ಉದ್ಯೋಗಿಗಳನ್ನ ತೆಗೆಯುವುದು ಅನಿವಾರ್ಯವಲ್ಲ, ಅದೊಂದು ಆಯ್ಕೆ ಅಷ್ಟೇ: ಜಾಗತಿಕ ಸಂಸ್ಥೆಗಳಿಗೆ ಟೊರಾನಿ CEO ಕಿವಿಮಾತು

ಜಾಗತಿಕ ಮಟ್ಟದಲ್ಲಿ ದೊಡ್ಡ ದೊಡ್ಡ ಐಟಿ ಹಾಗೂ ಮಲ್ಟಿನ್ಯಾಷನಲ್‌ ಕಂಪನಿಗಳು ಆರ್ಥಿಕ ಸಮಸ್ಯೆ ನೆಪವೊಡ್ಡಿ ಸಾವಿರಾರು ಉದ್ಯೋಗಿಗಳನ್ನ ವಜಾಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಅಮೆರಿಕ ಮೂಲದ ಫ್ಲೇವರ್ಡ್ ಸಿರಪ್ ತಯಾರಿಕಾ ಕಂಪನಿ ಟೊರಾನಿ (Torani)ಯ ಸಿಇಒ ಮೆಲಾನಿ ಡಲ್ಬೆಕ್ಕೊ ಅವರ ಮಾತುಗಳು ಕಾರ್ಪೊರೇಟ್ ವಲಯದಲ್ಲಿ ಹೊಸ ಭರವಸೆ ಮೂಡಿಸಿವೆ.

ಆರ್ಥಿಕ ಅಸ್ಥಿರತೆ ಎದುರಾದಾಗ ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕುವುದು ಕಂಪನಿಗಳ ಅನಿವಾರ್ಯವಲ್ಲ, ಅದೊಂದು ಕೇವಲ ಆಡಳಿತ ಮಂಡಳಿಯ ಸ್ವಾರ್ಥದ ಆಯ್ಕೆಯಾಗಿದೆ ಎಂದು ಟೊರಾನಿ ಸಿಇಒ ಮೆಲಾನಿ ಡಲ್ಬೆಕ್ಕೊ ಸ್ಪಷ್ಟಪಡಿಸಿದ್ದಾರೆ.

Torani CEO Melanie Dulbecco Proves Layoffs Are a Choice Avoiding Cuts in Covid Read Full Article Here

ಲೇಆಫ್ ಇಲ್ಲದೆ ಬೆಳೆದ ಸಂಸ್ಥೆ

ಮೆಲಾನಿ ಡಲ್ಬೆಕ್ಕೊ ಅವರು 1991ರಲ್ಲಿ ಟೊರಾನಿ ಸಂಸ್ಥೆಗೆ ಕೇವಲ 9ನೇ ಉದ್ಯೋಗಿಯಾಗಿ ಸೇರ್ಪಡೆಗೊಂಡಿದ್ದರು. ನಂತರ 1995ರಲ್ಲಿ ಅವರು ಸಂಸ್ಥೆಯ ಮೊದಲ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಅಂದು ಕೇವಲ 7 ಲಕ್ಷ ಡಾಲರ್ ವಾರ್ಷಿಕ ವಹಿವಾಟು ನಡೆಸುತ್ತಿದ್ದ ಕಂಪನಿ, ಇಂದು ಸುಮಾರು 500ಕ್ಕೂ ಅಧಿಕ ನೌಕರರನ್ನ ಹೊಂದುವುದರೊಂದಿಗೆ 800 ಮಿಲಿಯನ್ ಡಾಲರ್‌ಗೂ ಅಧಿಕ ಆದಾಯ ಗಳಿಸುವ ಹಂತಕ್ಕೆ ತಲುಪಿದೆ.

ಇಷ್ಟು ವರ್ಷಗಳಲ್ಲಿ ಯಾವುದೇ ಹಂತದಲ್ಲೂ ಕಂಪನಿ ಉದ್ಯೋಗಿಗಳನ್ನ ಕೆಲಸದಿಂದ ವಜಾಗೊಳಿಸಿಲ್ಲ. ಸಂಸ್ಥೆಯು ಪ್ರತಿವರ್ಷ ಸರಾಸರಿ 20% ವಾರ್ಷಿಕ ಬೆಳವಣಿಗೆ ಸಾಧಿಸುತ್ತಿರುವುದಕ್ಕೆ ನೌಕರರ ಮೇಲಿಟ್ಟಿರುವ ನಂಬಿಕೆ ಹಾಗೂ ದೀರ್ಘಕಾಲೀನ ಉದ್ಯೋಗ ಭದ್ರತೆಯೇ ಮೂಲ ಕಾರಣ ಎನ್ನುತ್ತಾರೆ ಮೆಲಾನಿ.

