ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪಾಸಿಟೀವ್ ಸುದ್ದಿ: ದಾಖಲೆಯ ಚೇತರಿಕೆ, 30ಲಕ್ಷ ದಾಟಿದ ಗುಣಮುಖರು

|
Google Oneindia Kannada News

ನವದೆಹಲಿ, ಸೆ 7: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಅದೇ ವೇಗದಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವುದು ಸಮಾಧಾನಕರ ಅಂಶ.

Recommended Video

Corona ಅಂಕಿ ಅಂಶಗಳಲ್ಲಿ ಕಂಡ ಏಕೈಕ ಪಾಸಿಟಿವ್ ಸುದ್ದಿ | Oneindia Kannada

ಇದರ ಜೊತೆಗೆ ಕೊರೊನಾ ಸಾವಿನ ಪ್ರಮಾಣವೂ ವಿಶ್ವದಲ್ಲೇ ಅತಿ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇನ್ನು, ಕರ್ನಾಟಕದಲ್ಲಿ ಸತತವಾಗಿ ಕೆಲವು ದಿನಗಳಿಂದ, ಒಂಬತ್ತು ಸಾವಿರಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ.

ಬೆಂಗಳೂರಿನಲ್ಲಿವೆ 14,520 ಸಕ್ರಿಯ ಕಂಟೈನ್ಮೆಂಟ್ ಜೋನ್‌ಗಳು, ಎಲ್ಲಿ ಹೆಚ್ಚು?ಬೆಂಗಳೂರಿನಲ್ಲಿವೆ 14,520 ಸಕ್ರಿಯ ಕಂಟೈನ್ಮೆಂಟ್ ಜೋನ್‌ಗಳು, ಎಲ್ಲಿ ಹೆಚ್ಚು?

ದೇಶದಲ್ಲಿ ಒಟ್ಟು 42,04,613 ಲಕ್ಷ ಸೋಂಕಿತರಿದ್ದು, ಇದರಲ್ಲಿ ಸಕ್ರಿಯ ಪ್ರಕರಣ 8,82,497. ಇನ್ನು ಬಿಡುಗಡೆಗೊಂಡವರ ಸಂಖ್ಯೆ 32,50,429, ಮೃತ ಪಟ್ಟವರು 71,687. ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಸೋಂಕಿನ ಸಾವಿನ ಪ್ರಮಾಣ ಶೇ. 1.72.

ಕೊರೊನಾಗೆ ಹಿಂದಿನ 'ಮರ್ಯಾದೆ' ಈಗಿಲ್ಲ: ಜನರ ಈ ಡೋಂಟ್ ಕೇರ್ ಗೆ 6 ಕಾರಣಗಳುಕೊರೊನಾಗೆ ಹಿಂದಿನ 'ಮರ್ಯಾದೆ' ಈಗಿಲ್ಲ: ಜನರ ಈ ಡೋಂಟ್ ಕೇರ್ ಗೆ 6 ಕಾರಣಗಳು

ಜೂನ್ ಮಧ್ಯಭಾಗದಲ್ಲಿ ಆರಂಭವಾದ ಚೇತರಿಕೆ ಗ್ರಾಫ್ ಇದುವರೆಗೂ ಏರುತ್ತಲೇ ಇರುವುದು ಗಮನಿಸಬೇಕಾದ ಅಂಶ. ಜೂನ್ ಅಂತ್ಯದ ವೇಳೆಗೆ ಸುಮಾರು 15-20 ಸಾವಿರ ಸೋಂಕಿತರು ದಿನವೊಂದಕ್ಕೆ ಗುಣಮುಖರಾಗುತ್ತಿದ್ದರು.

