Get Updates
Get notified of breaking news, exclusive insights, and must-see stories!

Tirumala Laddu: ತಿರುಮಲ ಶ್ರೀವಾರಿ ಲಡ್ಡು ವಿವಾದ: ತುಪ್ಪದ ವಾಹನ ಜಿಪಿಎಸ್ ಮೂಲಕ ಟ್ರ್ಯಾಕಿಂಗ್!

ತಿರುಮಲ ಶ್ರೀವಾರಿ ಲಡ್ಡು ಪ್ರಸಾದ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಕರ್ನಾಟಕ ಹಾಲು ಒಕ್ಕೂಟ ಮಹತ್ವದ ನಿರ್ಧಾರ ಕೈಗೊಂಡಿದೆ. ಲಡ್ಡುಗಳನ್ನು ತಯಾರಿಸಲು ಟಿಟಿಡಿಗೆ ಕಳುಹಿಸಲಾಗುವ ನಂದಿನಿ ತುಪ್ಪದ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದೆ. ಈ ಮೂಲಕ ತುಪ್ಪದ ವಾಹನವನ್ನು ಕರ್ನಾಟಕ ಹಾಲು ಒಕ್ಕೂಟ ಟ್ರ್ಯಾಕ್ ಮಾಡಲಿದೆ.

ಹೌದು.. ಪ್ರಸ್ತುತ ಪ್ರತಿ ತಿಂಗಳು 350 ಟನ್ ತುಪ್ಪವನ್ನು ಮೂರು ತಿಂಗಳ ಕಾಲ ಟಿಟಿಡಿಗೆ ಕಳುಹಿಸುವ ಒಪ್ಪಂದವನ್ನು ಕರ್ನಾಟಕ ಹಾಲು ಒಕ್ಕೂಟ ಮಾಡಿಕೊಂಡಿದೆ. ಈ ಹಿಂದೆ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಲಾಗಿದೆ ಎನ್ನುವ ಆರೋಪವಿದ್ದು, ಹಿಂದೆ ಖರೀದಿಸುತ್ತಿದ್ದ ತುಪ್ಪವನ್ನು ಬದಲಾಯಿಸಿ ಪ್ರಸ್ತುತ ಲಡ್ಡು ತಯಾರಿಕೆಗೆ ಕರ್ನಾಟಕ ಹಾಲು ಒಕ್ಕೂಟದಿಂದ ತುಪ್ಪವನ್ನು ಖರೀದಿಸಲಾಗುತ್ತಿದೆ. ಹೀಗಾಗಿ ತುಪ್ಪದ ಬಗ್ಗೆ ಹೆಚ್ಚು ಜಾಗರೂಕತೆಯನ್ನು ವಹಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ತಿಳಿಸಿದರು.

Tirumala srivari laddu controversy kmf ghee vehicle is tracked through GPS

ತುಪ್ಪದ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕುರಿತು ಮತ್ತೊಮ್ಮೆ ಟಿಟಿಡಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭೀಮಾನಾಯಕ್ ತಿಳಿಸಿದ್ದಾರೆ. ನಂದಿನಿ ತುಪ್ಪಕ್ಕೆ ಬೇಡಿಕೆಯಿದ್ದು, ಟಿಟಿಡಿಗೆ ಕಳುಹಿಸುವ ತುಪ್ಪದ ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ತುಪ್ಪದ ವಾಹನಗಳು ಸಂಚರಿಸುವ ಮಾರ್ಗದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮತ್ತೊಂದೆಡೆ, ಟಿಟಿಡಿ ಲಡ್ಡುಗಳಲ್ಲಿ ಕಲಬೆರಕೆ ತುಪ್ಪದ ವಿವಾದದೊಂದಿಗೆ ಕರ್ನಾಟಕ ಸರ್ಕಾರ ಖಾಸಗಿ ಕಂಪನಿಗಳು ವಿತರಿಸುವ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ಸಿದ್ಧತೆ ನಡೆಸುತ್ತಿದೆ. ಕರ್ನಾಟಕ ಆರೋಗ್ಯ ಇಲಾಖೆಯು ಖಾಸಗಿ ಕಂಪನಿಗಳ ತುಪ್ಪವನ್ನು ಪರೀಕ್ಷಿಸಲು FSSAI (Food Safety Standards Institute of India) ಗೆ ಸೂಚನೆ ನೀಡಿದೆ.

