Vladimir Putin: ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಎಂಟ್ರಿ, 5 ಹಂತದಲ್ಲಿ ಭರ್ಜರಿ ಭದ್ರತೆ!
ಭಾರತ ಮತ್ತು ರಷ್ಯಾ ಸ್ನೇಹ ಹಾಳು ಮಾಡಲು ಪಾಶ್ಚಿಮಾತ್ಯ ದೇಶಗಳು ತಮ್ಮ ಕೈಲಾಗುವ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಭಾರತ ಮತ್ತು ರಷ್ಯಾ ಮಾತ್ರ ಈ ವಿಚಾರದಲ್ಲಿ ಭಾರಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದ್ದು, ತಮ್ಮ ಸ್ನೇಹ ಮುಂದುವರಿಸಿಕೊಂಡು ಹೋಗುತ್ತಿವೆ. ಈ ಕಾರಣಕ್ಕೆ ಅಮೆರಿಕ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಸಿಕ್ಕಾಪಟ್ಟೆ ಹೊಟ್ಟೆ ಉರಿ ಈಗ ಶುರುವಾಗಿ ಬೆಂಕಿ ಹೊತ್ತಿಕೊಂಡಿದೆ. ಇಂತಹ ಸಮಯದಲ್ಲೇ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಎಂಟ್ರಿ, 5 ಹಂತದಲ್ಲಿ ಭರ್ಜರಿ ಭದ್ರತೆ!
ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಬೆನ್ನಿಗೆ ನಿಂತುಕೊಂಡಿವೆ. ಉಕ್ರೇನ್ ಸರಿಯಾಗಿ ಏಟು ತಿಂದು ಮೂಲೆ ಸೇರಿದ್ದರೂ ಪಾಶ್ಚಿಮಾತ್ಯ ದೇಶಗಳು ಮಾತ್ರ ಬೆಂಬಲ ಹಿಂಪಡೆದಿಲ್ಲ. ಅಲ್ಲದೆ ರಷ್ಯಾಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿ ಮಾಡಿದ್ದಾರೆ. ಹೀಗಿದ್ದಾಗ ರಷ್ಯಾ ಸಹಾಯಕ್ಕೆ ಬಂದಿದ್ದೇ ಭಾರತ. ಇಷ್ಟಾದರೂ ತನ್ನ ನೆಲದ ಜನರಿಗೆ ಸೂಕ್ತವಾಗಿ ತೈಲ, ಗ್ಯಾಸ್ ಸರಬರಾಜು ಮಾಡಲು ಕೂಡ ಪರದಾಡುತ್ತಿದೆ ಉಕ್ರೇನ್.

ಎಲ್ಲಾ ಅಲ್ಲೋಲ & ಕಲ್ಲೋಲ ಆಗಿರುವ ಸಮಯದಲ್ಲೇ ಭಾರತದಿಂದ ಖರೀದಿ ಮಾಡ್ತಾ ಇದ್ದ ತೈಲ ನಿಲ್ಲಿಸಿತ್ತು ಉಕ್ರೇನ್. ಅಲ್ಲದೆ ಈ ಸಮಯದಲ್ಲೇ ರಷ್ಯಾ ಬಳಿ ಭಾರತ ಖರೀದಿ ಮಾಡುತ್ತಿದ್ದ ಕಚ್ಚಾ ತೈಲ ವ್ಯಾಪಾರವನ್ನು ನಿಲ್ಲಿಸುವಂತೆ ಮಾಡಿ ಸೇಡು ತೀರಿಸಿಕೊಂಡಿತ್ತು. ಇದೀಗ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಎಂಟ್ರಿ ಹಿನ್ನೆಲೆಯಲ್ಲಿ ಉಕ್ರೇನ್ ಹೊಟ್ಟೆ ಮತ್ತಷ್ಟು ಉರಿಯುತ್ತಿದೆ. ಈಗ ಪುಟಿನ್ & ಪ್ರಧಾನಿ ಮೋದಿ ಅವರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲು ಸಜ್ಜಾಗಿದ್ದಾರೆ. ಈ ಕಾರಣಕ್ಕೆ ಅಮೆರಿಕ ಕೂಡ ಕೊತ ಕೊತ ಕುದಿಯುತ್ತಿದೆ.
ದೆಹಲಿ ಸುತ್ತಮುತ್ತ ಭಾರಿ ಕಟ್ಟೆಚ್ಚರ
ರಷ್ಯಾ ಅಧ್ಯಕ್ಷರ ಭಾರತ ಪ್ರವಾಸ ಹಿನ್ನೆಲೆ ಇದೀಗ ರಾಷ್ಟ್ರ ರಾಜಧಾನಿ ದೆಹಲಿ 7 ಸುತ್ತಿನ ಕೋಟೆ ಆಗಿದೆ. ಹಾಗೇ ಪುಟಿನ್ ಅವರಿಗೆ 5 ಹಂತದಲ್ಲಿ ಭದ್ರತೆ ಒದಗಿಸಲಾಗಿದ್ದು, ಕಮಾಂಡೋಗಳು & ಸ್ನೈಪರ್ಸ್ ಸೇರಿದಂತೆ ಡ್ರೋನ್‌ಗಳ ಮೂಲಕ ಕಟ್ಟೆಚ್ಚರ ವಹಿಸಲಾಗಿದೆ. ಇದರ ಜೊತೆಗೆ ಎಐ & ಗುಪ್ತಚರ ಮಾಹಿತಿ ಮೂಲಕ ಪ್ರತಿಕ್ಷಣ ಕೂಡ ರಷ್ಯಾ ಅಧ್ಯಕ್ಷರ ಸುರಕ್ಷತೆಗೆ ಗಮನ ಹರಿಸಲಾಗುತ್ತಿದೆ. ಹಾಗೇ ಜಾಗತಿಕವಾಗಿ ಕೂಡ ಈ ಭೇಟಿ ಸಾಕಷ್ಟು ಗಮನ ಸೆಳೆಯುತ್ತಿದೆ, ಮತ್ತೊಂದು ಕಡೆ ರಷ್ಯಾ ಅಧ್ಯಕ್ಷರು ಕೂಡ ತಮ್ಮದೇ ಖಾಸಗಿ ಭದ್ರತಾ ಸಿಬ್ಬಂದಿ ಕರೆದುಕೊಂಡು ಬರ್ತಾ ಇದ್ದು ದೆಹಲಿ ಈಗ ಏಳು ಸುತ್ತಿನ ಕೋಟೆಯಾಗಿದೆ.












Click it and Unblock the Notifications