ಟೋಲ್ ಗಳಲ್ಲಿ 500, 1000 ನೋಟು ಸ್ವೀಕರಿಸುತ್ತಾರೆ!

Posted By:
Subscribe to Oneindia Kannada

ನವದೆಹಲಿ, ನವೆಂಬರ್ 09: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಟೋಲ್ ಪ್ಲಾಜಾಗಳಲ್ಲಿ ಚಾಕಲೋಟ್ ಚಿಲ್ಲರೆ ಸಮಸ್ಯೆ ನಂತರ ಈಗ 500 ಹಾಗೂ 1,000 ರು ಗಳನ್ನು ಸ್ವೀಕರಿಸುವ ಬಗ್ಗೆ ಇದ್ದ ಗೊಂದಲಕ್ಕೆ ತೆರೆ ಬಿದ್ದಿದೆ.ಟೋಲ್ ಗಳಲ್ಲಿ ನವೆಂಬರ್ 11ರ ವರೆಗೆ 500, 1000ರೂ. ನೋಟುಗಳನ್ನು ಸ್ವೀಕರಿಸಬಹುದಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಿಸಿದೆ.

ಮಂಗಳವಾರ ಮಧ್ಯರಾತ್ರಿ 500, 1000 ರು. ಮುಖಬೆಲೆಯ ನೋಟುಗಳು ಬೆಲೆ ಕಳೆದುಕೊಂಡಿರುವುದು ಎಲ್ಲರಿಗೂ ಗೊತ್ತಿರಬಹುದು. ಆದರೆ, ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ನೋಟುಗಳು ಜಾರಿಗೆ ಬರುವ ತನಕ ಕೆಲ ಕ್ಷೇತ್ರಗಳಲ್ಲಿ ಹಳೆ ನೋಟು ಚಲಾವಣೆಗೆ ಕೇಂದ್ರ ಸರ್ಕಾರ ರಿಯಾಯಿತಿ ನೀಡಿತ್ತು.[ನೋಟಿಗೆ ಕಡಿವಾಣ : ಎಲ್ಲರೂ ತಿಳಿಯಬೇಕಾಗಿರುವುದೇನು?]

Toll plazas to accept old Rs 500, Rs 1,000 currency notes till November 11

ಆದರೆ, ಟೋಲ್ ಗಳಲ್ಲಿ 500, 1000ರೂ.ನೋಟುಗಳನ್ನು ಸ್ವೀಕರಿಸಬೇಕೆ? ಬೇಡವೇ? ಎಂಬ ಗೊಂದಲ ಸಿಬ್ಬಂದಿಗಳಲ್ಲಿ ಎದುರಾಗಿತ್ತು. ಗೊಂದಲ ನಿವಾರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ ಎಚ್ ಎಐ)ದ ಚೇರ್ಮನ್ ರಾಘವ್ ಚಂದ್ರ ಅವರು ಪ್ರಧಾನಿ ಸಚಿವಾಲಯದ ಜತೆ ಮಾತುಕತೆ ನಡೆಸಿ ನವೆಂಬರ್ 11ರ ವರೆಗೆ ಈ ನೋಟುಗಳನ್ನು ಗ್ರಾಹಕರಿಂದ ಸ್ವೀಕರಿಸಬಹುದು ಎಂದು ಸೂಚಿಸಿದ್ದಾರೆ.[ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ 500, 1,000 ತಗೊಳ್ತಿಲ್ಲ]

ಬೆಳಗ್ಗೆ ಹಲವು ಹೆದ್ದಾರಿಗಳಲ್ಲಿ ಚಿಲ್ಲರೆ ಸಮಸ್ಯೆ ಉಂಟಾಗಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ನಿಂತ ದೃಶ್ಯ ಹಲವೆಡೆ ಕಂಡು ಬಂದಿತ್ತು. ಕೋಟ್ಯಂತರ ರೂ. ವಹಿವಾಟು ನಡೆಯುವ ಹೆದ್ದಾರಿಗಳಿಂದ ನಷ್ಟ ಉಂಟಾಗುತ್ತದೆ ಎಂಬ ಹಿನ್ನೆಲೆಯಲ್ಲಿ ನಿಷೇಧಿತ 500, 1000ರೂ. ನೋಟುಗಳನ್ನು ನ.11ರ ವರೆಗೆ ಸ್ವೀಕರಿಸಿ ಬ್ಯಾಂಕಿಗೆಜಮಾ ಮಾಡುವಂತೆ ಪ್ರಾಧಿಕಾರ ಹೇಳಿದೆ. ದೇಶದೆಲ್ಲೆಡೆ ಇರುವ 365ಕ್ಕೂ ಅಧಿಕ ಟೋಲ್ ಗಳಿಗೂ ಈ ಆದೇಶ ಅನ್ವಯವಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The government, on Wednesday, asked them to accept the old Rs 500 and Rs 1,000 currency notes till November 11 midnight. The decision was taken after National Highways Authority of India (NHAI) Chairman Raghav Chandra took up the matter with the Prime Minister's Office.
Please Wait while comments are loading...