ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ವಿಶ್ವ ಜಲದಿನ: ಜೀವಜಲದ ಉಳಿವಿಗಾಗಿ ಸಂಕಲ್ಪ

|
Google Oneindia Kannada News

ನೀರು ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿ ಜೀವಿಯೂ ನೀರಿನಾಸರೆಯಿಲ್ಲದೆ ಬದುಕಲಾರದು. ಸಾಯುವ ಆ ಕೊನೆಯ ಕ್ಷಣದಲ್ಲೂ ಬಾಯಿಗೆ ಹನಿ ಗಂಗಾಜಲ ಬಿದ್ದರೆ ಸ್ವರ್ಗಪ್ರಾಪ್ತಿ ಎಂಬ ನಂಬಿಕೆ ಹಿಂದು ಸಂಪ್ರದಾಯದಲ್ಲಿ ಇಂದಿಗೂ ಇದೆ.

ಅಷ್ಟರ ಮಟ್ಟಿಗೆ ನೀರು ಜೀವಿಯ ಬದುಕಲ್ಲಿ ಮಹತ್ವದ ಸ್ಥಾನ ಪಡೆದಿದೆ. ಇಂದು ವಿಶ್ವ ಜಲ ದಿನ. ನೀರನ್ನು ಸಂರಕ್ಷಿಸುವ ಮತ್ತು ಮುಂದಿನ ಪೀಳಿಗೆಗಳಿಗೆ ಅದು ಉಳಿಯುವಂತೆ ಮಾಡುವ ಸಂಕಲ್ಪದೊಂದಿಗೆ ಪ್ರತಿ ವರ್ಷ ಮಾರ್ಚ್ 22 ಅನ್ನು ವಿಶ್ವ ಜಲದಿನವನ್ನಾಗಿ ಆಚರಿಸಲಾಗುತ್ತದೆ.

ವಿಶ್ವ ಜಲದಿನ: ದಾಹವನ್ನು ನೀಗಿಸುವ ಆ ಲೋಟವನ್ನು ತುಂಬಿಸೋಣವಿಶ್ವ ಜಲದಿನ: ದಾಹವನ್ನು ನೀಗಿಸುವ ಆ ಲೋಟವನ್ನು ತುಂಬಿಸೋಣ

ವಿಶ್ವ ಜಲದಿನದಂದು ನೀರನ್ನು ಸಂರಕ್ಷಿಸುವ ಮತ್ತು ಜಲಮೂಲಗಳನ್ನು ಜೋಪಾನವಾಗಿ ರಕ್ಷಿಸುವ ಸಂಕ್ಲಪದೊಂದಿಗೆ ಹಲವರು ಟ್ವೀಟ್ ಮಾಡಿದ್ದಾರೆ.

ಜಲಶಕ್ತಿಯ ಮಹತ್ವ ಸಾರಿವ ದಿನ

ವಿಶ್ವ ಜಲದಿನವು ಜಲಶಕ್ತಿಯ ಮಹತ್ವ ಮತ್ತು ಅದರ ಸಂರಕ್ಷಣೆಯಲ್ಲಿ ನಮ್ಮ ಪಾತ್ರವೇನು ಎಂಬುದನ್ನು ಅರಿವು ಮೂಡಿಸುವ ದಿನ. ಎಲ್ಲಿ ನೀರನ್ನು ಸಂರಿಕ್ಷಿಸಲಾಗುತ್ತದೆಯೋ ಆ ನಗರ, ಆ ಹಳ್ಳಿ, ಅಲ್ಲಿನ ರೈತರು ಉಪಯೋಗ ಪಡೆಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರತಿಹನಿಯೂ ಅಮೂಲ್ಯ