ಕರ್ನಾಟಕ ಸರ್ಕಾರ ಈಗಾಗಲೇ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ಧಾರ್ಮಿಕ ಇಲಾಖೆ ಅಧೀನದಲ್ಲಿರುವ ದೇವಾಲಯಗಳಲ್ಲಿ ವಿತರಿಸುವ ಪ್ರಸಾದವನ್ನು ಪರೀಕ್ಷೆಗೆ ಒಳಪಡಿಸುವಂತೆ ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದಲ್ಲದೆ, ದೇವಾಲಯಗಳಲ್ಲಿ ಪ್ರಸಾದವನ್ನು ಮಾಡುವ ಮೊದಲು ತುಪ್ಪವನ್ನು ಎಫ್‌ಎಸ್‌ಎಸ್‌ಎಐ ಪರೀಕ್ಷಿಸಿ ಪ್ರಮಾಣೀಕರಿಸಬೇಕು ಎಂದು ಸೂಚಿಸಿದೆ. ಒಟ್ಟಿನಲ್ಲಿ ತಿರುಮಲ ಲಡ್ಡು ಪ್ರಸಾದ ವಿವಾದದಿಂದ ಎಚ್ಚೆತ್ತ ಕರ್ನಾಟಕ ಹಾಲು ಒಕ್ಕೂಟ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.

ಅಲ್ಲದೆ ತಿರುಮಲ ಲಡ್ಡು ಪ್ರಸಾದ ವಿವಾದದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯಾದ್ಯಂತ ದೇವಸ್ಥಾನ ಮಂಡಳಿ ಅಧೀನದಲ್ಲಿರುವ 34,000 ದೇವಸ್ಥಾನಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಉತ್ಪಾದಿಸುವ ಶುದ್ಧ ತುಪ್ಪವನ್ನೇ ಬಳಸಲು ಸೂಚನೆ ನೀಡಿರುವುದು ಗೊತ್ತಾಗಿದೆ.

ದೇವಸ್ಥಾನಗಳಲ್ಲಿ ಪ್ರಸಾದ ತಯಾರಿಸಲು, ದೀಪಗಳನ್ನು ಹಚ್ಚಲು ಮತ್ತು ಇತರ ಉದ್ದೇಶಗಳಿಗೆ ಶುದ್ಧ ತುಪ್ಪವನ್ನು ಮಾತ್ರ ಬಳಸಬೇಕು ಎಂದು ಸರ್ಕಾರ ನಿರ್ದೇಶಿಸಿದೆ. ದೇವಸ್ಥಾನಗಳಲ್ಲಿ ಭಕ್ತರಿಗೆ ಅನ್ನದಾನ ಮತ್ತು ಪ್ರಸಾದದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ. ರಾಜ್ಯಾದ್ಯಂತ ದೇವದಾಯ ಇಲಾಖೆಯ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಲ್ಲಿ ಸೇವೆ, ದೀಪ, ಎಲ್ಲಾ ರೀತಿಯ ಪ್ರಸಾದ ಮತ್ತು ಇತರ ಉದ್ದೇಶಗಳಿಗೆ ಶುದ್ಧ ತುಪ್ಪವನ್ನು ಬಳಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಒಟ್ಟಿನಲ್ಲಿ ತಿರುಮಲ ಲಡ್ಡು ಪ್ರಸಾದ ವಿವಾದದ ಬೆನ್ನಲ್ಲೆ ಕರ್ನಾಟಕದ ದೇವಸ್ಥಾನಗಳಲ್ಲಿ ತಯಾರಿಸುವ ಪ್ರಸಾದದ ಬಗ್ಗೆಯೂ ಕಟ್ಟೆಚ್ಚರ ವಹಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+