Tirupati Laddu: ತಿರುಪತಿ ತಿಮ್ಮಪ್ಪನ ಲಡ್ಡು ಗುಣಮಟ್ಟ ಕಳಪೆಗೆ ಕಾರಣ ಪತ್ತೆ

ತಿರುಮಲಾಧಿಪತಿ ತಿರುಪತಿ ವೆಂಕಟೇಶ್ವರನ್‌ ದರ್ಶನಕ್ಕೆ ಎಷ್ಟು ಮಹತ್ತ ಇದೆಯೋ ಅಷ್ಟೇ ಮಹತ್ವವನ್ನು ಅಲ್ಲಿ ಸಿಗುವ ಪ್ರಸಾದಕ್ಕೆ ಭಕ್ತರು ನೀಡುತ್ತಾರೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಈ ಪ್ರಸಾದ ಬಗ್ಗೆ ಭಕ್ತರು ಅಸಮಾಧಾನವನ್ನು ವ್ಯಕ್ತ ಪಡಿಸಿದ್ದರು. ಈ ರುಚಿ ಮೊದಲಿನಂತೆ ಇಲ್ಲ ಎಂದು ದೂರಿದ್ದರು. ಭಕ್ತರ ಬೇಡಿಕೆಗೆ ಟಿಡಿಪಿ ಅಸ್ತು ಎಂದಿದ್ದು, ರುಚಿ ಸರಿ ಮಾಡಿಕೊಳ್ಳಲು ಮುಂದಾಗಿದೆ.

ತಿರುಪತಿ ತಿಮ್ಮಪ್ಪನ ಪ್ರಸಾದವನ್ನು ಶ್ರೀವಾರಿ ಎಂದು ಕರೆಯುತ್ತಾರೆ. ಈ ಪವಿತ್ರ ಪ್ರಸಾದ ಬಗ್ಗೆ ಭಕ್ತರ ದೂರು ಬರುತ್ತಿದ್ದರಿಂದ ಟಿಡಿಪಿ ಇಒ ಶ್ಯಾಮಲಾ ರಾವ್ ಅವರು ಶ್ರೀವಾರಿ ಲಡ್ಡು ಗುಣಮಟ್ಟದ ಬಗ್ಗೆ ಗಮನಹರಿಸಿದ್ದಾರೆ. ಅಲ್ಲದೆ ಲಡ್ಡು ರುಚಿ ಬೇರೆಯಾಗಲು ಅಸಲಿ ಕಾರಣ ಬಯಲಾಗಿದೆ.

TTD Focuses on Improving Quality of Tirumala Laddu Prasad Amid Devotee Complaints

ರುಚಿ ಕೆಡಲು ಕಾರಣವೇನು?

ಲಡ್ಡು ತಯಾರಿಕೆ ವೇಳೆ ಗುಣಮಟ್ಟದ ತುಪ್ಪ ಬಳಸದ ಕಾರಣ ತಿರುಮಲ ಶ್ರೀವಾರಿ ಲಡ್ಡುವಿನ ಗುಣಮಟ್ಟದಲ್ಲಿ ವ್ಯತ್ಯಾಸವಾಗಿದೆ ಎಂದು ಟಿಟಿಡಿ ಇಒ ತಿಳಿಸಿದ್ದಾರೆ. ಗುಣಮಟ್ಟದ ತುಪ್ಪ ಬಳಸಿದರೆ ರುಚಿ ಹೆಚ್ಚುತ್ತದೆ ಎಂದರು. ಈ ಹಿನ್ನೆಲೆಯಲ್ಲಿ ಲಡ್ಡೂ ತಯಾರಿಸಲು ಸರಬರಾಜಾಗುವ ತುಪ್ಪದ ಗುಣಮಟ್ಟ ಪರೀಕ್ಷೆ ನಡೆಸಲು ಟಿಡಿಪಿ ಮುಂದಾಗಿದೆ.

ತಪಾಸಣೆ ನಡೆಸಿದ ಇಒ

ಮಂಗಳವಾರ ಇಒ ಶ್ಯಾಮಲಾ ರಾವ್ ದೇವಸ್ಥಾನದ ಆವರಣದ ಶುಚಿತ್ವ ಹಾಗೂ ಬೇರೆ ಕೆಲಸಗಳಲ್ಲಿ ತೊಡಗಿದ್ದಾಗ, ಪ್ರಸಾದ ಕೌಂಟರ್‌ಗೆ ನಡೆದಿದ್ದಾರೆ. ಅಲ್ಲಿ ಪ್ರಸಾದವನ್ನು ಸೇವಿಸಿ, ಶ್ರೀವಾರಿ ಲಡ್ಡು ಪ್ರಸಾದದ ಗುಣಮಟ್ಟದ ತಪಾಸಣೆ ನಡೆಸಿದ್ದಾರೆ.

