ಚಿತ್ರಗಳಲ್ಲಿ: ಗಲಭೆ ಪೀಡಿತ ಪ್ರದೇಶದಲ್ಲಿ ರಾಹುಲ್

ಬೆಂಗಳೂರು, ಸೆ.16: ಉತ್ತರ ಪ್ರದೇಶದ ಮುಜಾಫರ್ ನಗರ ಕೋಮುಗಲಭೆ ಪೀಡಿತ ಪ್ರದೇಶಗಳಿಗೆ ಸೋಮವಾರ ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭೇಟಿ ನೀಡಿದ್ದಾರೆ. ಗಲಭೆ ನಡೆದ ಒಂದು ವಾರದ ಬಳಿಕ ರಾಜಕೀಯ ಮುಖಂಡ ಇತ್ತ ಸುಳಿದಿದ್ದು, ಪರಿಸ್ಥಿತಿ ಈಗ ಹತೋಟಿಯಲ್ಲಿದೆ.

ಮುಜಾಫರ್ ‌ನಗರದಲ್ಲಿ ನಡೆದ ಕೋಮುಗಲಭೆ ಒಂದು ದೊಡ್ಡ ದುರಂತ ಎಂದಿದ್ದಾರೆ. ಅಲ್ಲದೆ ಘಟನೆಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ರಾಜ್ಯದ ಜನತೆಗೆ ಭದ್ರತೆ ಒದಗಿಸುವುದು ಉತ್ತರ ಪ್ರದೇಶ ರಾಜ್ಯ ಸರ್ಕಾರದ ಕರ್ತವ್ಯ, ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸಲು ಬೇಕಾದ ಎಲ್ಲ ರೀತಿಯ ಸಹಕಾರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಭರವಸೆ ನೀಡಿದರು. ಮುಜಾಫರ್ ನಗರಕ್ಕೆ ಕಾಂಗ್ರೆಸ್ ನಾಯಕರ ಭೇಟಿ ಚಿತ್ರಗಳು ಇಲ್ಲಿವೆ...

ಉಳಿದಂತೆ ಅಹಮದಾಬಾದಿನ ಶಾಲೆಗೆ ಆಗಮಿಸಿರುವ ಯುಎಸ್ Consul ಜನರಲ್ ಪೀಟರ್ ಹಾಸ್, ಚೆನ್ನೈ, ಮುಂಬೈ ನಲ್ಲಿ ಗಣೇಶೋತ್ಸವ ಮುಕ್ತಾಯ, ಮಿಸ್ ಅಮೆರಿಕ ಚಿತ್ರ, ಇಂಫಾಲದಲ್ಲಿ ವಿಶಿಷ್ಟ ಹಬ್ಬ, ಪ್ರಿಯಾಂಕಾ ಛೋಪ್ರಾ,ಮಾಜಿ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಜತೆ ನರೇಂದ್ರ ಮೋದಿ, ಅಗ್ನಿ ಕ್ಷಿಪಣಿ ಯಶಸ್ವಿ ಪರೀಕ್ಷೆ ತಂಜಾವೂರು ದೇಗುಲದ ದುರಂತ ಮುಂತಾದ ಚಿತ್ರಗಳಿವೆ ತಪ್ಪದೇ ನೋಡಿ

ಸೋನಿಯಾ ಸಾಂತ್ವನ

ಸೋನಿಯಾ ಸಾಂತ್ವನ

ಮುಜಾಫರ್ ನಗರ ಕೋಮು ಗಲಭೆಯ ಸಂತ್ರಸ್ತ ಕುಟುಂಬಗಳಿಗೆ ಸೋನಿಯಾ ಗಾಂಧಿ ಅವರು ಸಾಂತ್ವನ ಹೇಳಿದರು

ಬಿಗಿ ಭದ್ರತೆ

ಬಿಗಿ ಭದ್ರತೆ

ಉತ್ತರ ಪ್ರದೇಶದ ಮುಜಾಫರ್ ನಗರ ಕೋಮುಗಲಭೆ ಪೀಡಿತ ಪ್ರದೇಶಗಳಿಗೆ ಸೋಮವಾರ ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭೇಟಿ ನೀಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಬಿಗಿ ಭದ್ರತೆ ಒದಗಿಸಿತ್ತು.

