ದ್ವೇಷ ಬಿತ್ತುವ ಹೇಳಿಕೆ ನೀಡಿಲ್ಲ : ತೋಗಾಡಿಯಾ ಸ್ಪಷ್ಟನೆ

Posted By:
Subscribe to Oneindia Kannada

ಬೆಂಗಳೂರು, ಏ. 21 : ಮುಸ್ಲಿಂರಿಗೆ ಆಸ್ತಿ ಕೊಳ್ಳಲು ಅವಕಾಶ ನೀಡಬಾರದೆಂದು ನಾನು ಹೇಳಿಲ್ಲ. ಇಂಗ್ಲಿಷ್ ಮಾಧ್ಯಮಗಳು ತಪ್ಪು ವರದಿ ಮಾಡುವುದನ್ನು ನಿಲ್ಲಿಸಬೇಕು. ಇದೆಲ್ಲ ನನ್ನು ವಿರುದ್ಧ ಮಾಡಲಾಗಿರುವ ಸಂಚು ಎಂದು ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೋಗಾಡಿಯಾ ವರದಿಗಳಿಗೆ ಪ್ರತ್ಯುತ್ತರ ನೀಡಿದ್ದಾರೆ.

ನಾನು ಭಾವನಗರಕ್ಕೆ ರಾತ್ರಿ 11ರ ಸುಮಾರಿಗೆ ಬಂದಾಗ ಸಾವಿರಕ್ಕೂ ಹೆಚ್ಚಿದ್ದ ಜನರ ಗುಂಪೊಂದು ಪ್ರತಿಭಟನೆ ನಡೆಸುತ್ತಿತ್ತು. ತಮ್ಮ ಆಸ್ತಿಗಳನ್ನು ಬಲವಂತವಾಗಿ ಕಿತ್ತುಕೊಳ್ಳಲಾಗುತ್ತಿದೆ ಎಂಬುದು ಅವರ ಆರೋಪವಾಗಿತ್ತು. ಈ ಕುರಿತು ನನ್ನನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು ಅಷ್ಟೆ ಎಂದು ತೋಗಾಡಿಯಾ ಸ್ಪಷ್ಟನೆ ನೀಡಿದ್ದಾರೆ.

ಏನೆಂದು ವರದಿಯಾಗಿತ್ತು? :
"ಹಿಂದೂ ಪ್ರದೇಶಗಳಲ್ಲಿ ಮುಸ್ಲಿಂರಿಗೆ ಆಸ್ತಿ ಕೊಳ್ಳಲು ಅವಕಾಶ ನೀಡಬಾರದು. ಯಾರಾದರೂ ಕೊಂಡಿದ್ದರೆ ಅಂಥವರನ್ನು ಆ ಪ್ರದೇಶದಿಂದ ಓಡಿಸಬೇಕು" ಎಂದು ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಧಕ್ಕೆ ತರುವಂಥ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೋಗಾಡಿಯಾ ನೀಡಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.

ಟ್ವಿಟ್ಟರಿನಲ್ಲಿ ಟ್ವಿಟ್ಟಿಗರು ಪಕ್ಷಭೇದ ಮರೆತು ತೋಗಾಡಿಯಾ ಅವರನ್ನು ಝಾಡಿಸುತ್ತಿದ್ದಾರೆ. "ನಾನು ಕೂಡ ಹಿಂದೂ, ಒಬ್ಬ ಬ್ರಾಹ್ಮಣ. ಆದರೆ, ಪ್ರವೀಣಾ ತೋಗಾಡಿಯಾನಂಥವರು ಹಿಂದೂಗಳಿಗೇ ಅವಮಾನಕರ" ಎಂದು ಟ್ವಿಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತ್ಯತೀತತೆ ಎಂದರೇನು ಅರ್ಥಮಾಡಿಕೊಳ್ಳದ ತೋಗಾಡಿಯಾನನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದು ಮತ್ತೊಬ್ಬರು ವಾಗ್ದಾಳಿ ಮಾಡಿದ್ದಾರೆ.

