Tirumala TTD: ತಿರುಪತಿಗೆ ಬೈಕ್‌ನಲ್ಲಿ ಹೋಗುವವರಿಗೆ ನಿರ್ಬಂಧ- ಈ ಸಮಯದಲ್ಲಿ ನೋ ಎಂಟ್ರಿ...
ತಿರುಪತಿಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಾರೆ. ಬೇಡಿದ ವರವನ್ನು ನೀಡುವ ತಿಮ್ಮಪ್ಪನಿಗೆ ಹರಕೆ ತೀರಿಸಿ, ವಿಶೇಷ ಪೂಜೆಗಳೊಂದಿಗೆ ಅಧಿಕ ದೇಣಿಗೆಯನ್ನು ನೀಡುತ್ತಾರೆ. ಹೀಗಾಗಿ ಏಳು ಬೆಟ್ಟಗಳ ಒಡೆಯ ತಿಮ್ಮಪ್ಪನನ್ನು ಶ್ರೀಮಂತ ದೇವರು ಎಂದು ಕರೆಯಲಾಗುತ್ತದೆ. ಅಂದಹಾಗೆ ದ್ವಿಚಕ್ರ ವಾಹನಗಳಲ್ಲಿ ತಿರುಪತಿಗೆ ಭೇಟಿ ನೀಡುವ ವಾಹನ ಸವಾರರಿಗೆ ನಿರ್ಬಂಧ ಹೇರಲಾಗಿದೆ. ಇದಕ್ಕೆ ಕಾರಣವನ್ನು ಟಿಟಿಡಿ ಹಂಚಿಕೊಂಡಿದೆ.
ಸಾಮಾನ್ಯವಾಗಿ ತಿರುಪತಿಗೆ ಜನ ರೈಲು, ಬಸ್ ಅಥವಾ ಖಾಸಗಿ ವಾಹನಗಳ ಮೂಲಕ ಆಗಮಿಸುತ್ತಾರೆ. ಆದರೆ ತಿರುಪತಿಗೆ ಹತ್ತಿರದಲ್ಲಿರುವ ಭಕ್ತರು, ಹಾಗೇ ದೂರದೂರುಗಳಿಂದ ಬಂದು ನಿಸರ್ಗವನ್ನು ಸವಿಯಲು ಬಯಸುವ ಪ್ರಯಾಣಿಕರು ದ್ವಿಚಕ್ರ ವಾಹನಗಳ ಮೂಲಕ ತಿತುಪತಿಗೆ ಭೇಟಿ ನೀಡುತ್ತಾರೆ. ಏಳು ಬೆಟ್ಟಗಳ ದಿವ್ಯ ರೂಪವನ್ನು ನೋಡಿ ಪುಳಕಿತರಾಗುತ್ತಾರೆ. ಆದರೆ ತಿರುಪತಿಗೆ ಬೈಕ್‌ನಲ್ಲಿ ಹೋಗುವವರಿಗೆ ನಿರ್ಬಂಧ ಹೇರಲಾಗಿದೆ. ಯಾವ ಸಮಯದಲ್ಲಿ ದ್ವಿಚಕ್ರವಾಹನದಲ್ಲಿ ತಿರುಪತಿಗೆ ಹೋಗಲು ನಿರ್ಬಂಧ ಹೇರಲಾಗಿದೆ.

