Tripura Election Results 2023: ತಿಪ್ರಾ ಮೋಥಾ ಮೇಲೆ ಬಿಜೆಪಿ ಕಣ್ಣು, ಒಂದು ಬೇಡಿಕೆ ಬಿಟ್ಟು ಎಲ್ಲವೂ ಒಪ್ಪಿಗೆ!
ಭಾರತೀಯ ಜನತಾ ಪಕ್ಷವು 'ಗ್ರೇಟರ್ ತ್ರಿಪುರಾ ಪ್ರತ್ಯೇಕ ರಾಜ್ಯ ಹೊರತುಪಡಿಸಿ ತಿಪ್ರಾ ಮೋಥಾದ ಎಲ್ಲಾ ಬೇಡಿಕೆಗಳನ್ನು ಸ್ವೀಕರಿಸುತ್ತದೆ' ಎಂದು ಹೇಳಿದೆ.
ಅಗರ್ತಲ, ಮಾರ್ಚ್ 02: ತ್ರಿಪುರಾ ವಿಧಾನಸಭಾ ಚುನಾವಣೆಯ ಮತ ಏಣಿಕೆ ನಡೆಯುತ್ತಿದ್ದು, ಕೆಲವೇ ಗಮಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಇದರ ಬೆನ್ನಲ್ಲೆ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ ತಿಪ್ರಾ ಮೋಥಾ ಪಕ್ಷಕ್ಕೆ ಗಾಳ ಹಾಕುತ್ತಿದೆ. ಬುಡಕಟ್ಟಿನ್ಟು ಮತಗಳನ್ನು ತನ್ನತ್ತ ಸೆಳೆದುಕೊಂಡಿರುವ ತಿಪ್ರಾ ಮೋಥಾದ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ.
ಭಾರತೀಯ ಜನತಾ ಪಕ್ಷವು 'ಗ್ರೇಟರ್ ತ್ರಿಪುರಾ ಪ್ರತ್ಯೇಕ ರಾಜ್ಯ ಹೊರತುಪಡಿಸಿ ತಿಪ್ರಾ ಮೋಥಾದ ಎಲ್ಲಾ ಬೇಡಿಕೆಗಳನ್ನು ಸ್ವೀಕರಿಸುತ್ತದೆ' ಎಂದು ಆಡಳಿತ ಪಕ್ಷವು ಗುರುವಾರ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದೆ. ಮುಖ್ಯಮಂತ್ರಿ ಮಾಣಿಕ್ ಸಹಾ ಅವರ ಬಿಜೆಪಿ 32 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಹೊಸ ಪಕ್ಷ 11 ಸ್ಥಾನಗಳಲ್ಲಿ ಮುಂದಿದ್ದು, ಬುಡಕಟ್ಟು ಸಮುದಾಯದ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ.

ಮಧ್ಯಾಹ್ನ 2 ಗಂಟೆಗೆ ಬಿಜೆಪಿ 32 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಹುಮತಕ್ಕಿಂತ ಒಂದು ಸ್ಥಾನ ಮುಂದಿದೆ. ಒಂದ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದೆ. ಬಿಜೆಪಿ ಮಿತ್ರಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ ಕೂಡ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದೆ.
ರಾಜಮನೆತನದ ಮುಖ್ಯಸ್ಥ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ ಬರ್ಮಾ ಸ್ಥಾಪಿಸಿದ ತಿಪ್ರಾ ಮೋಥಾ ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ ಮುಂದಿದ್ದು, ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆಯಿದೆ. ಪ್ರತಿಪಕ್ಷವಾದ ಎಡರಂಗ ಮತ್ತಿ ಕಾಂಗ್ರೆಸ್ ಒಟ್ಟಾರೆ 15 ರಲ್ಲಿ ಮುನ್ನಡೆ ಸಾಧಿಸಿದೆ. ಅಂದರೆ ತಿಪ್ರಾ ಮೋಥಾದ ಬೆಂಬಲವಿಲ್ಲದಿದ್ದರೂ ಸಹ ಬಿಜೆಪಿ ಗೆಲುವಿನ ಸ್ಪಷ್ಟ ಹಾದಿಯನ್ನು ಹೊಂದಿದೆ.
"ನಾವು ರಾಜ್ಯದಲ್ಲಿ ಮುಂದಿನ ಸರ್ಕಾರವನ್ನು ರಚಿಸುತ್ತಿದ್ದೇವೆ. ಮೊದಲಿನಿಂದಲೂ ನಾವು ಹೇಳುತ್ತಾ ಬಂದಿದ್ದೇವೆ ಇಂದು ಅದನ್ನೇ ಹೇಳುತ್ತೇವೆ. ಇಬ್ಬರು ಕೇಂದ್ರ ನಾಯಕರಾದ ಫಣೀಂದ್ರನಾಥ್ ಶರ್ಮಾ ಮತ್ತು ಸಂಬಿತ್ ಪಾತ್ರ ಚುನಾವಣಾ ಮೇಲ್ವಿಚಾರಣೆಗೆ ಬಂದಿದ್ದಾರೆ" ಎಂದು ಬಿಜೆಪಿಯ ತ್ರಿಪುರಾ ಘಟಕದ ಮುಖ್ಯ ವಕ್ತಾರ ಸುಬ್ರತಾ ಚಕ್ರವರ್ತಿ ತಿಳಿಸಿದ್ದಾರೆ.

