ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಮತ್ತು ದಕ್ಷಿಣ ಕೊರಿಯಾ ಬಿಕ್ಕಟ್ಟು; ಗುಂಡು ಹಾರಿಸಿದ ಉಭಯ ರಾಷ್ಟ್ರಗಳು

|
Google Oneindia Kannada News

ಸಿಯೋಲ್, ಅ.24 : ಉತ್ತರ ಮತ್ತು ದಕ್ಷಿಣ ಕೊರಿಯಾಗಳು ಸೋಮವಾರ ಪಶ್ಚಿಮ ಕರಾವಳಿಯಲ್ಲಿ ಗುಂಡಿನ ದಾಳಿ ನಡೆಸಿವೆ. ದಕ್ಷಿಣ ಕೊರಿಯಾದ ಸೇನೆ ಉತ್ತರ ಕೊರಿಯಾದ ಹಡಗಿನ ಮೇಲೆ ಗುಂಡುಗಳನ್ನು ಹಾರಿಸಿದೆ. ಹಡಗು ವಿವಾದಿತ ಕಡಲ ಗಡಿಯನ್ನು ದಾಟಿದ್ದು, ಗುಂಡಿನ ದಾಳಿಗೆ ಕಾರಣ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಉತ್ತರ ಕೊರಿಯಾದ ವ್ಯಾಪಾರಿ ಹಡಗು ಮುಂಜಾನೆ 3:42 ಕ್ಕೆ ದಕ್ಷಿಣದ ಕಡೆಗೆ ತೆರಳಿದ್ದು, ನೌಕಾಪಡೆ ಎಚ್ಚರಿಕೆಯ ಗುಂಡುಗಳನ್ನು ಹಾರಿಸಿದ ನಂತರ ಉತ್ತರದ ಕಡೆಗೆ ವಾಪಸ್ ಹೊರಟಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಹೇಳಿದ್ದಾರೆ.

ಬ್ರಿಟನ್‌ಗೆ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್‌?ಬ್ರಿಟನ್‌ಗೆ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್‌?

ಪ್ಯೊಂಗ್ಯಾಂಗ್‌ನ ಕೊರಿಯನ್ ಪೀಪಲ್ಸ್ ಆರ್ಮಿಯು ದಕ್ಷಿಣ ಕೊರಿಯಾದ ಸೇನಾ ನೌಕೆಯು ವಾಸ್ತವಿಕ ಗಡಿಯನ್ನು 2.5 ರಿಂದ 5 ಕಿಲೋಮೀಟರ್‌ಗಳಷ್ಟು (1.5 ರಿಂದ 3 ಮೈಲಿಗಳು) ಆಕ್ರಮಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ಹೀಗಾಗಿ ದೇಶದ ಪಶ್ಚಿಮ ಕರಾವಳಿಯಿಂದ 10 ಎಚ್ಚರಿಕೆಯ ಗುಂಡುಗಳನ್ನು ಹಾರಿಸಲಾಗಿದೆ ಎಂದಿದ್ದಾರೆ.

Two Koreas exchange warning shots near maritime border

"ಪಶ್ಚಿಮ ಮುಂಭಾಗದಲ್ಲಿರುವ ಕರಾವಳಿ ರಕ್ಷಣಾ ಘಟಕಗಳು 5:15 ಕ್ಕೆ ಶತ್ರುಗಳ ಚಲನೆಯನ್ನು ಪತ್ತೆಹಚ್ಚಿದ ನಂತರ 10 ಶೆಲ್‌ಗಳನ್ನು ಹಾರಿಸುವ ಮೂಲಕ ಶತ್ರು ಯುದ್ಧನೌಕೆಯನ್ನು ಹೊರಹಾಕಲು ಕ್ರಮವನ್ನು ತೆಗೆದುಕೊಂಡಿತು" ಎಂದು ಕೊರಿಯನ್ ಪೀಪಲ್ಸ್ ಆರ್ಮಿ (KPA) ಜನರಲ್ ಸ್ಟಾಫ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಡಲ ಗಡಿಯನ್ನು ಫ್ಲ್ಯಾಷ್‌ಪಾಯಿಂಟ್ ಎಂದು ಪರಿಗಣಿಸಲಾಗಿದ್ದು, ವರ್ಷಗಳಲ್ಲಿ ಎರಡು ಕೊರಿಯಾಗಳ ನಡುವೆ ಹಲವಾರು ಬಾರಿ ಘರ್ಷಣೆಗಳು ನಡೆದಿವೆ. 1990 ರ ದಶಕದಿಂದಲೂ, ಪ್ಯೊಂಗ್ಯಾಂಗ್ 1950-53ರ ಕೊರಿಯನ್ ಯುದ್ಧದ ಕೊನೆಯಲ್ಲಿ ರಚಿಸಲಾದ ಉತ್ತರ ಮಿತಿ ರೇಖೆ (NLL) ಯಲ್ಲಿ ವಿವಾದವಿದ್ದು, ಹಲವು ಘರ್ಷಣೆಗಳಿಗೆ ಕಾರಣವಾಗಿದೆ.

ಇತ್ತೀಚಿನ ವಾರಗಳಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಉತ್ತರ ಕೊರಿಯಾವು ಹಲವಾರು ಕ್ಷಿಪಣಿ ಉಡಾವಣೆಗಳು ಮತ್ತು ಫಿರಂಗಿ ದಾಳಿಗಳನ್ನು ನಡೆಸುತ್ತಿದೆ. ಅದು ದಕ್ಷಿಣ ಕೊರಿಯಾ ಮತ್ತು ಜಪಾನ್ ಅನ್ನು ಕೆರಳಿಸಿದೆ.

Two Koreas exchange warning shots near maritime border

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ತನ್ನ ದೇಶದ ಏಳನೇ ಪರಮಾಣು ಪರೀಕ್ಷೆಯನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಪ್ಯೊಂಗ್ಯಾಂಗ್ ಇತ್ತೀಚೆಗೆ ತನ್ನ ಮಿಲಿಟರಿ ಅಭ್ಯಾಸವನ್ನು ಹೆಚ್ಚಿಸಿದೆ.

English summary
North Korea and South Korea fired warning shots at west coast sea border amid tensions. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X