ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್‌ನಿಂದ ವಜಾಗೊಂಡ ಭಾರತೀಯ ಉದ್ಯೋಗಿಗಳ ಪರದಾಟ

|
Google Oneindia Kannada News

ನವದೆಹಲಿ, ನ. 10: ಎಲಾನ್ ಮಸ್ಕ್ ಟ್ವಿಟ್ಟರ್‌ನಿಂದ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಇದರಲ್ಲಿ ಭಾರತೀಯರು ಸೇರಿದ್ದಾರೆ. ಆದರೆ, ಕೆಲಸ ಕಳೆದುಕೊಂಡಿರುವ H1B ವೀಸಾದಲ್ಲಿ ನೆಲೆಸಿರುವ ಭಾರತೀಯರ ಸಂಕಷ್ಟ ಇನ್ನೂ ಅಧಿಕವಾಗಿದೆ.

ಹೌದು, ನೂರಾರು ಭಾರತೀಯರು ಎಲಾನ್ ಮಸ್ಕ್ ನಿರ್ಧಾರಕ್ಕೆ ಕೆಲಸ ಕಳೆದುಕೊಂಡಿದ್ದಾರೆ. ಇಷ್ಟು ದಿನ ಕೆಲಸ ಕೊಟ್ಟ ಸಂಸ್ಥೆ ಬಗ್ಗೆ ಉತ್ತಮ ಅಭಿಪ್ರಾಯವನ್ನೇ ವ್ಯಕ್ತಪಡಿಸಿರುವ ಭಾರತೀಯರು, ತಮ್ಮ ಸಂಕಷ್ಟಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್‌ನಿಂದ 180ಕ್ಕೂ ಹೆಚ್ಚು ಭಾರತದ ಉದ್ಯೋಗಿಗಳ ವಜಾ; ಕೇಂದ್ರ ಐಟಿ ಸಚಿವ ಹೇಳಿದ್ದೇನು?ಟ್ವಿಟ್ಟರ್‌ನಿಂದ 180ಕ್ಕೂ ಹೆಚ್ಚು ಭಾರತದ ಉದ್ಯೋಗಿಗಳ ವಜಾ; ಕೇಂದ್ರ ಐಟಿ ಸಚಿವ ಹೇಳಿದ್ದೇನು?

ಟ್ವಿಟ್ಟರ್‌ನಿಂದ ವಜಾಗೊಂಡಿರುವ H1B ವೀಸಾದಾರರು ತಮ್ಮ ವೀಸಾಗಳನ್ನು ಮರಳಿ ಪಡೆಯಲು ಹೊಸ ಸಂಸ್ಥೆಯನ್ನು ಸೇರಬೇಕಿದೆ. ಹೀಗಾಗಿ ಹೊಸ ಕೆಲಸ ಹುಡುಕಲು ಅವರಿಗಿರುವುದು ಕೇವಲ 60 ದಿನಗಳು ಮಾತ್ರ.

ಕೆಲಸ ಕಳೆದುಕೊಂಡ ಹಲವು ಜನ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ತಾವು ಸಂಸ್ಥೆಗಾಗಿ ದುಡುದದ್ದನ್ನು, ಸಂಸ್ತೆತಮ್ಮನ್ನು ಉಳಿಸಿಕೊಲ್ಳದಿರುವುದನ್ನು ಅತೀ ನೋವಿನಿಂದ ಬರೆದುಕೊಂಡಿದ್ದಾರೆ. ಅದರಲ್ಲಿ ಸುಜಾತಾ ಕೃಷ್ಣಸ್ವಾಮಿ ಎಂಬುವವರು, ತಾವು ಪೂರ್ಣ ಗರ್ಭಾವಸ್ಥೆಯಲ್ಲಿ ಇದ್ದರೂ ಕೆಲಸ ಮಾಡಿದೆ. ಆದರೂ ಕೆಲಸ ಉಳಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ನನ್ನ ಕೆಲಸ, ಸಂಸ್ಥೆಯನ್ನು ಪ್ರೀತಿಸಿ ಹಗಲು-ರಾತ್ರಿ ಕೆಲಸ ಮಾಡಿದೆ