ದೇವಸ್ಥಾನದ ಘೋಷಣೆ ಏನು?
ತಿರುಪತಿಗೆ ತೀರಾ ಸಮೀಪದಲ್ಲಿರುವ ಆಂಧ್ರದ ಹಲವು ಭಾಗಗಳಿಂದ ಹಾಗೂ ತಮಿಳುನಾಡಿನ ಆಂಧ್ರದ ಗಡಿ ಭಾಗದ ಊರುಗಳಿಂದ ದ್ವಿಚಕ್ರ ವಾಹನದಲ್ಲಿ ತಿರುಪತಿ ದೇವಸ್ಥಾನಕ್ಕೆ ಕೆಲ ಭಕ್ತರು ತೆರಳುತ್ತಾರೆ. ಆದರೆ ತಿರುಮಲ ತಿರುಪತಿ ದೇವಸ್ಥಾನವು ದ್ವಿಚಕ್ರ ವಾಹನಗಳನ್ನು ರಾತ್ರಿ 9 ರಿಂದ ಬೆಳಗ್ಗೆ 9 ರವರೆಗೆ ನಿರ್ಬಂಧಿಸಿದೆ. ಈ ಆದೇಶವು ಆಗಸ್ಟ್ 12 ರಿಂದ ಸೆಪ್ಟೆಂಬರ್ ಅಂತ್ಯದವರೆಗೆ ಇರುತ್ತದೆ ಎಂದು ಘೋಷಿಸಲಾಗಿದೆ. ಭಕ್ತರ ಸುರಕ್ಷತೆಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಅದು ಪ್ರಕಟಣೆಯಲ್ಲಿ ಹೇಳಿದೆ.
ನಿರ್ಬಂಧಕ್ಕೆ ಕಾರಣವೇನು?
ಇದು ಪ್ರಾಣಿಗಳ ಸಂತಾನಾಭಿವೃದ್ಧಿ ಕಾಲವಾಗಿರುವ ಕಾರಣ ರಾತ್ರಿ ವೇಳೆ ದ್ವಿಚಕ್ರವಾಹನ ಓಡಿಸುವುದು ಅಪಾಯಕಾರಿ ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದಾಗಿ ಸೆಪ್ಟೆಂಬರ್ 30ರವರೆಗೆ ತಿರುಮಲ ಮೌಂಟೇನ್ ಪಾಸ್ ನಲ್ಲಿ ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಮಾತ್ರ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಟಿಟಿಡಿ ಪ್ರಕಟಿಸಿದೆ. ಈ ಹೊಸ ವಿಧಾನ ನಿನ್ನೆಯಿಂದ (ಆಗಸ್ಟ್ 12) ತಕ್ಷಣದಿಂದಲೇ ಜಾರಿಗೆ ಬಂದಿದೆ. ಅಲ್ಲದೆ ತಿರುಮಲಕ್ಕೆ ದ್ವಿಚಕ್ರವಾಹನದಲ್ಲಿ ಬರುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ದೇವಸ್ಥಾನವು ಸೂಚಿಸಿದೆ.

ತಿರುಪತಿಯಲ್ಲಿ ಈ ಹಬ್ಬ ರದ್ದು
ತಿರುಪತಿ ಎಯುಮಲಯನ್ ದೇವಸ್ಥಾನದಲ್ಲಿ ಇದೇ 15 ರಿಂದ 17 ರವರೆಗೆ ಸಂಬಂಗಿ ಮಂಟಪದಲ್ಲಿ ವಾರ್ಷಿಕ ಬವಿತ್ರೋತ್ಸವ ಉತ್ಸವ ನಡೆಯಲಿದೆ. ಇದರಿಂದಾಗಿ 18ರಂದು ಬೆಳಗ್ಗೆ ನಡೆಯಬೇಕಿದ್ದ ತಿರುಕಲ್ಯಾಣ ಉತ್ಸವವನ್ನು ದೇವಸ್ಥಾನ ರದ್ದುಗೊಳಿಸಿದೆ. ಹೀಗಾಗಿ ಭಕ್ತರು ತಿರುಪತಿಗೆ ಭೇಟಿ ನೀಡುವಾಗ ಈ ಬಗ್ಗೆ ತಿಳಿದುರುವಂತೆ ಟಿಟಿಡಿ ಮನವಿ ಮಾಡಿದೆ.
ತಿರುಪತಿ ಜನಪ್ರಿಯ ದೇವಾಲಯ
ತಿರುಮಲ ತಿರುಪತಿ ದೇವಾಲಯವನ್ನು ವಿಷ್ಣು ದೇವನು ಕಲಿಯುಗದಲ್ಲಿ ವಾಸಿಸುವ ಐಹಿಕ ಸ್ಥಳವೆಂದು ವೈಭವಯುತವಾಗಿ ವಿವರಿಸಲಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ ಅದ್ಭುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವನ್ನು ನೋಡಬಹುದು.
ತಿರುಪತಿ ಭೂಮಿಯ ಮೇಲಿನ ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ಕಲಿಯುಗದಲ್ಲಿ ಭಕ್ತರನ್ನು ಆಶೀರ್ವದಿಸಲು ಭಗವಂತನು ಭೂಮಿಯ ಮೇಲೆ ತಿರುಪತಿಯಲ್ಲಿ ನೆಲೆಸುತ್ತಾನೆ ಎಂದು ಪುರಾಣದ ಕೆಲವು ಆಸಕ್ತಿದಾಯಕ ಕಥೆಗಳು ಹೇಳುತ್ತವೆ. ಹೀಗಾಗಿ ವರ್ಷದ ಯಾವುದೇ ದಿನ ಈ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಲಕ್ಷಕ್ಕೆ ಹತ್ತಿರದಲ್ಲಿರುತ್ತದೆ.












Click it and Unblock the Notifications