ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಸಾಧ್ಯವಾದರೆ ಭಾರತದಲ್ಲಿ ಡಿಸೆಂಬರ್ ಅಂತ್ಯಕ್ಕೆ ಲಸಿಕೆ ಸಂಪೂರ್ಣ!

|
Google Oneindia Kannada News

ನವದೆಹಲಿ, ಜೂನ್ 9: ಕೊರೊನಾವೈರಸ್ ವಿರುದ್ಧ ಹೋರಾಟ ನಡೆಸಲು ಭಾರತ ಈ ವರ್ಷದ ಡಿಸೆಂಬರ್ ವೇಳೆಗೆ ಎಲ್ಲಾ ವಯಸ್ಕರಿಗೂ ಲಸಿಕೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಂಡಿದೆ. ಆದರೆ ಈಗ ಲಸಿಕೆ ಕಾರ್ಯಕ್ರಮ ಈಗ ನಡೆಯುತ್ತಿರುವ ವೇಗದಲ್ಲಿ ಇದನ್ನು ಸಾಧಿಸುವುದು ಅಸಾಧ್ಯ. ಹಾಗಿದ್ದರೂ ಭಾರತದಲ್ಲಿ ಈ ವರ್ಷಾಂತ್ಯದ ವೇಳೆಗೆ ಲಸಿಕೆಯ ಗುರಿಯನ್ನು ಸಾಧಿಸಬೇಕಿದ್ದರೆ ಈಗಿನ ಪ್ರಮಾಣಕ್ಕಿಂತ 5 ಪಟ್ಟು ವೇಗದಲ್ಲಿ ಲಸಿಕೆ ಅಭಿಯಾನ ನಡೆಯಬೇಕಿದೆ.

ಅದರಲ್ಲೂ ಜನಸಂಖ್ಯೆಯಲ್ಲಿ ಎರಡು ದೊಡ್ಡ ರಾಜ್ಯಗಳಾದ ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಲಸಿಕೆ ನೀಡುವ ವೇಗ ಈಗಿನ ಪ್ರಮಾಣಕ್ಕಿಂತ 9 ಪಟ್ಟು ಹೆಚ್ಚಿನ ವೇಗದಲ್ಲಿ ನಡೆಯಬೇಕು. ಹೀಗಿದ್ದಾಗ ಮಾತ್ರವೇ ಭಾರತ ಈ ವರ್ಷಾಂತ್ಯದಲ್ಲಿ ಎಲ್ಲಾ ವಯಸ್ಕರಿಗೂ ಲಸಿಕೆಯನ್ನು ಹಾಕುವ ಗುರಿಯನ್ನು ತಲುಪಲಿದೆ ಎಂದು ಈ ವರದಿ ಹೇಳಿದೆ.

ಕೊರೊನಾ ನಂತರ ಚರ್ಮದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಲೇಬೇಡಿ...ಕೊರೊನಾ ನಂತರ ಚರ್ಮದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಲೇಬೇಡಿ...

ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ ರಾಜ್ಯಗಳ ಜನಸಂಖ್ಯೆಯ ಆಧಾರದಲ್ಲಿ ಮತ್ತು ಈಗಾಗಲೇ ವಿತರಣೆ ಮಾಡಿರುವ ಲಸಿಕೆಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಮೊದಲ ಐದು ತಿಂಗಳಿನಲ್ಲಿ ಶೇಕಡಾ 12ಕ್ಕಿಂತ ಕಡಿಮೆ ಜನಸಂಖ್ಯೆಗೆ ಮೊದಲ ಡೋಸ್ ನೀಡಲಾಗಿದೆ. 2.5 ಶೇಕಡಾ ಜನರಿಗೆ ಮಾತ್ರವೇ ಎರಡು ಡೋಸ್‌ಗಳನ್ನು ನೀಡಲಾಗಿದೆ. ಅಂದರೆ ನಿತ್ಯವೂ ಸರಾಸರಿ 1.4 ಲಕ್ಷದಷ್ಟು ಜನರಿಗೆ ಮಾತ್ರವೇ ಲಸಿಕೆಯನ್ನು ನೀಡಲಾಗುತ್ತಿದೆ. ಡಿಸೆಂಬರ್ ವೇಳೆಗೆ ಉತ್ತರ ಪ್ರದೇಶದಲ್ಲಿ ಎಲ್ಲಾ ವಯಸ್ಕರಿಗೂ ಲಸಿಕೆ ಸಂಪೂರ್ಣಗೊಳಿಸಲು ನಿತ್ಯವೂ 13.2 ಲಕ್ಷ ಡೋಸ್‌ಗಳನ್ನು ಹಾಕಬೇಕಿದೆ. ಅಂದರೆ ಈಗಿನ ವೇಗಕ್ಕಿಂತ 9 ಪಟ್ಟು ಹೆಚ್ಚಿಸಿಕೊಳ್ಳಬೇಕಿದೆ.