TTD Focuses on Improving Quality of Tirumala Laddu Prasad Amid Devotee Complaints

ತಪ್ಪು ನಡೆದಿದ್ದು ಎಲ್ಲಿ?

ಇದೇ ವೇಳೆ ಇಒ ಇದಕ್ಕೆ ಬಳಸಲಾಗುವು ತುಪ್ಪ, ಒಣದ್ರಾಕ್ಷಿ, ಗೋಡಂಬಿ ಮುಂತಾದ ಪದಾರ್ಥಗಳನ್ನು ಎಲ್ಲಿಂದ ಖರೀದಿಸುತ್ತಿದ್ದಾರೆ ಎಂದು ವಿಚಾರಿಸಿದ್ದಾರೆ. ಇದೇ ವೇಳೆ ತುಪ್ಪದ ಕ್ಯಾನ್‌ಗಳ ಪರಿಶೀಲನೆ ಸಹ ನಡೆಸಿದ್ದಾರೆ. ಅಲ್ಲದೆ ಒಳ್ಳೆಯ ಗುಣಮಟ್ಟದ ತುಪ್ಪವನ್ನು ಬಳಸಿ ಲಡ್ಡು ತಯಾರಿಸಿದರೆ, ಉತ್ತಮ ಗುಣ ಮಟ್ಟದಿಂದ ಕೂಡಿರುತ್ತದೆ ಎಂದು ಶ್ಯಾಮಲಾ ರಾವ್ ತಿಳಿಸಿದ್ದಾರೆ.

ಕಲಬೆರಕೆ ಪರೀಕ್ಷಿಸಲು ಟಿಟಿಡಿ ಸಾಧನವನ್ನು ಹೊಂದಿಲ್ಲ. ಗುತ್ತಿಗೆದಾರರು ಬೇರೆ ಉಪ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲು ಅವಕಾಶಗಳಿವೆ ಎಂದು ಶ್ಯಾಮಲಾ ರಾವ್ ವಿವರಿಸಿದರು.

ತಜ್ಷರ ಸಮಿತಿ ರಚನೆ

ಗುಣಮಟ್ಟದ ತುಪ್ಪದ ಟೆಂಡರ್‌ನಲ್ಲಿ ಯಾವ ರೀತಿಯ ವಸ್ತುಗಳನ್ನು ಸೇರಿಸಬೇಕು ಎಂಬುದನ್ನೂ ನಾಲ್ವರು ತಜ್ಞರ ಸಮಿತಿ ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೇ ಪ್ರಸ್ತುತ ತುಪ್ಪ ಪೂರೈಕೆ ಮಾಡುತ್ತಿರುವ ಪೂರೈಕೆದಾರರನ್ನು ಕರೆಸಿ ಗುಣಮಟ್ಟದ ತುಪ್ಪ ಪೂರೈಸಲು ಆದೇಶಿಸಲಾಗಿದೆ ಎಂದರು.

ಮತ್ತೊಂದೆಡೆ, ತುಪ್ಪ ಪೂರೈಸುವ ಕೆಲವು ಕಂಪನಿಗಳು ಗುಣಮಟ್ಟದ ತುಪ್ಪವನ್ನು ಕಳುಹಿಸುತ್ತಿದ್ದರೆ, ಇನ್ನೂ ಕೆಲವು ಕಳಪೆ ತುಪ್ಪವನ್ನು ಕಳುಹಿಸುತ್ತಿವೆ ಎಂದು ಟಿಟಿಡಿ ಇಒ ಹೇಳಿದರು. ಕಲಬೆರಕೆ ತುಪ್ಪ ಕಳುಹಿಸುತ್ತಿರುವ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಹೇಳಿದರು. ಅಲ್ಲದೆ ಎರಡು ಕಂಪನಿಗಳಿಗೆ ಈಗಾಗಲೇ ನೋಟೀಸ್‌ ನೀಡಲಾಗಿದೆ ಎಂದು ಸಹ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+