ವಡಕ್ಕನ್ ದೊಡ್ಡ ನಾಯಕರೇನಲ್ಲ: ರಾಹುಲ್ ಗಾಂಧಿ ಪ್ರತಿಕ್ರಿಯೆ

ನವದೆಹಲಿ, ಮಾರ್ಚ್ 15: ಕಾಂಗ್ರೆಸ್ ತೊರೆದು ಗುರುವಾರ ಬಿಜೆಪಿ ಸೇರ್ಪಡೆಯಾದ ಸೋನಿಯಾ ಗಾಂಧಿ ಅವರ ಆಪ್ತ ಟಾಮ್ ವಡಕ್ಕನ್ ಅವರೇನೂ ಪಕ್ಷದಲ್ಲಿ ದೊಡ್ಡ ಮುಖಂಡರಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ರಾಯ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಟಾಮ್ ವಡಕ್ಕನ್ ಅವರು ಬಿಜೆಪಿಗೆ ಸೇರ್ಪಡೆಯಾದ ವಿಚಾರಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ವಡಕ್ಕನ್ ಅವರಂತಹ ಹಿರಿಯ ಮತ್ತು ಪ್ರಮುಖ ನಾಯಕ ಪಕ್ಷ ತೊರೆದು, ಬಿಜೆಪಿ ಸೇರಿಕೊಂಡಿದ್ದಾರಲ್ಲ ಎಂಬ ಪ್ರಶ್ನೆಗೆ ರಾಹುಲ್, 'ವಡಕ್ಕನ್? ಇಲ್ಲ, ಇಲ್ಲ. ವಡಕ್ಕನ್ ಅವರೇನೂ ದೊಡ್ಡ ನಾಯಕರಲ್ಲ' ಎಂದು ಪ್ರತಿಕ್ರಿಯಿಸಿದರು.

ಕೇರಳದವರಾದ ಟಾಮ್ ವಡಕ್ಕನ್, 1990ರ ದಶಕದಲ್ಲಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದಾಗ ಮಾಧ್ಯಮ ವಿಭಾಗದ ನೇತೃತ್ವ ವಹಿಸಿದ್ದರು. ಆ ಸಂದರ್ಭದಲ್ಲಿ ಅವರು ಸೋನಿಯಾ ಗಾಂಧಿ ಅವರ ಆಪ್ತರ ವಲಯದಲ್ಲಿ ಗುರುತಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಪಕ್ಷದಲ್ಲಿ ಅಷ್ಟೇನೂ ಸಕ್ರಿಯರಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

Tom Vadakkan is not big leader Congress president Rahul Gandhi

ಪುಲ್ವಾಮಾ ಉಗ್ರರ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಭಾರತೀಯ ವಾಯುಸೇನೆ ನಡೆಸಿದ ಬಾಲಕೋಟ್ ದಾಳಿ ಕುರಿತಾದ ಕಾಂಗ್ರೆಸ್ ನಿಲುವಿನಿಂದ ಬೇಸರಗೊಂಡು ಪಕ್ಷ ತೊರೆಯುತ್ತಿರುವುದಾಗಿ ಟಾಮ್ ಹೇಳಿದ್ದರು. ಅವರು ಕೇರಳದ ತ್ರಿಶ್ಶೂರ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+