ತಿರುಮಲದ ಏಳು ಬೆಟ್ಟಗಳ ಕುರಿತ ಕುತೂಹಲಕರ ಪುಸ್ತಕ ಪ್ರಕಟ: ಇದರಲ್ಲೇನಿದೆ ತಿಳಿಯಿರಿ
ಹೈದರಾಬಾದ್, ಜನವರಿ 4: ಪವಿತ್ರ ತಿರುಮಲ ಬೆಟ್ಟಗಳ ಸ್ವಾರಸ್ಯಕರ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕಾಫಿ ಟೇಬಲ್ ಪುಸ್ತಕವನ್ನು 'ದಿ ಹಿಂದೂ ಪತ್ರಿಕೆ'ಯ ಪಬ್ಲಿಕೇಷನ್ಸ್ ವಿಂಗ್ ಹೊರತಂದಿದೆ.
ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಟ್ರಸ್ಟ್ ಬೋರ್ಡ್ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಅವರು ತಿರುಮಲದಲ್ಲಿ ಔಪಚಾರಿಕವಾಗಿ ಬಿಡುಗಡೆ ಮಾಡಿದರು. ಬ್ಯುಸಿನೆಸ್‌ಲೈನ್‌ನ ಸಂಪಾದಕ ರಘುವೀರ್ ಶ್ರೀನಿವಾಸನ್ ಅವರು ಬರೆದಿರುವ ಈ ಪುಸ್ತಕವನ್ನು ತಿರುಮಲ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಶುಭ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ತಿರುಮಲ - ದಿ ಸೆವೆನ್ ಹಿಲ್ಸ್ ಆಫ್ ಸಾಲ್ವೇಶನ್ (Tirumala- the seven hills of Salvation) ಎಂಬ ಶೀರ್ಷಿಕೆಯ 138 ಪುಟಗಳ ಪುಸ್ತಕದಲ್ಲಿ ತಿರುಮಲದೊಂದಿಗೆ ಬರಹಗಾರರ ಒಡನಾಟ ಒಡನಾಟ, ಅನಂತಾಳ್ವಾನ್ ಕಥೆ, ವಿಜಯನಗರ ಚಕ್ರವರ್ತಿ ಶ್ರೀ ಕೃಷ್ಣದೇವರಾಯನ ಕುರಿತು, ಶ್ರೀ ಲಕ್ಷ್ಮೀ ಸಹಸ್ರಮ್ ಮತ್ತು ವೈಕುಂಠ ಏಕಾದಶಿಯ ಮಹತ್ವವನ್ನು ವಿವರಿಸುವ ಲೇಖನಗಳಿವೆ.

ವೈದಿಕ ಜ್ಞಾನವನ್ನು ಪ್ರಸಾರ ಮಾಡಲು, ಭಕ್ತಿ ಪಂಥವನ್ನು ಹರಡಲು, ಸ್ಥಳೀಯ ಗೋ ತಳಿಗಳನ್ನು ಉತ್ತೇಜಿಸಲು, ಪಂಚಗವ್ಯ ಆಧಾರಿತ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ಮತ್ತು ಇತರ ಸಾಮಾಜಿಕ ಸಂಬಂಧಿತ ಚಟುವಟಿಕೆಗಳಿಗೆ ಟಿಟಿಡಿ ಆಡಳಿತವು ಕೈಗೊಂಡ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಮೇಲೆ ಪುಸ್ತಕವು ಬೆಳಕು ಚೆಲ್ಲಿದೆ.
ಪುಸ್ತಕವು ತಿರುಮಲದ ಆಧ್ಯಾತ್ಮಿಕ ಮಹತ್ವವನ್ನು ಎತ್ತಿ ತೋರಿಸುವ ಪ್ರಮುಖ ಭಕ್ತಿ ವಾಗ್ಮಿಗಳು ಮತ್ತು ಪ್ರಖ್ಯಾತ ವೈದಿಕ ಸಂಶೋಧಕರ ಪ್ರಬುದ್ಧ ಲೇಖನಗಳನ್ನು ಹೊಂದಿದೆ.
ಪುಸ್ತಕಕ್ಕೆ ಆಯ್ಕೆ ಮಾಡಲಾದ ವಿವಿಧ ವಿಷಯಗಳು ಮತ್ತು ತಿರುಮಲವನ್ನು ಹೊಸ ನೋಟದಲ್ಲಿ ತೋರಿಸಿರುವ ವರ್ಣರಂಜಿತ ಛಾಯಾಚಿತ್ರಗಳಿವೆ.

ಡಸ್ಟ್ ಜಾಕೆಟ್ ಹೊಂದಿರುವ ಹಾರ್ಡ್‌ಬೌಂಡ್ ಪುಸ್ತಕವು ಈಗ ಆನ್‌ಲೈನ್ ಖರೀದಿಗೆ https://publications.thehindugroup.com/bookstore/ ನಲ್ಲಿ ₹1,499 ರ ಬೆಲೆಯಲ್ಲಿ ಲಭ್ಯವಿದೆ. 20 ಪ್ರತಿಶತ ಬಿಡುಗಡೆ ರಿಯಾಯಿತಿಯೊಂದಿಗೆ ಸಿಗಲಿದೆ.
ಗರ್ಭಗುಡಿಯ ಗೋಪುರಕ್ಕೆ ಚಿನ್ನದ ಲೇಪನ ಮಾಡುವ ಕಾಮಗಾರಿ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಮುಚ್ಚಲಾಗುವುದು ಎಂದು ವರದಿಯಾಗಿತ್ತು, ಆದರೆ, ಈ ವರದಿಯನ್ನು ತಿರುಪತಿಯ ಆಡಳಿತ ಮಂಡಳಿ ಅಲ್ಲಗಳೆದಿದೆ. ಇಂತಹ ಸುಳ್ಳು ಹರಡುವ ನಕಲಿ ಪೋಸ್ಟ್‌ಗಳಿಗೆ ಭಕ್ತರು ಮರುಳಾಗಬಾರದೆಂದು ಟಿಟಿಡಿ ಮನವಿ ಮಾಡಿದೆ.
ಆಗಮ ತತ್ವಗಳ ಪ್ರಕಾರ ನವೀಕರಣ ಕಾರ್ಯವು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ. ಭಕ್ತರು ವೆಂಕಟೇಶ್ವರನ 'ಮೂಲವಿರಾಟ್' (ಪೀಠಾಧಿಪತಿ) ದರ್ಶನ ಪಡೆಯುವುದನ್ನು ಮುಂದುವರಿಸಲಿದ್ದಾರೆ ಎಂದು ಟಿಟಿಡಿ ಹೇಳಿದರು.












Click it and Unblock the Notifications