ನಿತೀಶ್ ಮುಂದಿನ ರಕ್ಷಣಾ ಸಚಿವರಾಗಲಿː ಟ್ವಿಟ್ಟಿಗರ ಆಶಯ

Posted By:
Subscribe to Oneindia Kannada

ಬೆಂಗಳೂರು, ಜುಲೈ 26: ಜೆಡಿಯು-ಆರ್ ಜೆಡಿ- ಕಾಂಗ್ರೆಸ್ ಮಹಾಮೈತ್ರಿಕೂಟದಿಂದ ಬಹುದೊಡ್ಡ ವಿಕೆಟ್ ಪತನವಾಗಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಮೈತ್ರಿಕೂಟಕ್ಕೆ ಗುಡ್ ಬೈ ಹೇಳಿ, ಸಿಎಂ ಸ್ಥಾನವನ್ನು ನಿತೀಶ್ ಕುಮಾರ್ ತ್ಯಜಿಸಿದ್ದಾರೆ.

ಭಿನ್ನಾಭಿಪ್ರಾಯ ಮರೆತು ಕೈಜೋಡಿಸೋಣ, ನಿತೀಶ್ ಗೆ ಮೋದಿ ಕರೆ

ಈ ಮೂಲಕ ಬಿಜೆಪಿ ಭಕ್ತರ ಪಾಲಿಗೆ ನಿತೀಶ್ ಮಹಾನ್ ತ್ಯಾಗಿಯಂತೆ ಕಾಣಿಸಿಕೊಂಡಿದ್ದರೆ, ಮತ್ತೆ ಕೆಲವರಿಗೆ ಅವಕಾಶವಾದಿಯಂತೆ ಕಂಡಿದ್ದರೆ, ಟ್ವಿಟ್ಟರ್ ನಲ್ಲಂತೂ ಪರ ವಿರೋಧ ಟ್ವೀಟ್ ಗಳು ಹರಿದಾಡುತ್ತಾ #nitishkumar ಟ್ಯಾಗನ್ನು ನಂ.1 ಟ್ರೆಂಡಿಂಗ್ ಮಾಡಿವೆ.

ಅದರಲ್ಲೂ ನಿತೀಶ್ ಕುಮಾರ್ ರಾಜೀನಾಮೆ ಬಗ್ಗೆ ಪ್ರಧಾನಿ ಮೋದಿ ಅವರು ಮೆಚ್ಚುಗೆಯ ಟ್ವೀಟ್ ಮಾಡಿದ್ದೇ ತಡ, ಸಾರ್ವಜನಿಕರು ನಾ ಮುಂದು ತಾ ಮುಂದು ಎಂದು ನಿತೀಶ್ ಅವರನ್ನು ಹೊಗಳಲು ಆರಂಭಿಸಿದ್ದಾರೆ. ಬಹುಶಃ 'ಸಾರಾಯಿ ಮುಕ್ತ ಬಿಹಾರ' ಮಾಡಲು ಹೊರಟಾಗಲೂ ಇಷ್ಟು ಪ್ರಶಂಸೆ ಬಂದಿರಲಿಕ್ಕಿಲ್ಲ.

ನಿತೀಶ್ ಕುಮಾರ್ ಮುಂದೆ ಏನು ಮಾಡಬಹುದು? ರಾಜಕೀಯ ನಡೆ ಏನು? ಮತ್ತೆ ಎನ್ಡಿಎಯತ್ತ ಮುಖ ಮಾಡುತ್ತಾರಾ? ಲಾಲೂ ಜತೆ ಮತ್ತೆ ಚಹಾ ಸೇವಿಸುತ್ತಾರಾ? ಬಿಜೆಪಿ ಬಾಹ್ಯ ಬೆಂಬಲ ಪಡೆಯುತ್ತಾರಾ? ಎಂಬ ಸೀರಿಯಸ್ ಚರ್ಚೆ ಜತೆಗೆ ಹಾಸ್ಯದ ಸ್ಪರ್ಶವಿರುವ ಮೀಮ್ಸ್, ಟ್ರಾಲ್ಸ್, ಜೋಕ್ಸ್ ವುಳ್ಳ ಟ್ವೀಟ್ ಗಳು ಬರುತ್ತಿವೆ.. ಆಯ್ದ ಕೆಲವು ಟ್ವೀಟ್ಸ್ ಇಲ್ಲಿವೆ...