ಕೊರೊನಾ ಬಿಕ್ಕಟ್ಟಿನಲ್ಲೂ ನೌಕರರ ರಕ್ಷಣೆ

2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಇಡೀ ವಿಶ್ವವನ್ನ ಆವರಿಸಿದಾಗ, ಟೊರಾನಿ ಸಂಸ್ಥೆ ಕೂಡ ತೀವ್ರ ಆರ್ಥಿಕ ಸವಾಲನ್ನ ಎದುರಿಸಿತ್ತು. ಅದೇ ಸಮಯದಲ್ಲಿ ಸ್ಯಾನ್ ಲಿಯಾಂಡ್ರೊದಲ್ಲಿ ಹೊಸ ಕಾರ್ಖಾನೆಯನ್ನ ನಿರ್ಮಿಸಲು ಕಂಪನಿ ದೊಡ್ಡ ಮೊತ್ತದ ಸಾಲ ಕೂಡ ಪಡೆದುಕೊಂಡಿತ್ತು. ಲಾಕ್‌ಡೌನ್ ಘೋಷಣೆಯಾದಾಗ ಸಾಲ ಮರುಪಾವತಿಸಬೇಕಾದ ಒತ್ತಡವಿದ್ದರೂ, ಕಂಪನಿ ಲೇಆಫ್ ನಿರ್ಧಾರ ಕೈಗೊಳ್ಳದೆ ಪರ್ಯಾಯ ಮಾರ್ಗಗಳನ್ನ ಆಯ್ದುಕೊಂಡಿತು.

ಅನಗತ್ಯ ಖರ್ಚುಗಳನ್ನ ಕಡಿತಗೊಳಿಸಿತು, ಜಾಹೀರಾತು ವೆಚ್ಚವನ್ನ ತಗ್ಗಿಸಿತು ಮತ್ತು ಅಧಿಕಾರಿಗಳ ಅಧಿಕೃತ ಪ್ರವಾಸಗಳನ್ನ ರದ್ದುಮಾಡಿತು. ಜತೆಗೆ, ರೆಸ್ಟೋರೆಂಟ್‌ಗಳ ಬದಲಿಗೆ ಆನ್‌ಲೈನ್ ಶಾಪಿಂಗ್ ಹಾಗೂ ಕಿರಾಣಿ ಅಂಗಡಿಗಳ ಮೂಲಕ ಮಾರಾಟ ಹೆಚ್ಚಿಸುವ ಹೊಸ ತಂತ್ರಗಾರಿಕೆಯನ್ನ ರೂಪಿಸಿತು. ಪರಿಣಾಮವಾಗಿ, ಅದೇ ವರ್ಷ ಕಂಪನಿಯ ಆದಾಯದಲ್ಲಿ 15% ಹೆಚ್ಚಳ ಕಂಡುಬಂತು.

ಎಐ ತಂತ್ರಜ್ಞಾನ ಮತ್ತು ಉದ್ಯೋಗ ಭದ್ರತೆ

ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಆಟೊಮೇಷನ್ ಕಾರಣದಿಂದ ಮನುಷ್ಯನ ಶ್ರಮದ ಅಗತ್ಯ ಕಡಿಮೆಯಾಗುತ್ತಿದೆ ಎಂಬ ಆತಂಕ ಎಲ್ಲೆಡೆ ಮನೆಮಾಡಿದೆ. ಈ ಬಗ್ಗೆ ಮಾತನಾಡಿರುವ ಮೆಲಾನಿ, ತಮ್ಮ ಸಂಸ್ಥೆಯಲ್ಲಿ ಮಾರುಕಟ್ಟೆ ಸಂಶೋಧನೆ ಹಾಗೂ ಮಾರಾಟದ ಲೆಕ್ಕಾಚಾರಕ್ಕೆ ಎಐ ಬಳಸಲಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.

ಆದರೆ, ತಂತ್ರಜ್ಞಾನವು ಮನುಷ್ಯರ ಕೆಲಸವನ್ನ ಸುಲಭಗೊಳಿಸಲು ಮತ್ತು ಪುನರಾವರ್ತನೆಯ ಶ್ರಮವನ್ನ ಕಡಿಮೆ ಮಾಡಲು ಬಳಕೆಯಾಗಬೇಕೇ ಹೊರತು, ಇರುವ ಉದ್ಯೋಗಿಗಳನ್ನ ಮನೆಗೆ ಕಳುಹಿಸಲು ಅಲ್ಲ ಎಂಬುದು ಅವರ ಅಭಿಪ್ರಾಯ. ನೌಕರರಿಗೆ ಉದ್ಯೋಗ ಸೆಕ್ಯೂರ್‌ ಎಂದೆನಿಸಿದರೆ ಮಾತ್ರ ಅವರು ಹೊಸ ತಂತ್ರಜ್ಞಾನವನ್ನ ಮುಕ್ತವಾಗಿ ಸ್ವೀಕರಿಸಿ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸುತ್ತಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+