ಕೊರೊನಾ ಚೇತರಿಕೆ ಪ್ರಮಾಣ ಶೇ. 77.32

ಕೊರೊನಾ ಚೇತರಿಕೆ ಪ್ರಮಾಣ ಶೇ. 77.32

ಚೇತರಿಕೆಯಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಾ ಜುಲೈ ಅಂತ್ಯದ ವೇಳೆ ಐವತ್ತು ಸಾವಿರ ಗಡಿ ದಾಡಿದೆ, ಇನ್ನು ಆಗಸ್ಟ್ ಅಂತ್ಯದ ವೇಳೆಗೆ ಬಹುತೇಕ 75ಸಾವಿರ ಸನಿಹಕ್ಕೆ ಬಂದು ನಿಂತಿದೆ. "ಒಟ್ಟಾರೆಯಾಗಿ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ. 77.32ಕ್ಕೆ ಏರಿಕೆಯಾಗಿದೆ"ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಕೇಂದ್ರ ಆರೋಗ್ಯ ಇಲಾಖೆ

ಕೇಂದ್ರ ಆರೋಗ್ಯ ಇಲಾಖೆ

"ವಿಶ್ವದ ಇತರ ಕೊರೊನಾ ಹಾವಳಿಯ ದೇಶಗಳಿಗೆ ಹೋಲಿಸಿದರೆ, ಚೇತರಿಕೆ ಪ್ರಮಾಣ ಜಾಸ್ತಿ ಮತ್ತು ಸಾವಿನ ಪ್ರಮಾಣ ಭಾರತದಲ್ಲೇ ಕಮ್ಮಿ. ಕೊರೊನಾ ಹಾವಳಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲಾಗುತ್ತಿದೆ"ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿಕೊಂಡಿದೆ.

ಕರ್ನಾಟಕದಲ್ಲಿ ಚೇತರಿಕೆ ಪ್ರಮಾಣ

ಕರ್ನಾಟಕದಲ್ಲಿ ಚೇತರಿಕೆ ಪ್ರಮಾಣ

ಇನ್ನು ಕರ್ನಾಟಕದಲ್ಲಿ ಸತತವಾಗಿ ಸುಮಾರು ಒಂಬತ್ತು ಸಾವಿರ ಸೋಂಕಿತರು ದಿನವೊಂದಕ್ಕೆ ಗುಣಮುಖರಾಗುತ್ತಿದ್ದಾರೆ. ಕಳೆದ ಭಾನುವಾರ 9,575 ರೋಗಿಗಳು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಇದು, ಇದುವರೆಗಿನ ಅತಿಹೆಚ್ಚು ಸಂಖ್ಯೆಯಾಗಿದೆ. ರಾಜ್ಯದಲ್ಲಿ ಇದುವರೆಗೆ 6,393 ಜನ ಮೃತ ಪಟ್ಟಿದ್ದಾರೆ.

ದಾಖಲೆಯ ಚೇತರಿಕೆ, 30ಲಕ್ಷ ದಾಟಿದ ಗುಣಮುಖರು

ದಾಖಲೆಯ ಚೇತರಿಕೆ, 30ಲಕ್ಷ ದಾಟಿದ ಗುಣಮುಖರು

ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 3,98,551, ಇದರಲ್ಲಿ ಗುಣಮುಖರಾದವರ ಸಂಖ್ಯೆ 2,92,873 ಮತ್ತು ಸಕ್ರಿಯ ಪ್ರಕರಣಗಳು 99,266. ಇದರಲ್ಲಿ ಬೆಂಗಳೂರು ನಗರ ಒಂದರಲ್ಲೇ ಸುಮಾರು ನಲವತ್ತು ಸಾವಿರ, ಬಳ್ಳಾರಿ, ಬೆಳಗಾವಿ ಯಲ್ಲಿ ನಾಲ್ಕು ಸಾವಿರ ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆಯಾಗಿ, ದಾಖಲೆ ಪ್ರಮಾಣದಲ್ಲಿ ಸೋಂಕಿತರು ಚೇತರಿಸಿಕೊಳ್ಳುತ್ತಿರುವುದು ನಿಟ್ಟುಸಿರು ಬಿಡುವಂತ ವಿಚಾರವಾಗಿದೆ.

English summary
Total Recovery Rate Increasing Day By Day In India, More Than 30 Lac People Recovered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X