ಸಂತ್ರಸ್ತರ ಗೋಳು

ಸಂತ್ರಸ್ತರ ಗೋಳು

ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂತ್ರಸ್ತರ ಗೋಳು ಆಲಿಸುತ್ತಿರುವ ದೃಶ್ಯ

ಹಲವೆಡೆ ಕರ್ಫ್ಯೂ

ಹಲವೆಡೆ ಕರ್ಫ್ಯೂ

ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಬಹುತೇಕ ಶಾಂತಿ ಸ್ಥಾಪನೆಯಾಗಿದ್ದು, ಕೆಲವೆಡೆ ಕರ್ಫ್ಯೂ ಮುಂದುವರೆಸಲಾಗಿದೆ.

ಚಿಂತಾಕ್ರಾಂತ ಸಿಎಂ

ಚಿಂತಾಕ್ರಾಂತ ಸಿಎಂ

ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕೂಡಾ ಸೌಹಾರ್ದ ಸಭೆಗಳನ್ನು ನಡೆಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸುತ್ತಿದ್ದಾರೆ.

ಗಲಭೆ ಪೀಡಿತ ಪ್ರದೇಶದಲ್ಲಿ

ಗಲಭೆ ಪೀಡಿತ ಪ್ರದೇಶದಲ್ಲಿ

ಉತ್ತರ ಪ್ರದೇಶದ ಮುಜಾಫರ್ ನಗರ ಕೋಮುಗಲಭೆ ಪೀಡಿತ ಪ್ರದೇಶಗಳಿಗೆ ಸೋಮವಾರ ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭೇಟಿ ನೀಡಿದ್ದಾರೆ.

ಸಂತ್ರಸ್ತರ ಬಳಿ ರಾಹುಲ್

ಸಂತ್ರಸ್ತರ ಬಳಿ ರಾಹುಲ್

ಮುಜಾಫರ್ ‌ನಗರದಲ್ಲಿ ನಡೆದ ಕೋಮುಗಲಭೆ ಒಂದು ದೊಡ್ಡ ದುರಂತ ಎಂದಿದ್ದಾರೆ. ಅಲ್ಲದೆ ಘಟನೆಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. PTI Photo by Manvender Vashist

ತಂಜಾವೂರಿನಲ್ಲಿ

ತಂಜಾವೂರಿನಲ್ಲಿ

ತಂಜಾವೂರು ದೇಗುಲದ ಆನೆ ವೆಲ್ಲೈಯಾಮ್ಮಳ್ ಮೃತಪಟ್ಟಿದ್ದು, ಅಂತಿಮ ಸಂಸ್ಕಾರವನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.

ಅಗ್ನಿ ಯಶಸ್ವಿ

ಅಗ್ನಿ ಯಶಸ್ವಿ

ವೀಲರ್ಸ್ ಐಲ್ಯಾಂಡ್: ಭಾರತದ ದೇಸಿ ನಿರ್ಮಿತ ದೂರಗಾಮಿ ಅಣ್ವಸ್ತ್ರ ಕ್ಷಿಪಣಿ ಅಗ್ನಿ V ಎರಡನೇ ಬಾರಿ ಪರೀಕ್ಷೆ ಯಶಸ್ವಿಯಾಗಿದೆ. ಸುಮಾರು 5000 ಕಿ.ಮೀ ದೂರದ ಟಾರ್ಗೆಟ್ ದ್ವಂಸಗೊಳಿಸುವ ಸಾಮರ್ಥ್ಯವನ್ನು ಅಗ್ನಿ ಹೊಂದಿದೆ.

ಮೋದಿ ಜತೆ ವಿಕೆ ಸಿಂಗ್

ಮೋದಿ ಜತೆ ವಿಕೆ ಸಿಂಗ್

ರೆವಾರಿ, ಹರ್ಯಾಣ: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭೂ ಸೇನೆ ಮಾಜಿ ಮುಖ್ಯಸ್ಥ ವಿಕೆ ಸಿಂಗ್ ಅವರ ಜತೆ ಮಾಜಿ ಸೈನಿಕರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬೋಟ್ ರೇಸ್

ಬೋಟ್ ರೇಸ್

ಇಂಫಾಲ: ಹೈಕ್ರು ಹಿಡೊಂಗ್ಬಾ(Heikru Hidongba) ಎಂದು ಕರೆಯಲ್ಪಡುವ ಬೋಟ್ ರೇಸ್ ಹಬ್ಬ

ತೆಲುಗಿನ ಅಮ್ಮಾಯಿ ಮಿಸ್ ಅಮೆರಿಕ

ತೆಲುಗಿನ ಅಮ್ಮಾಯಿ ಮಿಸ್ ಅಮೆರಿಕ

ಅಟ್ಲಾಂಟಿಕ್ ಸಿಟಿ: ಮಿಸ್ ನ್ಯೂಯಾಕ್ ನೀನಾ ಡವುಲುರಿ ಮಿಸ್ ಅಮೆರಿಕ 2014 ಸೌಂದರ್ಯ ಸ್ಪರ್ಧೆ ಗೆದ್ದ ಕ್ಷಣ.. ವಿವರ ಇಲ್ಲಿದೆ ಓದಿ

ಅಹಮದಾಬಾದಿನಲ್ಲಿ

ಅಹಮದಾಬಾದಿನಲ್ಲಿ

ಯುಎಸ್ Consul General ಪೀಟರ್ ಹಾಸ್ ಅವರು ಅಂಜುಮನ್ ಎ ಇಸ್ಲಾಮ್ ಶಾಲೆಯ ಮುಸ್ಲಿಂ ಬಾಲಕಿಯರ ಜತೆ ಚರ್ಚೆ ನಡೆಸಿದರು.

ಗಣೇಶ ವಿಸರ್ಜನೆ

ಗಣೇಶ ವಿಸರ್ಜನೆ

ಚೆನ್ನೈನಲ್ಲಿ ವಿನಾಯಕ ಚತುರ್ಥಿ ಹಬ್ಬ ಆಚರಣೆ ನಂತರ ಸಾರ್ವಜನಿಕವಾಗಿ ಮೆರವಣಿಗೆ ಮಾಡಿ ಸಮುದ್ರದಲ್ಲಿ ವಿಸರ್ಜನೆ ಮಾಡಲಾಯಿತು.

ವೈಜಯಂತಿಮಾಲಾ ಬಾಲಿ

ವೈಜಯಂತಿಮಾಲಾ ಬಾಲಿ

ಮಥುರಾ: ಹಿರಿಯ ನಟಿ ವೈಜಯಂತಿ ಮಾಲಾ ಬಾಲಿ ಆರು ಅಖಿಲ ಭಾರತ ಸ್ವಾಮಿ ಹರಿದಾಸ್ ಸಂಗೀತ ಸಮ್ಮೇಳನದಲ್ಲಿ ನರ್ತಿಸಿದ್ದು ಹೀಗೆ

ಓಣಂ ಹಬ್ಬ

ಓಣಂ ಹಬ್ಬ

ಕೊಯಮತ್ತೂರು: ಸಿದ್ದಪುದೂರು ಅಯ್ಯಪ್ಪ ದೇಗುಲದಲ್ಲಿ ಓಣಂ ಅಂಗವಾಗಿ ಹೂರಂಗೋಲಿ ಬಿಡಿಸಿ ಸಂಭ್ರಮಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+