ಗುಜರಾತ್‌ನ ಭಾವನಗರದಲ್ಲಿ ಶನಿವಾರ ಸಂಜೆ ಭಜರಂಗ ದಳದ ಕಾರ್ಯಕರ್ತರೊಡಗೂಡಿ ಮುಸ್ಲಿಂರೊಬ್ಬರು ಕೊಂಡಿದ್ದ ಮನೆಯ ಮೇಲೆ ದಾಳಿ ಮಾಡಿದ್ದಲ್ಲದೆ, ಆ ಮನೆಯನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಭಜರಂಗ ದಳದವರಿಗೆ ಹೇಳಿದ್ದರು. ಹಿಂದೂಗಳಿರುವ ಪ್ರದೇಶಗಳಲ್ಲಿ ಮುಸ್ಲಿಂರಿಗೆ ಆಸ್ತಿ ಕೊಳ್ಳಲು ಅವಕಾಶ ನೀಡಬಾರದು ಎಂದು ಆಕ್ರೋಶಭರಿತ ಮಾತುಗಳನ್ನಾಡಿದ್ದರು ಎಂದು ಟೈಮ್ಸ್ ಆಪ್ ಇಂಡಿಯಾ ವರದಿ ಮಾಡಿತ್ತು.

ಪ್ರವೀಣ್ ತೋಗಾಡಿಯಾ ಹೇಳಿಕೆಗೆ ಬಿಜೆಪಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ವಿರೋಧ ಪಕ್ಷಗಳು ಕೆಂಡದ ಸುರಿಮಳೆಯನ್ನು ಸುರಿಸುತ್ತಿವೆ. ಕೆಲ ದಿನಗಳ ಹಿಂದೆ ಬಿಹಾರದ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರು, ಮೋದಿ ವಿರೋಧಿಗಳನ್ನು ಪಾಕಿಸ್ತಾನಕ್ಕೆ ಒದ್ದೋಡಿಸಬೇಕು ಎಂದು ವಿವಾದ ಎಬ್ಬಿಸಿದ್ದರು. ಗಿರಿರಾಜ್ ಹೇಳಿಕೆಯನ್ನು ಬಿಜೆಪಿ ಅನುಮೋದಿಸಿರಲಿಲ್ಲ.

ರಾಜೀವ್ ಗಾಂಧಿ ಹಂತಕರನ್ನೇ ಗಲ್ಲಿಗೇರಿಸಿಲ್ಲ

ರಾಜೀವ್ ಗಾಂಧಿ ಹಂತಕರನ್ನೇ ಗಲ್ಲಿಗೇರಿಸಿಲ್ಲ

"ಅವರಿಗೆ 48 ಗಂಟೆ ಅವಕಾಶ ನೀಡಿರಿ. ಜಾಗ ಖಾಲಿ ಮಾಡಲಿಲ್ಲವೆಂದರೆ ಕಲ್ಲು, ಕೋಲು, ಟೈರು, ಟೊಮೆಟೋ ತೆಗೆದುಕೊಂಡು ಹೋಗಿ ದಾಳಿ ಮಾಡಿರಿ. ಅದರಲ್ಲಿ ತಪ್ಪೇನೂ ಇಲ್ಲ. ರಾಜೀವ್ ಗಾಂಧಿ ಹಂತಕರನ್ನೇ ಗಲ್ಲಿಗೇರಿಸಿಲ್ಲ. ಇನ್ನು ನಾವು ಮಾಡುವುದರಲ್ಲಿ ತಪ್ಪೇನಿದೆ? ಹಿಂದೆಯೂ ಇದನ್ನೆಲ್ಲ ಮಾಡಿದ್ದೇನೆ" ಎಂದು ಪ್ರವೀಣ್ ತೋಗಾಡಿಯಾ ಕಿಡಿಕಾರಿದ್ದರು ಎಂದು ವರದಿಯಾಗಿದೆ. ಇದನ್ನು ತೋಗಾಡಿಯಾ ಅಲ್ಲಗಳೆದಿದ್ದಾರೆ.

ಪ್ರವೀಣ್ ಹೇಳಿಕೆಗೆ ಶೋಭಾ ಡೇ ಪ್ರತಿಕ್ರಿಯೆ

ಆಧುನಿಕ ಭಾರತಕ್ಕೆ ಪ್ರವೀಣ್ ಕಳಂಕ. ನೀವು ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಲು 48 ಗಂಟೆಗಳ ಕಾಲಾವಕಾಶ ನೀಡುತ್ತೇನೆ ಎಂದಿದ್ದಾರೆ ಖ್ಯಾತ ಅಂಕಣಕಾರ್ತಿ ಶೋಭಾ ಡೇ.

ಬರ್ಖಾ ದತ್ ಏನಂತಾರೆ ಇಲ್ಲಿ ಓದಿರಿ

ಈ ಪ್ರವೀಣ್ ತೋಗಾಡಿಯಾನನ್ನೇ ಯಾರಾದರೂ ಓಡಿಸಿ ಪುಣ್ಯ ಕಟ್ಟಿಕೊಳ್ಳಬಾರದು?

