ಬಿಜೆಪಿಯಲ್ಲಿ ಒಮ್ಮೆಗೆ ಸೂರ್ಯೋದಯ, ಸೂರ್ಯಾಸ್ತ
ನವದೆಹಲಿ, ಸೆ.13: ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಘೋಷಿಸುವುದಕ್ಕೂ ಮೊದಲೇ ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಲೀಕ್ ಆಗಿತ್ತು. ತೆಹೆಲ್ಕಾ, ನಿತಿ ಸೆಂಟ್ರಲ್ ಮುಂತಾದ ಸಂಸ್ಥೆಗಳು ಕೆಲ ನಿಮಿಷಗಳ ಮೊದಲೇ ಘೋಷಿಸಿದ್ದವು.
ಎನ್ ಡಿಎ ಮಿತ್ರಪಕ್ಷಗಳು, ರಾಷ್ಟೀಯ ಸ್ವಯಂಸೇವಕ ಸಂಘಗಳ ಒಪ್ಪಿಗೆ ಪಡೆದ ರಾಜನಾಥ್ ಸಿಂಗ್ ಅವರು ಎಲ್ ಕೆ ಅಡ್ವಾಣಿ ಅವರ ಮನೆಗೆ ತೆರಳಿ ಬರಿಗೈಯಲ್ಲಿ ವಾಪಸ್ ಆಗಿದ್ದರು. ಮೋಡಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ್ದರಿಂದ ಸೂರ್ಯೋದಯವಾಗಿದೆ. ಅಡ್ವಾಣಿ ತೆರೆ ಮರೆಗೆ ಸರಿಯುವುದು ಸನ್ನಿಹಿತವಾಗಿರುವುದರಿಂದ ಸೂರ್ಯಸ್ತವಾಗಿದೆ ಎಂದು ಟ್ವೀಟ್ ಲೋಕ ಹೇಳಿದೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಚಾರ ಕೊನೆಗೂ ಅಂತ್ಯಕಂಡಿದ್ದು, ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆರಿಸಲಾಗಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರಾದ್ಯಕ್ಷ ರಾಜನಾಥ್ ಸಿಂಗ್ ಅವರು ತಮ್ಮ ಮಿತ್ರಪಕ್ಷಗಳಿಗೆ ಖುದ್ದು ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ರಾಜನಾಥ್ ಸಿಂಗ್ ಮತ್ತು ಸುಷ್ಮಾ ಸ್ವರಾಜ್ ಅವರು ಪರಸ್ಪರ ಭೇಟಿ ಮಾಡಿದ್ದು, ಸುಷ್ಮಾ ಅವರನ್ನು ಓಲೈಸುವುದರಲ್ಲಿ ರಾಜನಾಥ್ ಸಿಂಗ್ ಯಶಸ್ವಿಯಾಗಿದ್ದಾರೆ. ಅದರೆ, ಬಿಜೆಪಿ ಪಕ್ಷದ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರ ಅನಿಸಿಕೆ ಬಗ್ಗೆ ಸಂಸದೀಯ ಮಂಡಳಿ ಬೆಲೆ ನೀಡಿಲ್ಲ ಎಂಬುದು ಎದ್ದು ಕಾಣುತ್ತದೆ. ಮುರಳಿ ಮನೋಹರ್ ಜೋಶಿ, ಸುಷ್ಮಾ ಸ್ವರಾಜ್ ಅವರು ಕೊನೆಗಳಿಗೆಯಲ್ಲಿ ಮೋದಿ ಪರ ನಿಂತಿದ್ದು ಅಡ್ವಾಣಿ ಕಟ್ಟಿಬಿಟ್ಟಿತು. ನಮೋ ಭಜನೆಯಲ್ಲಿ ತೊಡಗಿರುವ ಟ್ವಿಟ್ಟರ್ ನಲ್ಲಿ ಬಂದಿರುವ ಸಂದೇಶಗಳ ಸಂಗ್ರಹ ಇಲ್ಲಿದೆ ನೋಡಿ..
|
ಮೋದಿ ಪ್ರಧಾನಿ ಅಭ್ಯರ್ಥಿ
ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮೊದಲು ಕಂಡ ಟ್ವೀಟ್

ಮೋದಿ ಹೇಳಿಕೆ
'ಪಕ್ಷದ ಪ್ರಧಾನ ಮಂತ್ರಿ ಘೋಷಣೆ ಮಾಡಿ 2014 ತನ್ನ ಸಾರಥಿ ಯಾರೆಂದು ತೋರಿಸಿದೆ, ಈ ಸಾರಥಿಯನ್ನು ದೇಶದ ಮುಂದಿನ ಸಾರಥಿಯನ್ನಾಗಿ ಮಾಡುವ ಜವಾಬ್ದಾರಿ ಈಗ ದೇಶದ ಯುವಕರ ಮೇಲಿದೆ. ಎಲ್ಲಾ ಕಾರ್ಯಕರ್ತರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ ' ಎಂದ ನರೇಂದ್ರ ಮೋದಿ
|
ಮೋದಿ ಬಗ್ಗೆ ಬಿಜೆಪಿ
ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದ್ದು ಹೀಗೆ
|
ರಾಮ್ ಜೇಠ್ಮಲಾನಿ
ನಾನೀಗ ಬಿಜೆಪಿಯಲ್ಲಿಲ್ಲ ಆದರೆ, ಮೋದಿ ಆಯ್ಕೆ ಸಮರ್ಥನೀಯ : ರಾಮ್ ಜೇಠ್ಮಲಾನಿ
|
ಮೋದಿ ವಿರುದ್ಧ
ಮೋದಿ ಪರ ಟ್ವೀಟ್ ಗಳಲ್ಲದೆ ವಿರುದ್ಧ ಕೂಡಾ ಟ್ವೀಟ್ ಗಳು ನುಸುಳುತ್ತಿವೆ
|
ಅಡ್ವಾಣಿ ಭೀಷ್ಮ
ಎಲ್ ಕೆ ಅಡ್ವಾಣಿ ಅವರನ್ನು ಭೀಷ್ಮ ಎಂದು ಕರೆದಿದ್ದು ಅನ್ವರ್ಥವಾಗಿ ಬಿಟ್ಟಿದೆ. ಕುರ್ಚಿ ಕಡೆಗೂ ಸಿಗಲೇ ಇಲ್ಲ
|
ರಮೇಶ್ 'ಪನ್'
ರಮೇಶ್ ಶ್ರೀನಿವಾಸ್ ಪನ್ ಮಾಡಿ ಟ್ವೀಟ್ ಮಾಡಿದ್ದು ಹೀಗೆ
|
ಶಹನವಾಜ್ ಹುಸೇನ್ ಹೇಳಿಕೆ
ಬಿಜೆಪಿ ವಕ್ತಾರರಲ್ಲಿ ಒಬ್ಬರಾದ ಶಹನವಾಜ್ ಹುಸೇನ್ ಹೇಳಿಕೆ
|
ದೆಹಲಿಯ ವಿಜಯ್ ಗೋಯಲ್
ದೆಹಲಿ ಬಿಜೆಪಿ ಅಧ್ಯಕ್ಷ, ಸಂಸದ ವಿಜಯ್ ಗೋಯಲ್ ಅವರ ಹೇಳಿಕೆ
|
ಸಂಸದ ಅನಂತ್ ಟ್ವೀಟ್
ಸಂಸದ ಕರ್ನಾಟಕದ ಅನಂತ್ ಕುಮಾರ್ ಅವರು ಟ್ವೀಟ್ ಮಾಡಿದ್ದು ಹೀಗೆ












Click it and Unblock the Notifications