ಸೋಮವಾರ ಅತಿ ಹೆಚ್ಚು ತಾಪಮಾನವಿರುವ ದೇಶದ 10 ನಗರಗಳು
ನವದೆಹಲಿ, ಮೇ 13: ಹಲವು ರಾಜ್ಯಗಳು ಚಂಡಮಾರುತದಿಂದ ತತ್ತರಿಸಿದರೆ ಇನ್ನು ಹಲವು ರಾಜ್ಯಗಳಲ್ಲಿ ಬಿಸಿಗಾಳಿಯಿಂದಾಗಿ ಜನರು ಮೃತಪಡುತ್ತಿದ್ದಾರೆ.
ಒಡಿಶಾದಲ್ಲಿ ಇತ್ತೀಚೆಗೆ ಅಪ್ಪಳಿಸಿದ್ದ ಫೋನಿ ಚಂಡಮಾರುತದಿಂದಾಗಿ ಇಡೀ ರಾಜ್ಯವೇ ಅಸ್ತವ್ಯಸ್ಥವಾಗಿದೆ. ಇನ್ನೂ ಸಹಜ ಸ್ಥಿತಿಗೆ ಮರಳಲು ಸಾಧ್ಯವಾಗಿಲ್ಲ. ಹಾಗೆಯೇ ಗರಿಷ್ಠ ತಾಪಮಾನ ಕೂಡ ಹೆಚ್ಚಳವಾಗಿದೆ.
ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್‌ಗಢ, ಉತ್ತರಪ್ರದೇಶ, ಕರ್ನಾಟಕದಲ್ಲಿಗರಿಷ್ಠ ಉಷ್ಣಾಂಶ 40 ಡಿಗ್ರಿಗಿಂತಲೂ ಹೆಚ್ಚಿದೆ.

ಮಹಾರಾಷ್ಟ್ರದ ಬ್ರಹ್ಮಪುರಿಯಲ್ಲಿ ಗರಿಷ್ಠ ಉಷ್ಣಾಂಶ 45.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬ್ರಹ್ಮಪುರಿ-ಮಹಾರಾಷ್ಟ್ರ-45.6 ಡಿಗ್ರಿ ಸೆಲ್ಸಿಯಸ್
ಚಂದ್ರಾಪುರ-ಮಹಾರಾಷ್ಟ್ರ-45 ಡಿಗ್ರಿ ಸೆಲ್ಸಿಯಸ್
ರಾಜ್‌ನಂದ್ ಗಾವ್-ಛತ್ತೀಸ್‌ಗಢ-45 ಡಿಗ್ರಿ ಸೆಲ್ಸಿಯಸ್
ದುರ್ಗ-ಛತ್ತೀಸ್‌ಗಢ-44.6 ಡಿಗ್ರಿ ಸೆಲ್ಸಿಯಸ್
ಬಂದಾ-ಉತ್ತರ ಪ್ರದೇಶ-44.2 ಡಿಗ್ರಿ ಸೆಲ್ಸಿಯಸ್
ನಾಗಪುರ-ಮಹಾರಾಷ್ಟ್ರ-44 ಡಿಗ್ರಿ ಸೆಲ್ಸಿಯಸ್
ರಾಮಗುಂಡಂ-ತೆಲಂಗಾಣ-44 ಡಿಗ್ರಿ ಸೆಲ್ಸಿಯಸ್
ಆದಿಲಾಬಾದ್-ತೆಲಂಗಾಣ-43.8 ಡಿಗ್ರಿ ಸೆಲ್ಸಿಯಸ್
ಮಾಲೆಗಾವ್-ಮಹಾರಾಷ್ಟ್ರ-43.8 ಡಿಗ್ರಿ ಸೆಲ್ಸಿಯಸ್
ರಾಯಚೂರು-ಕರ್ನಾಟಕ- 43 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.











Click it and Unblock the Notifications