ನಾನು ನನ್ನ ಕೆಲಸ, ಸಂಸ್ಥೆಯನ್ನು ಪ್ರೀತಿಸಿ ಹಗಲು-ರಾತ್ರಿ ಕೆಲಸ ಮಾಡಿದೆ

ಟ್ವಿಟ್ಟರ್‌ನಲ್ಲಿ ತನ್ನ ಸಂಕಷ್ಟವನ್ನು ಹಂಚಿಕೊಂಡಿರುವ ಸುಜಾತಾ ಕೃಷ್ಣಸ್ವಾಮಿ, "ಈ ವರ್ಷದ ಆರಂಭದಲ್ಲಿ ಪೂರ್ಣ ಗರ್ಭಿಣಿಯಾಗಿದ್ದಾಗ ಸಮಯದಲ್ಲಿಯೂ, ಟ್ವಿಟ್ಟರ್‌ನ ನಿಯಂತ್ರಕ ಕಟ್ಟುಪಾಡುಗಳನ್ನು ಪೂರೈಸಲು ನಿರ್ಣಾಯಕ ಬಳಕೆದಾರ-ಫೇಸಿಂಗ್ ಗೌಪ್ಯತೆ ವೈಶಿಷ್ಟ್ಯವನ್ನು ಯಶಸ್ವಿ ಮಾಡಲು ನಾನು ಹಗಲು ರಾತ್ರಿ ಶ್ರಮಿಸಿದೆ. ಬಳಕೆದಾರರಿಗೆ ಭದ್ರತೆ ಮತ್ತು ಗೌಪ್ಯತೆ ಭರವಸೆಗಳನ್ನು ಪೂರೈಸಲು ನಾನು ಪ್ರತಿದಿನ ಕಷ್ಟ ಪಟ್ಟಿದ್ದೇನೆ. ನಾನು ನನ್ನ ಕೆಲಸವನ್ನು, ನನ್ನ ತಂಡವನ್ನು ಇಷ್ಟಪಟ್ಟಿದ್ದೇನೆ. ಟ್ವಿಟರ್‌ನಲ್ಲಿ ಇದ್ದ ಸಮಯದಲ್ಲಿ ನಾನು ಮಾಡಿದ ಕೆಲಸದ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇನೆ. ಆದರೆ ದುರದೃಷ್ಟವಶಾತ್, ನನ್ನ ಸಂಸ್ಥೆ ನನ್ನನ್ನು ಮರಳಿ ಪ್ರೀತಿಸಲಿಲ್ಲ" ಎಂದಿದ್ದಾರೆ.

H1B ವೀಸಾ ಹೊಂದಿರುವವರ ಮೇಲೆ ಭಾರಿ ಪರಿಣಾಮ

H1B ವೀಸಾ ಹೊಂದಿರುವವರ ಮೇಲೆ ಭಾರಿ ಪರಿಣಾಮ

ಟ್ವಿಟ್ಟರ್ ಭಾರತ ಸೇರಿದಂತೆ ಹಲವು ಕಡೆ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದೆ. ಭಾರತದ ವಿಷಯಕ್ಕೆ ಬಂದರೆ, ಕಂಪನಿಯು ಸುಮಾರು 200 ಉದ್ಯೋಗಿಗಳಲ್ಲಿ ಶೇಕಡಾ 90 ರಷ್ಟು ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ಹೇಳಲಾಗಿದೆ. ಇದು ಹೆಚ್ಚು ಪರಿಣಾಮ ಬೀರುವುದು H1B ವೀಸಾಗಳನ್ನು ಹೊಂದಿರುವ ವಿದೇಶಿ ನಾಗರಿಕರು, ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಅನೇಕ ಭಾರತೀಯರ ಮೇಲೆ.

H1B ವೀಸಾವು ವಲಸೆ ಅಲ್ಲದ ವೀಸಾ ಆಗಿದ್ದು, ಅಮೆರಿಕಾ ಆಧಾರಿತ ಕಂಪನಿಗಳು ಒಂದು ಅವಧಿಗೆ ವಿದೇಶಿ ಉದ್ಯೋಗಿಗಳನ್ನು ಸಾಮಾನ್ಯವಾಗಿ ಮೂರರಿಂದ ಆರು ವರ್ಷಗಳವರೆಗೆ ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಸಂದರ್ಭದಲ್ಲಿ, ಅನೇಕ H1B ವೀಸಾ ಹೊಂದಿರುವವರು ಪ್ರಭಾವಿತ ಟ್ವಿಟ್ಟರ್ ಉದ್ಯೋಗಿಗಳಲ್ಲಿ ಸೇರಿದ್ದಾರೆ. ಅವರು ಇನ್ನು 60 ದಿನಗಳೊಳಗೆ ಕೆಲಸವನ್ನು ಹುಡುಕಬೇಕಾಗುತ್ತದೆ. ಇಲ್ಲದಿದ್ದರೇ ತಮ್ಮ ತಾಯ್ನಾಡಿಗೆ ಹಿಂತಿರುಗಬೇಕಾಗುತ್ತದೆ.

ಬೇರೆ ಕೆಲಸ ಹುಡುಕಲು ಇರುವುದು ಕೇವಲ 60 ದಿನ!

ಬೇರೆ ಕೆಲಸ ಹುಡುಕಲು ಇರುವುದು ಕೇವಲ 60 ದಿನ!

ಈ H1B ವೀಸಾದಾರರಲ್ಲಿ ಅನೇಕ ಭಾರತೀಯರು ಸೇರಿದ್ದಾರೆ. ಅವರಲ್ಲಿ ಕೆಲವರು ತಮ್ಮ ಸಂಕಟವನ್ನು ಟ್ವಿಟ್ಟರ್ ಮತ್ತು ಲಿಂಕ್ಡ್‌ಇನ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಟೆಸ್ಟ್ 2 ರಲ್ಲಿ ಇದ್ದ ಮಾಜಿ ಸಾಫ್ಟ್‌ವೇರ್ ಇಂಜಿನಿಯರ್ ರುಚಿತಾ ಪೆರೇರಾ, ಕೆಲಸ ಹುಡುಕಲು ಸೀಮಿತ ಸಮಯವನ್ನು ಹೊಂದಿರುವ ಟ್ವಿಟ್ಟರ್ ಉದ್ಯೋಗಿಗಳಲ್ಲಿ ತಾನೂ ಒಬ್ಬರು ಎಂದಿದ್ದಾರೆ.