ತಿಪ್ರಾ ಮೋಥಾ ಒಂದು ಹೊಸ ಪಕ್ಷವಾಗಿದ್ದರೂ ಸಹ, ಅದು ತ್ರಿಪುರಾ ಜನರಿಗೆ ಗ್ರೇಟರ್ ತ್ರಿಪುರಾ ಪ್ರತ್ಯೇಕ ರಾಜ್ಯ ನೀಡುವ ಭರವಸೆಯಿಂದ ಚುನಾವಣೆ ಸ್ಪರ್ಧಿಸಿದೆ. ಈಗಾಗಲೇ ಇದರ ಪ್ರಭಾವ ಬುಡಕಟ್ಟು ಕ್ಷೇತ್ರಗಳಲ್ಲಿ ಕಾಣುತ್ತಿದೆ. 2018 ರಲ್ಲಿ ಐಪಿಎಫ್‌ಟಿ ಮತ್ತು ಬಿಜೆಪಿ ಅದೇ ಭರವಸೆಯ ಹಿನ್ನೆಲೆಯಲ್ಲಿ ವಿಜಯ ಗಳಿಸಿದ್ದರು. ಆದರೆ, ಐಪಿಎಫ್‌ಟಿ ಬುಡಕಟ್ಟು ಪಕ್ಷವು ಬೇಡಿಕೆ ಈಡೇರಿಸುವಲ್ಲಿ ವಿಫಲವಾಯಿತು. ಇದರಿಂದಾಗಿ ಪ್ರದ್ಯೋತ್ ದೇಬ್ ಬರ್ಮಾ ಹೊಸ ಪಕ್ಷ ಸ್ಥಾಪಿಸಿ ಚುನಾವಣೆಗಾ ಕಣಕ್ಕೆ ಧುಮುಕಿದ್ದಾರೆ.
ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ ಬರ್ಮಾ 2019 ರಲ್ಲಿ ತಿಪ್ರಾ ಮೋಥಾವನ್ನು ಪ್ರಾರಂಭಿಸಿದರು. 2021 ರಲ್ಲಿ ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬೇರೆ ಪಕ್ಷಗಳಿಗೆ ಎಚ್ಚರಿಕೆಯ ಗಂಟೆ ನೀಡಿದ್ದರು. ಕೌನ್ಸಿಲ್ ರಾಜ್ಯದ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಒಳಗೊಂಡಿ. ಅದರ ಜನಸಂಖ್ಯೆಯ ಶೇಕಡಾ 90 ರಷ್ಟು ಭಾಗ ಬುಡಕಟ್ಟು ಜನಾಂಗದವರಾಗಿದ್ದು, ಚುನಾವಣೆಯಲ್ಲಿ ತಿಪ್ರಾ ಮೋಥಾ 18 ಸ್ಥಾನ, ಬಿಜೆಪಿ 10 ಮತ್ತು ಐಪಿಎಫ್‌ಟಿ ಶೂನ್ಯ ಸಾಧನೆ ಮಾಡಿತ್ತು.












Click it and Unblock the Notifications