆ ನೆರೆಯ ತಿರುಚ್ಚಿ ಜಿಲ್ಲೆಯಲ್ಲಿ ಕನಗವಲ್ಲಿ ಎಂಬ 38 ವರ್ಷದ ಮಹಿಳೆ ಜ್ವರದಿಂದ ಸಾವನ್ನಪ್ಪಿದ್ದಾರೆ. ಆಕೆಗೆ ಡೆಂಗ್ಯೂ ಮತ್ತು ಟೈಫಾಯಿಡ್ ಪರೀಕ್ಷೆ ನೆಗೆಟಿವ್ ಬಂದಿದೆ. ಆಕೆಯೂ ನಿಗೂಢ ಜ್ವರಕ್ಕೆ ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ.












Click it and Unblock the Notifications