ಪ್ರತಿಹನಿಯೂ ಅಮೂಲ್ಯ

"ನೀರಿನ ಪ್ರತಿ ಹನಿಯೂ ಅಮೂಲ್ಯ" ಮಿತವಾಗಿ ಮತ್ತು ಜವಾಬ್ದಾರಿಯಿಂದ ಸದ್ಬಳಕೆ ಮಾಡಿಕೊಂಡು, ಸಂರಕ್ಷಿಸಬೇಕಾದ ಹೊಣೆ ನಮ್ಮ ಮೇಲಿದೆ. ಎಲ್ಲರೂ ಒಂದಾಗಿ ಪರಿಸರ ವ್ಯವಸ್ಥೆಯ ಮೂಲಾಧಾರವಾದ ನೀರಿನ ಹಿತ-ಮಿತ ಬಳಕೆಯತ್ತ ಜಾಗೃತಿ ಮೂಡಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಹಸಿರುಭೂಮಿ ಪ್ರತಿಷ್ಠಾನದಿಂದ ಕಲ್ಯಾಣಿಗಳಿಗೆ ಮರುಜೀವಹಸಿರುಭೂಮಿ ಪ್ರತಿಷ್ಠಾನದಿಂದ ಕಲ್ಯಾಣಿಗಳಿಗೆ ಮರುಜೀವ

ಮರುಕಳಿಸುತ್ತಿದೆ ಗದಗದ ಸುವರ್ಣಯುಗದ

ಗದಗದ ಸುರ್ಣಯುಗವನ್ನು ಮರುಸ್ಥಾಪಿಸುತ್ತಿದ್ದೇವೆ. ಗದಗದ ಕಾರ್ಯಕರ್ತರು ಇಲ್ಲಿನ ಜರೇ ಮರೆತುಬಿಟ್ಟಿದ್ದ ಕಲ್ಯಾಣಿಯೊಂದಕ್ಕೆ ಪುನರ್ಜನ್ಮ ನೀಡುತ್ತಿದ್ದಾರೆ. ಈ ಕಲ್ಯಾಣಿಯನ್ನು ಗದಗದ ಮಹಾನ್ ಕವಿ ಕುಮಾರವ್ಯಾಸ ಸಹ ಬಳಸಿದ್ದರಂತೆ! ಇಂಥ ಮಹಾನ್ ಇತಿಹಾಸ ಹೊಂದಿರುವ ಕಲ್ಯಾಣಿಯಲ್ಲಿ ಮತ್ತೆ ಒರತೆ ಒಸರುತ್ತಿದೆ, ಗತವೈಭವ ಮರುಕಳಿಸಿದೆ ಎಂದು ವಿಶ್ವ ಜಲದಿನಕ್ಕೆ ಶುಭಾಶಯ ಕೋರಿದ್ದಾರೆ ಚಕ್ರವರ್ತಿ ಸೂಲಿಬೆಲೆ.

Array

ನೀರಿಲ್ಲದೆ ಬದುಕಿಲ್ಲ

ನೀರಿಲ್ಲದೆ ಬದುಕಿಲ್ಲ. ನೀರನ್ನು ಸಂರಕ್ಷಿಸುವುದು ನಮ್ಮ ಹೊನೆ ಮಾತ್ರವಲ್ಲ, ಕರ್ತವ್ಯ ಸಹ. ಹೊಸ ನೀರಿನ ಮೂಲಗಳನ್ನು ಹುಡುಕುವುದು, ಸೃಷ್ಟಿಸುವುದು ಮತ್ತು ಅವನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಬಿಜೆಪಿ ರಾಷ್ಟ್ರಾಶ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಜೀವಜಲದ ಉಳಿವಿನ 'ಉನ್ನತ' ಕಾರ್ಯಕ್ಕೆ ನೃತ್ಯದ ಸಾಥ್!ಜೀವಜಲದ ಉಳಿವಿನ 'ಉನ್ನತ' ಕಾರ್ಯಕ್ಕೆ ನೃತ್ಯದ ಸಾಥ್!

ಅಮೃತವಿದ್ದಂತೆ ಈ ಜಲ

ಪ್ರಿಯ ನಾಗರಿಕರೇ, ಈ ನೀರು ಎಂಬುದು ಅಮೃತವಿದ್ದಂತೆ. ಇದನ್ನು ಉಳಿಸಲು, ಸಂರಕ್ಷಿಸಲು ನಾವು ಮಿತಿಮೀರಿ ಸಂಕಲ್ಪ ಮಾಡೋಣ. ನಮ್ಮ ನಾಳೆಗಾಗಿ ನೀರನ್ನು ಇಂದು ರಕ್ಷಿಸುವುದು ಮುಖ್ಯ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಟ್ವೀಟ್ ಮಾಡಿದ್ದಾರೆ.

English summary
World Water Day is an annual observance day on 22 March to highlight the importance of freshwater. It is also used to advocate for the sustainable management of freshwater resources. Here are some Twitter statements on world water day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X