ನಿತಿನ್ ಗಡ್ಕರಿ ಏನಂತಾರೆ ಗೊತ್ತಾ?

ಪ್ರವೀಣ್ ತೋಗಾಡಿಯಾರನ್ನು ಬಂಧಿಸಿಬಿಡಿ, ಕಾಶ್ಮೀರದಲ್ಲಿ ಲಕ್ಷಾಂತರ ಭಾರತೀಯರನ್ನು ಕೊಂದ ಗೀಲಾನಿಗೆ ಭಾರತ ರತ್ನ ಕೊಟ್ಟುಬಿಡಿ, ಓವೈಸಿ ಬ್ರದರ್ಸ್ ಬಗ್ಗೆ ಏನು ಹೇಳುತ್ತೀರಿ? ನಮಗೆಲ್ಲ ನಾಚಿಕೆಯಾಗಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಪ್ರವೀಣ್‌ಗೆ ಟಿಕೆಟ್ ನೀಡಲು ರಾಜೀವ್ ರೆಡಿ

ದ್ವೇಷ ಬಿತ್ತುತ್ತಿರುವ ಪ್ರವೀಣ್ ತೋಗಾಡಿಯಾನಂಥವರನ್ನೇ ಮೊದಲು ಭಾರತದಿಂದ ಅಟ್ಟಬೇಕು. ಬೇಕಿದ್ದರೆ ನಾನೇ ಕಾಂಪ್ಲಿಮೆಂಟರಿ ಟಿಕೆಟ್ ನೀಡುತ್ತೇನೆ - ರಾಜೀವ್ ಚಂದ್ರಶೇಖರ್, ಸಂಸದ.

ಮುಸ್ಲಿಂ ರೋಗಿಗಳಿಗೆ ಈತ ಹೇಗೆ ಚಿಕಿತ್ಸೆ ಕೊಡುತ್ತಾನೆ

ತೋಗಾಡಿಯಾ ಒಬ್ಬ ಕ್ಯಾನ್ಸರ್ ಡಾಕ್ಟರ್ ಅಂತೆ. ಇಂಥ ಹೇಳಿಕೆ ನೀಡಿದ ಮೇಲೆ, ಆತ ರೋಗಿಗಳಿಗೆ ಹೇಗೆ ಚಿಕಿತ್ಸೆ ಕೊಡುತ್ತಾನಂತ ಆಶ್ಚರ್ಯವಾಗುತ್ತಿದೆ.

ಪ್ರತಿಕ್ರಿಯಿಸಲು ಕೂಡ ಯೋಗ್ಯವಲ್ಲ

ಸ್ನೇಹಿತರು ಗಿರಿರಾಜ್ ಮತ್ತು ಪ್ರವೀಣ್ ತೋಗಾಡಿಯಾ ನೀಡಿದ ಹೇಳಿಕೆ ಪ್ರತಿಕ್ರಿಯಿಸಲು ಒತ್ತಾಯಿಸುತ್ತಿದ್ದಾರೆ. ವೆಲ್, ಅವು ಪ್ರತಿಕ್ರಿಯೆಗೆ ಕೂಡ ಯೋಗ್ಯವಲ್ಲ.

ತೋಗಾಡಿಯಾ, ಅಜಂರನ್ನು ಒಟ್ಟಿಗೇ ಜೈಲಲ್ಲಿಡಬೇಕು

ಪ್ರವೀಣ್ ತೋಗಾಡಿಯಾ ಮತ್ತು ಅಜಂ ಖಾನ್ ರನ್ನು ಜೈಲಿನ ಒಂದೇ ಕೋಣೆಯಲ್ಲಿ ಇಟ್ಟಾಗ ಸಖತ್ ಮಜಾ ಅರುತ್ತದೆ.

ಪ್ರವೀಣ್ ತೋಗಾಡಿಯಾ ಸ್ಪಷ್ಟನೆ

ತಪ್ಪು ವರದಿಗಾರಿಕೆ ಮಾಡಲಾಗಿದೆ ಎಂದು ಪ್ರವೀಣ್ ತೋಗಾಡಿಯಾ ಆಕ್ರೋಶ ವ್ಯಕ್ತಪಡಿಸಿ, ಕೆಲ ಆಂಗ್ಲ ಪತ್ರಿಕೆಗಳಿಗೆ ಲೀಗಲ್ ನೋಟೀಸ್ ಜಾರಿ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tweeples have been lambasting Vishwa Hindu Parishad leader Praveen Togadia for his hate speech. Togadia had stated that Muslims should not be allowed to buy any property in Hindu area. And if anyone has, he should be thrown out of neighborhood.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