ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಚಾರ ನಿಯಮ ಉಲ್ಲಂಘನೆ; ವಾಹನ ಸವಾರರಿಗೆ ಕೇಂದ್ರದ ಅಘಾತ

|
Google Oneindia Kannada News

ಬೆಂಗಳೂರು, ಜನವರಿ 07 : ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019ರ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ಹಿನ್ನಡೆಯಾಗಿದೆ. ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ಮೊತ್ತದ ದಂಡ ವಿಧಿಸುವ ಕಾಯ್ದೆಗೆ ಜನರು ವಿರೋಧ ವ್ಯಕ್ತಪಡಿಸಿದ್ದರು.

ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚನೆಯೊಂದನ್ನು ಕಳಿಸಿದೆ. ಸಂಚಾರ ನಿಯಮ ಉಲ್ಲಂಘನೆ ದಂಡ ಮೊತ್ತವನ್ನು ರಾಜ್ಯ ಸರ್ಕಾರಗಳು ಕಡಿತಗೊಳಿಸುವಂತಿಲ್ಲ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ ಸರ್ಕಾರವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ ಸರ್ಕಾರ

ಸಂಸತ್ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಅನ್ನು ಅಂಗೀಕರಿಸಿದೆ. ರಾಷ್ಟ್ರಪತಿಗಳ ಒಪ್ಪಿಗೆ ಇಲ್ಲದೇ ರೂಪಿಸಿದ ಕಾಯ್ದೆಗೆ ರಾಜ್ಯಗಳು ತಿದ್ದುಪಡಿ ತರುವಂತಿಲ್ಲ. ಆದ್ದರಿಂದ, ದಂಡ ಮೊತ್ತ ಕಡಿತ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸಂಚಾರಿ ನಿಯಮ ಉಲ್ಲಂಘನೆ ದಂಡ ಮೊತ್ತ ಕಡಿತಸಂಚಾರಿ ನಿಯಮ ಉಲ್ಲಂಘನೆ ದಂಡ ಮೊತ್ತ ಕಡಿತ

ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಭಾರೀ ಮೊತ್ತದ ದಂಡ ವಿಧಿಸುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019ರ ಸೆಪ್ಟೆಂಬರ್ 1ರಿಂದ ದೇಶಾದ್ಯಂತ ಜಾರಿಗೆ ಬಂದಿತ್ತು. ದುಬಾರಿ ದಂಡಕ್ಕೆ ವಿವಿಧ ರಾಜ್ಯಗಳ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ದೇಶದಲ್ಲೇ ಅತಿ ಹೆಚ್ಚು ದಂಡ ಬಿದ್ದ ದಾಖಲೆ ಒಡಿಶಾ ಟ್ರಕ್ ಡ್ರೈವರ್ ಗೆ!ದೇಶದಲ್ಲೇ ಅತಿ ಹೆಚ್ಚು ದಂಡ ಬಿದ್ದ ದಾಖಲೆ ಒಡಿಶಾ ಟ್ರಕ್ ಡ್ರೈವರ್ ಗೆ!

ಕಾನೂನು ಸಲಹೆ ಬಳಿಕ ಕ್ರಮ

ಕಾನೂನು ಸಲಹೆ ಬಳಿಕ ಕ್ರಮ

ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಜಾರಿಯಾದ ಬಳಿಕ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ದಂಡಮೊತ್ತವನ್ನು ಪರಿಷ್ಕರಣೆ ಮಾಡಿದ್ದವು. ಕೇಂದ್ರ ಸರ್ಕಾರ ಈ ಕುರಿತು ಕಾನೂನು ಸಲಹೆ ಕೇಳಿತ್ತು. ಈ ಸಲಹೆಯ ಅನ್ವಯ ರಾಜ್ಯ ಸರ್ಕಾರ ದಂಡ ಮೊತ್ತ ಪರಿಷ್ಕರಣೆ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.

ರಾಷ್ಟ್ರಪತಿಗಳ ಅನುಮೋದನೆ ಅಗತ್ಯ

ರಾಷ್ಟ್ರಪತಿಗಳ ಅನುಮೋದನೆ ಅಗತ್ಯ

ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಸಂಸತ್ತಿನ ಕಾಯ್ದೆ. ರಾಜ್ಯಗಳು ಇದರಲ್ಲಿ ಉಲ್ಲೇಖಿಸಿದ ದಂಡ ಮೊತ್ತವನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಕಾಯ್ದೆ ರೂಪಿಸಿದಾಗ ಅದರ ತಿದ್ದುಪಡಿಗೆ ರಾಷ್ಟ್ರಪತಿಗಳ ಒಪ್ಪಿಗೆ ಬೇಕು ಎಂದು ಅಟಾರ್ನಿ ಜನರಲ್ ಅಭಿಪ್ರಾಯ ಪಡೆದ ಬಳಿಕ ಕಾನೂನು ಸಚಿವಾಲಯ ಹೇಳಿದೆ.

ದುಬಾರಿ ದಂಡ ಮೊತ್ತ

ದುಬಾರಿ ದಂಡ ಮೊತ್ತ

ದೇಶಾದ್ಯಂತ 2019ರ ಸೆಪ್ಟೆಂಬರ್ 1ರಿಂದ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದರೆ ದುಬಾರಿ ದಂಡವನ್ನು ಪಾವತಿ ಮಾಡಬೇಕಿತ್ತು. ಕುಡಿದು ವಾಹನ ಚಾಲನೆ ಮಾಡಿದರೆ 10 ಸಾವಿರ, ಹೆಲ್ಮೆಟ್ ಇಲ್ಲವಾದಲ್ಲಿ 2 ಸಾವಿರ, ಡಿಎಲ್ ಇಲ್ಲದಿದ್ದರೆ 5 ಸಾವಿರ ಹೀಗೆ ವಿವಿಧ ನಿಯಮ ಉಲ್ಲಂಘನೆಗೆ ದುಬಾರಿ ಮೊತ್ತದ ದಂಡ ಹಾಕಲಾಗುತ್ತಿತ್ತು.

ರಾಜ್ಯ ಸರ್ಕಾರಗಳಿಂದ ಕಡಿತ

ರಾಜ್ಯ ಸರ್ಕಾರಗಳಿಂದ ಕಡಿತ

ಕರ್ನಾಟಕ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳು ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಅನ್ವಯ ವಿಧಿಸಲಾಗಿದ್ದ ದಂಡವನ್ನು ಪರಿಷ್ಕರಣೆ ಮಾಡಿದ್ದವು. ಇದರಿಂದಾಗಿ ಕೇಂದ್ರ ಸರ್ಕಾರ ಕಾನೂನು ತಜ್ಞರ ಮೊರೆ ಹೋಗಿತ್ತು.

English summary
State governments should not cut fine for the traffic rules violation under new Motar Vehicle (Amendment) Act 2019 directed road transport and highway ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X