"ದುರದೃಷ್ಟವಶಾತ್, ಟ್ವಿಟ್ಟರ್‌ನಲ್ಲಿ ವಜಾ ಮಾಡಿದ ಶೇ 50 ಉದ್ಯೋಗಿಗಳಲ್ಲಿ ನಾನೂ ಒಬ್ಬಳು. ನಾನು ಪ್ರಸ್ತುತ H1B ವೀಸಾದಲ್ಲಿದ್ದೇನೆ. ಇನ್ನೊಂದು ಅವಕಾಶವನ್ನು ಹುಡುಕಲು ಸೀಮಿತ ಸಮಯವನ್ನು ಹೊಂದಿದ್ದೇನೆ" ಎಂದು ತಿಳಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಮಾಜಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಇನ್ನೊಬ್ಬ ಉದ್ಯೋಗಿ ಸುಶ್ಮಿತಾ ಎಸ್ ನಟರಾಜ್, "ದುರದೃಷ್ಟವಶಾತ್, ನಾನು ಟ್ವಿಟ್ಟರ್‌ನ ವಜಾಗೊಳಿಸುವ ಭಾಗವಾಗಿದ್ದೇನೆ. ಅಂತಹ ಪ್ರತಿಭಾವಂತ ಜನರೊಂದಿಗೆ ಕೆಲಸ ಮಾಡುವ ಅವಕಾಶಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ನಾನು ಕೂಡ H1B ವೀಸಾದಲ್ಲಿದ್ದೇನೆ ಹಾಗಾಗಿ ಹೊಸ ಕೆಲಸವನ್ನು ಹುಡುಕಲು ನನಗೆ ಕೇವಲ 60 ದಿನಗಳಿವೆ" ಎಂದಿದ್ದಾರೆ.

ಸಂಕಷ್ಟದಲ್ಲಿ ಟೆಕ್ ಉದ್ಯಮ, ಕೆಲಸ ಸಿಗದ ಭೀತಿಯಲ್ಲಿ ಅನೇಕರು

ಸಂಕಷ್ಟದಲ್ಲಿ ಟೆಕ್ ಉದ್ಯಮ, ಕೆಲಸ ಸಿಗದ ಭೀತಿಯಲ್ಲಿ ಅನೇಕರು

ಇದೀಗ ಟೆಕ್ ಉದ್ಯಮದಲ್ಲಿನ ಪರಿಸ್ಥಿತಿಯನ್ನು ಪರಿಗಣಿಸಿ, ಭಾರತೀಯರು ಸೇರಿದಂತೆ ಅನೇಕ H1B ವೀಸಾ ಹೊಂದಿರುವವರು ಅಮೆರಿಕಾದಿಂದ ಮರಳಿ ಗಡೀಪಾರಾಗುವ ಭಯವನ್ನು ಹೊಂದಿದ್ದಾರೆ. ಸದ್ಯ ಟೆಕ್ ಉದ್ಯಮವು ಕಠಿಣ ಸಮಯವನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಉದ್ಯೋಗವನ್ನು ಪಡೆಯುವುದು ಕಷ್ಟಕರವಾದ ಕೆಲಸವಾಗಿದೆ.

ಅಮೆಜಾನ್, ಆಪಲ್‌ನಂತಹ ಹೆಚ್ಚಿನ ದೊಡ್ಡ ಟೆಕ್ ಕಂಪನಿಗಳು ಮುಂದಿನ ಕೆಲವು ತಿಂಗಳುಗಳವರೆಗೆ ನೇಮಕಾತಿಯನ್ನು ರದ್ದುಗೊಳಿಸಿವೆ. ನೆಟ್‌ಫ್ಲಿಕ್ಸ್, ಆಪಲ್ ಮತ್ತು ಇತರ ಹಲವು ಕಂಪನಿಗಳು ಉದ್ಯೋಗಿಗಳ ಒಂದು ಭಾಗವನ್ನು ವಜಾ ಮಾಡಿವೆ.

ಟ್ವಿಟ್ಟರ್ ನಂತರ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ 11,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ್ದಾರೆ. ಮೆಟಾದಲ್ಲಿನ ಉದ್ಯೋಗ ಕಡಿತವು ಪ್ರಪಂಚದಾದ್ಯಂತದ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ. ಇದರರ್ಥ, ಭಾರತದಲ್ಲಿಯೂ ಮೆಟಾ ಕೆಲವು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ.

English summary
Tough times for Indian workers with H1B visas, who laid off by Twitter, Indians fear being deported back from the US. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X