ತ್ರಿಪುರ: ಮಾಣಿಕ್ ಅಧಿಪತ್ಯಕ್ಕೆ ಅಂತ್ಯ ಹಾಡಲು ಮೋದಿ ಕರೆ
ಅಗರ್ತಲ, ಫೆಬ್ರವರಿ 08: ಈಶಾನ್ಯ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪ್ರಚಾರ ಕಾರ್ಯ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರದಂದು ಸೋನಮುರಾದಲ್ಲಿ ಪ್ರಚಾರ ಭಾಷಣ ಮಾಡಿದ್ದು, ಮಾಣಿಕ್ ಸರ್ಕಾರ್ ಯುಗ ಅಂತ್ಯಗೊಳ್ಳಲಿದೆ ಎಂದರು.
ಫೆಬ್ರವರಿ 18 ರಂದು ತ್ರಿಪುರದಲ್ಲಿ ನಡೆಯಲಿರುವ ಚುನಾವಣೆಗಾಗಿ ಪ್ರಚಾರ ನಡೆಸಲು ಬಂದಿರುವ ಮೋದಿ ಅವರು ತಮ್ಮ ಭಾಷಣದಲ್ಲಿ ಉದ್ಯೋಗ ನೇಮಕಾತಿ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದು ಗಮನಾರ್ಹವಾಗಿತ್ತು.
ಈ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುತ್ತಿಲ್ಲ. ಬದಲಿಗೆ ತ್ರಿಪುರದ ಜನತೆ ಸ್ಪರ್ಧಿಸುತ್ತಿದೆ. 8 ಲಕ್ಷಕ್ಕೂ ಅಧಿಕ ನಿರುದ್ಯೋಗಿ ಯುವ ಜನಾಂಗ ಹಾಗೂ ಸರ್ಕಾರಿ ನೌಕರರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿದ್ದಾರೆ ಎಂದರು.

ಮಾಣಿಕ್ ಸರ್ಕಾರದ ರೋಸ್ ವ್ಯಾಲಿ ಚಿಟ್ ಫಂಡ್ ಹಗರಣದ ಬಗ್ಗೆ ಮಾತನಾಡಿದ ಮೋದಿ, ಕಷ್ಟ ಪಟ್ಟು ದುಡಿದು ಸಂಪಾದಿಸಿದ ಹಣವನ್ನು ಈ ಹಗರಣದಿಂದ ಉಳ್ಳವರು ದೋಚಿದ್ದಾರೆ. ಸುಮಾರು 14 ಲಕ್ಷಕ್ಕೂ ಅಧಿಕ ಸಂತ್ರಸ್ತರು ಇದರಲ್ಲಿ ಹಣ ಕಳೆದುಕೊಂಡಿದ್ದಾರೆ. ಬಡವರನ್ನು ದೋಚಿದವರಿಗೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 2014ರ ನಂತರ ಇದೇ ಮೊದಲ ಬಾರಿಗೆ ತ್ರಿಪುರದಲ್ಲಿ ರಾಜಕೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದು ವಿಶೇಷ. ಫೆಬ್ರವರಿ 15ರಂದು ಮತ್ತೊಂದು ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ.
The Left has no commitment to democratic ideals and their conduct in Kerala, West Bengal and Tripura shows it. pic.twitter.com/S16yKuhLx1
— Narendra Modi (@narendramodi) February 8, 2018
ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ದಶಕಗಳ ಕಾಲ ಅಧಿಪತ್ಯ ನಡೆಸಿದ ಸಿಪಿಐ ಎಂ ಸರ್ಕಾರ ನೆಲಕಚ್ಚಲಿದ್ದು, ಬಿಜೆಪಿ- ಐಪಿಎಫ್ ಟಿ ಮೈತ್ರಿಕೂಟಕ್ಕೆ ಭರ್ಜರಿ ಜಯ ಲಭಿಸಲಿದೆ ಎನ್ನಲಾಗಿದೆ. ಮಾರ್ಚ್ 03ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications