ಚಿತ್ರಸುದ್ದಿ: ಉತ್ತರದಲ್ಲಿ ಮಳೆ, ಪ್ರವಾಹ ಇನ್ನಿತರ ಸುದ್ದಿ

ಬೆಂಗಳೂರು, ಆ.7: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ಅಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

ಅಸ್ಸಾಂನಲ್ಲಿ ಭಾರಿ ಮಳೆಯ ಕಾರಣ ಕಾಜಿರಂಗ ವನ್ಯಧಾಮ ಸೇರಿದಂತೆ ಇತರೆ ಕಾಡುಗಳಲ್ಲಿರುವ ಪ್ರಾಣಿಗಳು ಭೀತಿಯಲ್ಲಿ ಕಾಲದೂಡುತ್ತಿವೆ. ಇತ್ತ ಭುವನೇಶ್ವರ ನಗರ ಪ್ರದೇಶದಲ್ಲಿ ನಾಯಿಯೊಂದನ್ನು ಪ್ರವಾಹದಿಂದ ಪಾರು ಮಾಡಲು ಯತ್ನಿಸಿದ ವ್ಯಕ್ತಿಯ ಚಿತ್ರ ಗಮನ ಸೆಳೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಉಸ್ತಾದ್ ಅಮ್ಜದ್ ಅಲಿ ಖಾನ್ ಹಾಗೂ ಅವರ ಪುತ್ರರು, ಜೈಪುರದಲ್ಲಿ ಮಳೆ ಪ್ರವಾಹದ ನಡುವೆ ಕುಳಿತ ಮಹಿಳೆ, ಕೊಲ್ಕತ್ತಾದಲ್ಲಿ ವಿದ್ಯಾರ್ಥಿನಿಯರಿಂದ ಆಕರ್ಷಕ ಪಥಸಂಚಲನ, ರಾಂಚಿಯಲ್ಲಿ ಯಶವಂತ್ ಸಿನ್ಹಾ ಕಣ್ಣೀರಿಡುವಂತೆ ಮಾಡಿದ ಪೊಲೀಸರು, ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಿರುವ ಪ್ರೊ ಕಬಡ್ಡಿ ಲೀಗ್, ಶಾಂತಿ ನಿರೀಕ್ಷೆಯಲ್ಲಿರುವ ಇಸ್ರೇಲ್ ಗಾಜಾ ಗಡಿ ಭಾಗ, ಹೈದರಾಬಾದಿನಲ್ಲಿ ಕಾಮನ್ ವೆಲ್ತ್ ಪದಕ ವಿಜೇತರಿಗೆ ಸನ್ಮಾನ, ರಕ್ಷಾ ಬಂಧನ ಹಬ್ಬಕ್ಕೆ ರಾಖಿ ಖರೀದಿ, ಲಿಬಿಯಾಯಿಂದ ವಾಪಸ್ ಬಂದ ನರ್ಸ್ ಗಳು, ದೆಹಲಿಯಲ್ಲಿ ಸಿಎನ್ನಾಆರ್ ರಾವ್ ಮುಂತಾದ ಚಿತ್ರಗಳು ಇಲ್ಲಿವೆ

ಭುವನೇಶ್ವರನಗರದಲ್ಲಿ ಕಂಡುಬಂದ ಚಿತ್ರ

ಭುವನೇಶ್ವರನಗರದಲ್ಲಿ ಕಂಡುಬಂದ ಚಿತ್ರ

ಭುವನೇಶ್ವರನಗರದ ಕಾಪುಡಿಯಾ ಗ್ರಾಮದಲ್ಲಿ ನಾಯಿಯನ್ನು ಉಳಿಸಲು ಯತ್ನಿಸಿದ ವ್ಯಕ್ತಿಯೊಬ್ಬರು ಹೆಣಗಾಡಿದ ದೃಶ್ಯ

ಪ್ರವಾಹದ ನಡುವೆ ನೀರು ಹಿಡಿಯುವ ದೃಶ್ಯ

ಪ್ರವಾಹದ ನಡುವೆ ನೀರು ಹಿಡಿಯುವ ದೃಶ್ಯ

ಫಿಲಿಫೈನ್ಸ್ ನ ಹೆರ್ಮೊಸಾದಲ್ಲಿ ಪ್ರವಾಹದ ನಡುವೆ ನೀರು ಹಿಡಿಯುವ ದೃಶ್ಯ. ಹಲೊಂಗ್ ಚಂಡಮಾರುತದಿಂದ ದೇಶದ ವಿವಿಧೆಡೆ ಪ್ರವಾಹ ಭೀತಿ ಎದುರಾಗಿದೆ.AP/PTI

ಲಿಬಿಯಾದಿಂದ ಭಾರತಕ್ಕೆ ಬಂದ ನರ್ಸ್

ಲಿಬಿಯಾದಿಂದ ಭಾರತಕ್ಕೆ ಬಂದ ನರ್ಸ್

ಲಿಬಿಯಾದಿಂದ ಭಾರತಕ್ಕೆ ಬಂದ ಕೇರಳ ಮೂಲದ ನರ್ಸ್ ಒಬ್ಬರಿಗೆ ತಮ್ಮ ಮಗಳಿಂದ ಸಿಕ್ಕ ಮುತ್ತು.

