Ramangar Bus Tragedy: ಹೆದ್ದಾರಿಯಲ್ಲಿ ಬಸ್ ಅಪಘಾತ, 15 ಸಾವು, 20 ಮಂದಿಗೆ ಗಾಯ
Ramanagar Highway Tradegy: ಭಾರತ ಅಕ್ರಮಿತ ಜಮ್ಮು ಮತ್ತು ಕಾಶ್ಮೀರ ವ್ಯಾಪ್ತಿಯ ಉಧಂಪುರ ಜಿಲ್ಲೆಯಲ್ಲಿ ಧಾರುಣ ಘಟನೆಯೊಂದು ನಡೆದಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ತುಂಬಿದ್ದ ಬಸ್ ಉರುಳಿಬಿದ್ದ ಪರಿಣಾಮ ಸುಮಾರು 15 ಮಂದಿ ಮೃತಪಟ್ಟಿದ್ದಾರೆ. 20 ಮಂದಿಗೆ ಗಾಯಗಳಾಗಿವೆ ಎಂದು ವರದಿ ಆಗಿದೆ. ಹೆದ್ದಾರಿ ರಸ್ತೆಯು ತಿರುವುಗಳಿಂದ ಕೂಡಿದ್ದು, ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಕಾಶ್ಮೀರ ಮಾಧ್ಯಮಗಳ ಪ್ರಕಾರ, ತಿರುವುಗಳು, ಗುಡ್ಡ ಬೆಟ್ಟಗಳು ಇರುವ ರಾಮನಗರ-ಉಧಂಪುರ ಹೆದ್ದಾರಿಯಲ್ಲಿ ಪ್ರಯಾಣಿಕರ ಬಸ್ ಸೋಮವಾರ ಬೆಳಗ್ಗೆ ಉರುಳಿ ಬಿದ್ದಿದೆ. ಕನಿಷ್ಠ ಹದಿನೈದು ಮಂದಿ ಮೃತಪಟ್ಟಿದ್ದಾರೆ. ರಸ್ತೆಯಲ್ಲಿದ್ದ ಇತರ ವಾಹನಗಳ ಸವಾರರು, ಪ್ರಯಾನಿಕರು ಅಪಘಾತಕ್ಕೀಡಾದ ಬಸ್ ನಲ್ಲಿದ್ದ ಜನರನ್ನು ರಕ್ಷಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು, ರಕ್ಷಣಾ ಸಿಬ್ಬಂದಿ ಧಾವಿಸಿದ್ದಾರೆ.

ರಾಮನಗರದಿಂದ ಉಧಂಪುರಕ್ಕೆ ಸಂಪರ್ಕಿಸುವ ಹೆದ್ದಾರಿ ಇದಾಗಿದ್ದು, ತಿರುವು ಮುರುವು ರಸ್ತೆ ಇದಾಗಿದೆ. ಎಂದಿನಂತೆ ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ನಿಯಂತ್ರಿಸುವ ಯತ್ನ ವಿಫಲವಾಗಿದ್ದು, ಬಸ್ ಸ್ಕಿಡ್ ಆಗಿ ಉರುಳಿಬಿದ್ದಿದೆ. ಅಪಘಾತದ ತೀವ್ರತೆ ಹೆಚ್ಚಿದ್ದ ಕಾರಣ ಸಾವು ನೋವು ಸಂಭವಿಸಿವೆ ಎಂದು ವರದಿ ಆಗಿದೆ.
ಜೆಕೆಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸಂತಾಪ
ಅಪಘಾತ ಪ್ರಕರಣ ಕುರಿತು ಎಕ್ಸ್ ಮಾಡಿರುವ ಜೆಕೆಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಉಧಂಪುರ-ರಾಮ್‌ನಗರ ಬಸ್ ಅಪಘಾತದ ದುರಂತದಿಂದ ತೀವ್ರ ದುಃಖಿತನಾಗಿದ್ದೇನೆ. ಈ ಅಪಘಾತದಿಂದ ಪ್ರಕರಣದಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ತಿಳಿಸಿರುವ ಅವರು, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಕೇಂದ್ರ ಸಚಿವರ ತುರ್ತು ಸ್ಪಂದನೆ, ವಿಮಾನದಲ್ಲಿ ಗಾಯಾಳು ರವಾನೆ
ಘಟನೆ ಬಳಿಕ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸ್ಪಂದಿಸಿದ್ದು, ಅಪಘಾತದ ಬಗ್ಗೆ ಉಧಮ್‌ಪುರ ಜಿಲ್ಲಾ ಆಯುಕ್ತ (ಡಿಸಿ) ಮಿಂಗಾ ಶೆರ್ಪಾ ಅವರೊಂದಿಗೆ ಮಾತನಾಡಿದ್ದಾರೆ. ಇಂತಹ ಘಟನೆ ನಡೆಯಬಾರದಿತ್ತು. ಉಧಮ್‌ಪುರದ ಲೋಕಸಭಾ ಸಂಸದರಾಗಿರುವ ಸಿಂಗ್, ಪರಿಸ್ಥಿತಿ ಪರಿಶೀಲಿಸುವಂತೆ ಸೂಚಿಸಿದ ಅವರು, ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಗಂಭೀರ ಗಾಯಾಳುಗಳನ್ನು ವಿಮಾನದಲ್ಲಿ ಸಾಗಾಣೆ
"ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಕೈಗೊಳ್ಳಲಾಗಿದೆ. ಭಾರೀ ಸಾವುನೋವುಗಳನ್ನು ನಿರೀಕ್ಷಿಸಲಾಗಿದೆ. ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ. ಗಾಯಾಳುಗಳನ್ನು ವೈದ್ಯಕೀಯ ಸಹಾಯಕ್ಕಾಗಿ ಸ್ಥಳಾಂತರಿಸಲಾಗುವುದು. ಗಂಭೀರವಾಗಿ ಗಾಯಗೊಂಡವರನ್ನು ವಿಮಾನದಲ್ಲಿ ಸಾಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಮನೋಜ್ ಸಿನ್ಹಾ ಸಂತಾಪ
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮಹಾನಿರ್ದೇಶಕ ಮನೋಜ್ ಸಿನ್ಹಾ ಅವರು ಸಹ ಬಸ್ ಅಪಘಾತದ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರುವ ಅವರು, ಮೃತರ ಕುಟುಂಬಸ್ಥರಿಗೆ ಸಂತಾಪ ತಿಳಿಸಿದ್ದಾರೆ. "ಜಿಲ್ಲಾ ಆಡಳಿತ, ಪೊಲೀಸ್, ಎಸ್‌ಡಿಆರ್‌ಎಫ್ ಮತ್ತು ಆರೋಗ್ಯ ಇಲಾಖೆಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ನಿರ್ದೇಶಿಸಿದ್ದೇನೆ" ಎಂದು ಅವರು ಎಕ್ಸ್ ಪೊಸ್ಟ್ ಮಾಡಿದ್ದಾರೆ.












Click it and Unblock the Notifications