ಮೋದಿಯಿಂದ ಕೇದಾರನಾಥ ಯಾತ್ರೆ, ಆಯೋಗಕ್ಕೆ ದೂರಿತ್ತ ಟಿಎಂಸಿ

ನವದೆಹಲಿ, ಮೇ 19: ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿರುವಾಗಲೇ ಪ್ರಧಾನಿ ಮೋದಿ ಅವರಿಗೆ ಕೇದಾರನಾಥ ಹಾಗೂ ಬದರಿನಾಥ ಯಾತ್ರೆ ಕೈಗೊಳ್ಳಲು ಅನುಮತಿ ನೀಡಿರುವುದನ್ನು ತೃಣಮೂಲ ಕಾಂಗ್ರೆಸ್ ಅಕ್ಷೇಪ ವ್ಯಕ್ತಪಡಿಸಿದೆ.

ಮೇ 19ರಂದು 7ನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆ ನಡೆದಿದೆ. 8 ರಾಜ್ಯಗಳ 59 ಮತ ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ, ಮೋದಿ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು ನೀಡಿದೆ.

ಮತದಾರರನ್ನು ಸೆಳೆಯಲು ಇದೇ ಸಮಯವನ್ನು ಮೋದಿ ಆಯ್ದುಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಲಾಗಿದೆ. ಮಾರ್ಚ್ 10 ರಿಂದ ಇಲ್ಲಿ ತನಕ 500ಕ್ಕೂ ಅಧಿಕ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರುಗಳು ದಾಖಲಾಗಿವೆ. ಪ್ರಧಾನಿ ಮೋದಿ ವಿರುದ್ಧವೇ 6 ದೂರು ದಾಖಲಾಗಿತ್ತು. ಆದರೆ, ಎಲ್ಲಾ ಪ್ರಕರಣಗಳಲ್ಲೂ ಚುನಾವಣಾ ಆಯೋಗದಿಂದ ಕ್ಲೀನ್ ಚಿಟ್‍ ಸಿಕ್ಕಿದೆ.

TMC writes to EC complaint against Modis Kedarnath Yatra

ಮೋದಿ ಅವರು ಸ್ಪರ್ಧಿಸಿರುವ ವಾರಾಣಸಿ ಸೇರಿದಂತೆ 59 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿರುವ ಸಂದರ್ಭದಲ್ಲೇ ಮೋದಿ ಅವರಿಗೆ ಯಾತ್ರೆ ಕೈಗೊಳ್ಳಲು ಅನುಮತಿ ಹೇಗೆ ನೀಡಲಾಯಿತು, ಮತದಾನ ನಡೆಯುವ ವೇಳೆ ಈ ರೀತಿ ಪ್ರವಾಸ ಮಾಡಿರುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಟಿಎಂಸಿ ವಾದಿಸಿದೆ.

ಶನಿವಾರದಂದು ಕೇದಾರನಾಥ ಯಾತ್ರೆ ಕೈಗೊಂಡಿದ್ದ ಮೋದಿ ಅವರು ಚಾರ್ ಧಾಮ್ ಗಳ ಪೈಕಿ ಮತ್ತೊಂದು ಪವಿತ್ರ ಕ್ಷೇತ್ರ ಬದರಿನಾಥ್ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಮೋದಿಯವರ ಯಾತ್ರೆ, ದೇಗುಲದ ಮುಂದೆ ಕೈಮುಗಿಯುವ ಚಿತ್ರ, ಗುಹೆಯಲ್ಲಿ ಧಾನ್ಯಸ್ಥರಾಗಿ ಕುಳಿತಿರುವ ದೃಶ್ಯ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+