ಎಚ್ 1ಬಿ ವೀಸಾ ಬಗ್ಗೆ ಮೋದಿಗೆ ಫೋನ್ ಮೂಲಕ ವಿವರಿಸಿದ ಟ್ರಂಪ್

Posted By:
Subscribe to Oneindia Kannada

ನವದೆಹಲಿ, ಜನವರಿ 25: ವಿದೇಶೀಯರಿಗೆ ಅಮೆರಿಕದಲ್ಲಿ ಉದ್ಯೋಗ ಮಾಡಲು ಅನುವು ಮಾಡಿಕೊಡುವ ಎಚ್ 1ಬಿ ವೀಸಾ ಬಗ್ಗೆ ಬಿಗಿ ನಿಲುವು ತಳೆದಿದ್ದರೂ, ತಜ್ಞ ಟೆಕಿಗಳಿಗೆ ತಮ್ಮ ದೇಶದಲ್ಲಿ ಸೇವೆ ಸಲ್ಲಿಸಲು ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯರಿಗೆ ಆಶ್ವಾಸನೆ ಇತ್ತಿದ್ದಾರೆ.

ಅಮೆರಿಕ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿರುವ ಡೊನಾಲ್ಡ್ ಟ್ರಂಪ್ ಅವರು, ಮಂಗಳವಾರ ತಡರಾತ್ರಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿ ಕ್ಷೇಮ ವಿಚಾರಿಸಿದರು. ಇದಕ್ಕೆ ಕಾರಣ ಮೋದಿಯವರೇ.

Trump gives clarification regading H1b visa to PM Modi

ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಟ್ರಂಪ್ ಅವರಿಗೆ ಕರೆ ಮಾಡಿ ಶುಭಾಷಯ ಸಲ್ಲಿಸಿದ್ದರು. ಹೀಗೆ, ಅಂತಾರಾಷ್ಟ್ರೀಯ ಮಟ್ಟದಿಂದ ದೂರವಾಣಿ ಮೂಲಕ ಟ್ರಂಪ್ ಗೆ ಶುಭಾಷಯ ಸಲ್ಲಿಸಿದ್ದು ಮೋದಿಯವರೇ ಎಂದು ಟ್ರಂಪ್ ಅವರಿಗೆ ತಿಳಿದು ಸಂತುಷ್ಟರಾಗಿದ್ದರು.

ಅಂದು, ಮೋದಿ ಸಲ್ಲಿಸಿದ ಶುಭಾಷಯಗಳಿಗೆ ಅವಸರದಲ್ಲಿ ಧನ್ಯವಾದ ಹೇಳಿ ಫೋನಿಟ್ಟಿದ್ದ ಟ್ರಂಪ್, ಮಂಗಳವಾರ ರಾತ್ರಿ ಕೊಂಚ ಬಿಡುವು ಮಾಡಿಕೊಂಡು ಮೋದಿಯವರೊಂದಿಗೆ ಸಾವಧಾನವಾಗಿ ಮಾತನಾಡಿದ್ದಾರೆ.

ಈ ಸಂದರ್ಭದಲ್ಲಿ ಅಮೆರಿಕದಲ್ಲಿ ಉದ್ಯೋಗ ನಿರತ ವಿದೇಶಿಯರಿಗಾಗಿ ನೀಡಲಾಗುವ ಎಚ್ 1ಬಿ ವೀಸಾದ ನಿಯಮಗಳನ್ನು ಬಿಗಿಗೊಳಿಸಿರುವ ಟ್ರಂಪ್ ಅವರ ಕ್ರಮದ ಬಗ್ಗೆ ಮೋದಿ ವಿಚಾರಿಸಿದ್ದು, ಕೆಲವಾರು ಅಮೆರಿಕದ ಕಂಪನಿಗಳು ಈ ಸವಲತ್ತನ್ನು (ಎಚ್ 1ಬಿ ವೀಸಾ) ದುರುಪಯೋಗಪಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಗಿ ನಿಲುವು ತಳೆದಿರುವುದಾಗಿ ಟ್ರಂಪ್ ವಿವರಿಸಿದ್ದಾರೆಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.

ಎಚ್ 1ಬಿ ವೀಸಾ ವಿಚಾರದಲ್ಲಿ ಬಿಗಿ ನಿಲುವು ಹೊಂದಿದ್ದರೂ, ಭಾರತದ ತಜ್ಞ ಉದ್ಯೋಗಿಗಳಿಗೆ, ಕಂಪನಿಗಳಿಗೆ ಹಾಗೂ ಪದವೀಧರರಿಗೆ ತಮ್ಮಲ್ಲಿ ಸೇವೆ ಸಲ್ಲಿಸಲು ಯಾವತ್ತೂ ಅವಕಾಶವಿದೆ ಎಂದು ಟ್ರಂಪ್ ಇದೇ ವೇಳೆ ಮೋದಿಯವರಿಗೆ ಭರವಸೆ ನೀಡಿದ್ದಾರೆನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The president of America assures talented techies of India will have no obstacles to work in US, even though his government has takes tough measures about H1b visas.
Please Wait while comments are loading...