ಬಿಹಾರದಲ್ಲಿ ಲಸಿಕೆ ಪಡೆದ ಪ್ರಮಾಣ

ಬಿಹಾರದಲ್ಲಿ ಲಸಿಕೆ ಪಡೆದ ಪ್ರಮಾಣ

ಈ ವರದಿ ಬಿಹಾರದ ಲಸಿಕೆ ಪ್ರಮಾಣವನ್ನು ಕೂಡ ವರದಿ ಮಾಡಿದೆ. ಬಿಹಾರದಲ್ಲಿ 12.6 ಶೇಕಡಾ ಜನರಿಗೆ ಮೊದಲ ಡೋಸ್ ನೀಡಲಾಗಿದೆ. ಎರಡನೇ ಡೋಸ್ ಲಸಿಕೆ ಪಡೆದವರ ಪ್ರಮಾಣ 2.6 ಶೇಕಡಾ. ಸದ್ಯ ನಿತ್ಯವೂ ಸರಾಸರಿ 78,000 ಲಸಿಕೆ ನೀಡುತ್ತಿರುವ ಇಲ್ಲಿ ನಿತ್ಯವೂ ಸರಾಸರಿ 6.6 ಲಕ್ಷ ಜನರಿಗೆ ಲಸಿಕೆ ನೀಡಬೇಕು. ಅಂದರೆ ಈಗಿನ ವೇಗಕ್ಕಿಂತ 8.4 ಶೇಕಡಾದಷ್ಟು ಹೆಚ್ಚಿಸಿಕೊಳ್ಳಬೇಕಿದೆ.

ಹೆಚ್ಚು ಪ್ರತಿಶತ ಹೊಂದಿರುವ ಹಿಮಾಚಲ ಪ್ರದೇಶದ ಸ್ಥಿತಿ

ಹೆಚ್ಚು ಪ್ರತಿಶತ ಹೊಂದಿರುವ ಹಿಮಾಚಲ ಪ್ರದೇಶದ ಸ್ಥಿತಿ

ಇನ್ನು ಮತ್ತೊಂದೆಡೆ ಹಿಮಾಚಲ ಪ್ರದೇಶ 38.1 ಶೇಕಡಾ ಪ್ರಮಾಣದಷ್ಟು ವಯಸ್ಕರಿಗೆ ಲಸಿಕೆಯ ಮೊದಲ ಡೋಸ್‌ಅನ್ನು ಪೂರ್ಣಗೊಳಿಸಿ ಶೇಕಡಾ ಪ್ರಮಾಣದಲ್ಲಿ ಉಳಿದೆಲ್ಲಾ ರಾಜ್ಯಗಳಿಗಿಂತ ಮುಂದಿದೆ. 7.9 ಶೇಕಡಾ ಜನಸಂಖ್ಯೆಗೆ ಎರಡು ಡೋಸ್‌ಗಳನ್ನು ಕೂಡ ಪೂರ್ಣಗೊಳಿಸಿದೆ. ಇಲ್ಲಿ 18,000ದಷ್ಟು ನಿತ್ಯವೂ ಲಸಿಕೆಯನ್ನು ಹಾಕಲಾಗುತ್ತಿದ್ದು ಅದನ್ನು 41,000 ಸಾವಿರಕ್ಕೆ ಏರಿಸಿಕೊಂಡರೆ ಡಿಸೆಂಬರ್ ವೇಳೆಗೆ ಪೂರ್ಣ ಪ್ರಮಾಣದ ಜನಸಂಖ್ಯೆಗೆ ಲಸಿಕೆಯನ್ನು ನೀಡಲು ಸಾಧ್ಯವಿದೆ. ಅಂದರೆ ಹಿಮಾಚಲ ಪ್ರದೇಶ ತನ್ನ ಲಸಿಕೆಯ ವೇಗವನ್ನು ದುಪ್ಪಟ್ಟಿಗಿಂತಲೂ ಹೆಚ್ಚಿಸಿಕೊಳ್ಳಬೇಕು.