ಮುಂಬೈನಲ್ಲಿ ವಿದ್ಯಾಬಾಲನ್ ಝಲಕ್

ಮುಂಬೈನಲ್ಲಿ ವಿದ್ಯಾಬಾಲನ್ ಝಲಕ್

ಮುಂಬೈನಲ್ಲಿ ನಟಿ ವಿದ್ಯಾಬಾಲನ್ ಅವರು ವಿದ್ಯಾರ್ಥಿಗಳ ಜತೆ ಕಂಡು ಬಂದಿದ್ದು ಹೀಗೆ. ವಿದ್ಯಾ ಅವರು ಅಂಧರಿಗೆ ಸ್ಮಾರ್ಟ್ ಸ್ಟಿಕ್ ಗಳನ್ನು ವಿತರಿಸಿದರು. PTI Photo by Shashank Parade

ನಾಗಪುರದಲ್ಲಿ ಮುಸ್ಲಿಮರಿಂದ ರಾಖಿ ಖರೀದಿ

ನಾಗಪುರದಲ್ಲಿ ಮುಸ್ಲಿಮರಿಂದ ರಾಖಿ ಖರೀದಿ

ನಾಗಪುರದಲ್ಲಿ ಮುಸ್ಲಿಮ್ ಮಹಿಳೆಯರಿಂದ ರಾಖಿ ಖರೀದಿ.

ರಾಂಚಿಯಲ್ಲಿ ಕಣ್ಣೀರಿಟ್ಟ ಯಶವಂತ್ ಸಿನ್ಹಾ

ರಾಂಚಿಯಲ್ಲಿ ಕಣ್ಣೀರಿಟ್ಟ ಯಶವಂತ್ ಸಿನ್ಹಾ

ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರು ಪೊಲೀಸರು ಪ್ರಯೋಗಿಸಿದ ಅಶ್ರುವಾಯುವಿನಿಂದ ಕಣ್ಣೀರಿಟ್ಟು ಕೆಲಕಾಲ ಬಳಲಿದರು. ಜಾರ್ಖಂಡ್ ವಿಧಾನಸಭೆಗೆ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರೊಡನೆ ಸಿನ್ಹಾ ಆಗಮಿಸಿದ್ದಾಗ ಈ ಘಟನೆ ನಡೆಯಿತು. PTI Photo

ಟಾಟಾ ಕುರಿತ ಕ್ಜೃತಿ ಲೋಕಾರ್ಪಣೆ

ಟಾಟಾ ಕುರಿತ ಕ್ಜೃತಿ ಲೋಕಾರ್ಪಣೆ

ನವದೆಹಲಿ: ಜೆಆರ್ ಡಿ ಟಾಟಾ ಕುರಿತ ಕ್ಜೃತಿ ಲೋಕಾರ್ಪಣೆ ಮಾಡಿದ ಭಾರತ ರತ್ನ ಸಿಎನ್ ಆರ್ ರಾವ್ ಹಾಗೂ ಅಸ್ಸೋಚಾಮ್ ಅಧ್ಯಕ್ಷ ರಾಣಾ ಕಪೂರ್ PTI Photo by Atul Yadav

ಪ್ರೊ ಕಬಡ್ಡಿ ಲೀಗ್ ಚಿತ್ರ

ಪ್ರೊ ಕಬಡ್ಡಿ ಲೀಗ್ ಚಿತ್ರ

ಪ್ರೊ ಕಬಡ್ಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯೂ ಮುಂಬಾ ನಡುವಿನ ಹಣಾಹಣಿ ಚಿತ್ರ

ಇಸ್ರೇಲ್ ಗಾಜಾ ಗಡಿಭಾಗದ ಚಿತ್ರ

ಇಸ್ರೇಲ್ ಗಾಜಾ ಗಡಿಭಾಗದ ಚಿತ್ರ

ಗಾಜಾ ಪಟ್ಟಿ ಭಾಗದಿಂದ ಸೇನೆ ಹಿಂತೆಗೆತಕ್ಕೆ ಇಸ್ರೇಲ್ ಮುಂದಾಗಿದ್ದು, ಗುಂಡಿನ ಚಕಮಕಿ ಸದ್ಯಕ್ಕೆ ನಿಂತಿದೆ

ಅಮ್ಜದ್ ಅಲಿ ಖಾನ್ ಮೋದಿ ಭೇಟಿ

ಅಮ್ಜದ್ ಅಲಿ ಖಾನ್ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಉಸ್ತಾದ್ ಅಮ್ಜದ್ ಅಲಿ ಖಾನ್ ಹಾಗೂ ಅವರ ಪುತ್ರರು

ವಿದ್ಯಾರ್ಥಿನಿಯರಿಂದ ಆಕರ್ಷಕ ಪಥಸಂಚಲನ

ವಿದ್ಯಾರ್ಥಿನಿಯರಿಂದ ಆಕರ್ಷಕ ಪಥಸಂಚಲನ

ಕೊಲ್ಕತ್ತಾದಲ್ಲಿ ವಿದ್ಯಾರ್ಥಿನಿಯರಿಂದ ಆಕರ್ಷಕ ಪಥಸಂಚಲನ

ಜೈಪುರದಲ್ಲಿ ಮಳೆ ಪ್ರವಾಹ

ಜೈಪುರದಲ್ಲಿ ಮಳೆ ಪ್ರವಾಹ

ಜೈಪುರದಲ್ಲಿ ಮಳೆ ಪ್ರವಾಹದ ನಡುವೆ ಕುಳಿತ ಮಹಿಳೆ

ಕಟಕ್ ನ ಪ್ರವಾಹದ ಚಿತ್ರ

ಕಟಕ್ ನ ಪ್ರವಾಹದ ಚಿತ್ರ

ಕಟಕ್: ಕಥಾಜೋಡಿ ನದಿ ತುಂಬಿ ಹರಿಯುತ್ತಿರುತ್ತಿರುವುದರಿಂದ ಮನೆ ಕಳೆದುಕೊಂಡು ಸುರಕ್ಷಿತ ಸ್ಥಳಕ್ಕೆ ಸಾಗುತ್ತಿರುವ ಗ್ರಾಮಸ್ಥರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+