ಕೊಚ್ಚಿ: ಸನ್ನಿ ಲಿಯೋನ್ ನೋಡಲು ಹರಿದುಬಂದಿತು ಜನಸಾಗರ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 18: ಇಲ್ಲಿನ ಮೊಬೈಲ್ ಶೋರೂಂ ಒಂದಕ್ಕೆ ಬಂದಿದ್ದ ಬಾಲಿವುಡ್ ತಾರೆ ಸನ್ನಿ ಲಿಯೋನ್ ಅವರನ್ನು ನೋಡಲು ಲಕ್ಷಾಂತರ ಜನರು ಮುಗಿಬಿದ್ದು, ಕಡೆಗೆ ಪೊಲೀಸರೂ ಅವರನ್ನು ನಿಯಂತ್ರಿಸಲಾಗದ ಪರಿಸ್ಥಿತಿಗೆ ತಲುಪಿದ್ದ ಪ್ರಸಂಗ ಶುಕ್ರವಾರ (ಆಗಸ್ಟ್ 18) ನಡೆದಿದೆ.

ನಗರದ ಎಂಜಿ ರಸ್ತೆಯಲ್ಲಿರುವ ''ಫೋನ್ 4 ಡಿಜಿಟಲ್ ಹಬ್'' ಶೋ ರೂಂ ಉದ್ಘಾಟನೆಗೆ ಬಂದಿದ್ದ ಸನ್ನಿಯನ್ನು ನೋಡಲು ಲಕ್ಷಾಂತರ ಜನರು ಮುಗಿಬಿದ್ದಿದ್ದಾರೆ.

ಇದರ ಫೋಟೋಗಳಂತೂ ಟ್ವಿಟ್ಟರ್ ನಲ್ಲಿ ಟ್ರೆಂಡ್ ಸೃಷ್ಟಿಸಿವೆ. ಹಲವಾರು ಮಂದಿ ಹೀಗೆ ಲಕ್ಷಾನುಲಕ್ಷ ಮಂದಿ ಸೇರಿದ್ದರ ಫೋಟೋಗಳನ್ನು ಹಾಕಿ, ಅದರ ಪಕ್ಕದಲ್ಲಿ ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ ಅವರು ಅಮೆರಿಕ ಅಧ್ಯಕ್ಷರಾಗಿದ್ದಾಗ ಸೇರಿದ್ದ ಜನರ ಫೋಟೋಗಳನ್ನು ಹಾಕಿ, ಸನ್ನಿ ಜನಪ್ರಿಯತೆಯೂ ಅಮೆರಿಕದ ಮಾಜಿ ಹಾಗೂ ಹಾಲಿ ಅಧ್ಯಕ್ಷರಂತೆಯೇ ಘನವಾದದ್ದು ಎಂದು ಬಿಂಬಿಸಿದ್ದಾರೆ. ಆದರೆ, ಇದು ಹೊಗಳಿಕೆಯೋ, ಅಪಹಾಸ್ಯವೋ ಅವರಿಗೆ ಮಾತ್ರ ಗೊತ್ತು!

ಇನ್ನೂ ಕೆಲವರು, ಸನ್ನಿ ಲಿಯೋನ್ ಅವರು ಕೊಚ್ಚಿ ಅಭಿಮಾನಿಗಳ ಫೋಟೋ ಪಕ್ಕದಲ್ಲಿ ರಾಹುಲ್ ಗಾಂಧಿ ಅವರ 'ಅಯ್ಯಪ್ಪಾ, ನೋಡಲಾರೆ' ಎಂಬರ್ಥ ಬರುವಂಥ ಫೋಟೋ ಹಾಕಿ ಕಿಚಾಯಿಸಿದ್ದಾರೆ.

ಒಬ್ಬ ಅಭಿಮಾನಿಯಂತೂ, ಉದ್ಘಾಟನೆಗಾಗಿ ಸನ್ನಿ ಲಿಯೋನ್ ವೇದಿಕೆ ಏರಿ ಬಂದಾಗ, ವೇದಿಕೆಯ ಪಕ್ಕದ ಪರದೆಯನ್ನೇ ಹರಿದು ಅದರ ಮೂಲಕ ತಲೆ ತೂರಿಸಿ ಆಕೆಯನ್ನು ನೋಡಲು ಕಾತುರಿಸಿದ್ದಾನೆ.

ಅಭಿಮಾನಿಗಳ ಇಂಥ ಹುಚ್ಚುತನಕ್ಕೆ ಮರಳಾಗಿರುವ ಸನ್ನಿ, ಎಲ್ಲರಿಗೂ ಟ್ವಿಟ್ಟರ್ ನಲ್ಲಿ ಥ್ಯಾಂಕ್ಸ್ ಹೇಳಿದ್ದಾರೆ. ಕೊಚ್ಚಿ ಜನತೆಯ ಈ ಅಭಿಮಾನವನ್ನು ನಾನೆಂದಿಗೂ ಮರೆಯಲಾರೆ ಎಂದು ಅವರು ತಮ್ಮ ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sunny Leone is surely not going to forget the people of Kochi, for a very long time. The actress was in the city for the launch of 'Phone 4 Digital Hub' showroom at MG Road. As the 'Baadshaho' actor reached the venue, she was flooded with thousands of fans.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X