ಕೇರಳದಲ್ಲಿಯೂ ಉತ್ತಮವಾಗಿದೆ ಲಸಿಕೆ ವೇಗ

ಕೇರಳದಲ್ಲಿಯೂ ಉತ್ತಮವಾಗಿದೆ ಲಸಿಕೆ ವೇಗ

ಕೇರಳದಲ್ಲಿ 31 ಪ್ರತಿಶತ ಜನರಿಗೆ ಮೊದಲ ಡೋಸ್ ನೀಡಲಾಗಿದ್ದು 8.1 ಶೇಕಡಾ ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಹೀಗಾಗಿ ಕೇರಳದಲ್ಲಿ ಡಿಸೆಂಬರ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆಯನ್ನು ಮುಗಿಸಬೇಕಿದ್ದರೆ 2.8 ಪಟ್ಟು ವೇಗವನ್ನು ಹೆಚ್ಚಿಸಿಕೊಳ್ಳಬೇಕಿದೆ.

ಹೆಚ್ಚಿನ ಜನಸಂಖ್ಯೆ ಇರುವ ರಾಜ್ಯಗಳಿಗೆ ಸವಾಲು

ಹೆಚ್ಚಿನ ಜನಸಂಖ್ಯೆ ಇರುವ ರಾಜ್ಯಗಳಿಗೆ ಸವಾಲು

ಇನ್ನು 18ಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯಿರುವ ಭಾರತದ ಮೊದಲ ಆರು ರಾಜ್ಯಗಳ ಪೈಕಿ ಐದು ರಾಜ್ಯಗಳಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದ ಲಸಿಕೆಯ ಗುರಿ ತಲುಪಲು ನಿತ್ಯ ನೀಡುವ ಲಸಿಕೆ ಪ್ರಮಾಣವನ್ನು ಒಟ್ಟಾರೆ 5 ಪಟ್ಟು ಹೆಚ್ಚಿಸಿಕೊಳ್ಳಬೇಕಿದೆ. ಅವುಗಳೆಂದರೆ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ತಮಿಳು ನಾಡು ಮತ್ತು ಮಧ್ಯ ಪ್ರದೇಶ. ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರ 5ಶೇಕಡಾಕ್ಕಿಂತ ಕೆಳಗಿದ್ದು ತನ್ನ ಲಸಿಕೆ ನೀಡುವ ವೇಗವನ್ನು 4.5 ರಷ್ಟು ಹೆಚ್ಚಿಸಿಕೊಳ್ಳಬೇಕಿದೆ. ಹೀಗಿದ್ದಾಗ ಮಾತ್ರ ಭಾರತ ಡಿಸೆಂಬರ್ ಅಂತ್ಯಕ್ಕೆ ಪೂರ್ಣ ಪ್ರಮಾಣದ ವಯಸ್ಕ ನಾಗರೀಕರಿಗೆ ಲಸಿಕೆ ನೀಡಲು ಸಾಧ್ಯವಾಗಲಿದೆ.

English summary
To reach target in December, India need to vaccinate 5 times better than current rate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X