ಬಹುಮತಕ್ಕೆ ಬೇಕು 122 ಸ್ಥಾನಗಳು

ಬಹುಮತಕ್ಕೆ ಬೇಕು 122 ಸ್ಥಾನಗಳು

ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ 71 ಸೀಟುಗಳನ್ನು ಪಡೆದಿದ್ದರೆ, ಲಾಲು ಪ್ರಸಾದ್ ಅವರ ಪಕ್ಷ 80 ಸ್ಥಾನಗಳನ್ನು ಹೊಂದಿವೆ. ಅಲ್ಲಿ ಒಟ್ಟು ಸ್ಥಾನಗಳ ಸಂಖ್ಯೆ 243 ಇದ್ದು, ಸರ್ಕಾರ ರಚಿಸಲು ಬೇಕಾದ ಬಹುಮತಕ್ಕೆ 122 ಸ್ಥಾನಗಳು ಬೇಕಿವೆ. ಈಗ ಲಾಲೂ ಹಾಗೂ ನಿತೀಶ್ ಇಬ್ಬರೂ ಕೂಡಾ ಮತ್ತೊಮ್ಮೆ ಸರ್ಕಾರ ರಚಿಸಲು ಯತ್ನಿಸಬಹುದಾಗಿದೆ. ಹೀಗಾಗಿ, ಮುಂದಿನ ಸಿಎಂ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿದೆ.

ರಕ್ಷಣಾ ಸಚಿವ ಸ್ಥಾನ ಸಿಗುವುದೇ?

ನಿತೀಶ್ ಕುಮಾರ್ ಅವರಿಗೆ ಕೇಂದ್ರದ ರಕ್ಷಣಾ ಖಾತೆ ಸಚಿವ ಸ್ಥಾನ ನೀಡಿ, ಬಿಹಾರದಲ್ಲಿ ಜೆಡಿಯು- ಬಿಜೆಪಿ ಮೈತ್ರಿ ಸರ್ಕಾರ ಸ್ಥಾಪನೆಯಾಗುವ ನಿರೀಕ್ಷೆಗಳಿವೆ.

2019ಕ್ಕೆ ಸಿದ್ಧತೆ

ಇದೆಲ್ಲವೂ ಅಮಿತ್ ಶಾ ತಂತ್ರ, 2019ರ ಮಹಾ ಚುನಾವಣೆಗೆ ಸಿದ್ಧತೆ ಅಷ್ಟೆ. ಬಿಹಾರದಲ್ಲಿ ಐದು ಬಾರಿ ಸಿಎಂ ಆಗಿದ್ದ ನಿತೀಶ್ ಅವರ ನಡೆಯ ಹಿಂದೆ ಬಿಜೆಪಿಯ ದೂರದೃಷ್ಟಿ ಇದೆ.

ಬಿಜೆಪಿ ಸೇರಿಬಿಡಿ

ಸುಮ್ಮನೆ ಯಾಕೆ ಎಲ್ಲರಿಗೂ ಟೆನ್ಶನ್, ಬಿಜೆಪಿ ಸೇರಿಬಿಡಿ. ಎನ್ಡಿಎಗೆ ಮತ್ತೆ ಮರಳಿ ಎಂದು ಟ್ವಿಟ್ಟಿಗರ ಹಾರೈಕೆ.

ಮೋದಿ, ಅಮಿತ್ ರಿಂದ ಸ್ವಾಗತ

ರಾಜೀನಾಮೆ ನೀಡಿ ಹೊರ ಬಂದ ಹೀರೋ ನಿತೀಶ್ ಕುಮಾರ್ ಅವರಿಗೆ ಮೋದಿ ಹಾಗೂ ಅಮಿತ್ ಶಾ ರಿಂದ ಸಿಕ್ಕ ಸ್ವಾಗತ ಹೀಗಿತ್ತು.

ಕೇಜ್ರಿವಾಲ್ ಪ್ರತಿಕ್ರಿಯೆ ಏನು?

ನಿತೀಶ್ ಕುಮಾರ್ ರಾಜೀನಾಮೆ ಬಗ್ಗೆ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ಏನು? ನಿತೀಶ್ ಹೊಗಳಿದ್ದ ಹಳೆ ಟ್ವೀಟ್ ಡಿಲೀಟ್ ಮಾಡುತ್ತಿರಬೇಕು.

ತೇಜಸ್ವಿ ಯಾದವ್

ನಿತೀಶ್ ಕುಮಾರ್ ರಾಜೀನಾಮೆ: ಹಾಗಾದ್ರೆ ನಾನು ಸಿಎಂ ಆಗ್ತೀನಿ ಅಂದ್ನಂತೆ ತೇಜಸ್ವಿ ಯಾದವ್, ಮೊದಲು ಕ್ಲಾಸ್ 12 ಪರೀಕ್ಷೆ ಪಾಸಾಗು ಅಂದ್ರಂತೆ ಗವರ್ನರ್.

Siddaramaiah Gets a Controversial Statement From Nalin Kumar Kateel | Oneindia Kannada

ತಮಿಳುನಾಡು ಕಲಿಯಬೇಕಿದೆ

ಭ್ರಷ್ಟಾಚಾರದ ವಿರುದ್ಧ ನಿತೀಶ್ ಇಟ್ಟಿರುವ ಈ ದಿಟ್ಟ ಹೆಜ್ಜೆ ನೋಡಿ ತಮಿಳುನಾಡಿನ ರಾಜಕಾರಣಿಗಳು ಕಲಿಯುವುದು ಬಹಳಷ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Twitter is abuzz with reactions, jokes as Nitish Kumar quits as Bihar CM. Many praised his stand against corruption
Please Wait while comments are loading...