Tirupati Brahmotsavam: ತಿರುಪತಿ ಬ್ರಹ್ಮೋತ್ಸವದಲ್ಲಿ ಭಾಗವಹಿಸಲು ಭಕ್ತರಿಗೆ ಹೊಸ ಸೌಲಭ್ಯ... ಏನಿದು?

ಸಾಮಾನ್ಯ ದಿನಗಳಲ್ಲೇ ತಿರುಮಲ ಶ್ರೀವಾರಿಯ ದರ್ಶನಕ್ಕಾಗಿ ಸಾವಿರಾರು ಜನ ಭಕ್ತರು ತಿರುಪತಿಗೆ ಭೇಟಿ ನೀಡುತ್ತಾರೆ. ಹೀಗಿರುವಾಗ ವಿಶೇಷ ದಿನಗಳಲ್ಲಿ ಏಳು ಬೆಟ್ಟಗಳ ಒಡೆಯನ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದು ಬರುತ್ತದೆ. ಅಂದಹಾಗೆ ಅಕ್ಟೋಬರ್ 4ರಂದು ತಿರುಪತಿಯಲ್ಲಿ ವಾರ್ಷಿಕ ಬ್ರಹ್ಮೋತ್ಸವ ಆರಂಭವಾಗಲಿದೆ. ಈ ಬ್ರಹ್ಮೋತ್ಸವದಲ್ಲಿ ಭಾಗವಹಿಸುವ ಭಕ್ತರ ಅನುಕೂಲಕ್ಕಾಗಿ ಸಾರಿಗೆ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ.

ತಿರುಪತಿ ಎಯುಮಲಯನ್ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮೋತ್ಸವ ಉತ್ಸವ ಅಕ್ಟೋಬರ್ 4ರಂದು ಪ್ರಾರಂಭವಾಗಿ 12ರವರೆಗೆ ಇರುತ್ತದೆ. ಈ ಬಾರಿಯ ಬ್ರಹ್ಮೋತ್ಸವದ ನಿಮಿತ್ತ ಅಕ್ಟೋಬಬರ್ 1ರಂದು ದೇವಸ್ಥಾನದಲ್ಲಿ ಆಳ್ವಾರ್ ತಿರುಮಂಜನ ನಡೆಯಲಿದೆ. ಅದರ ನಂತರ 4ರಂದು ವಾರ್ಷಿಕ ಬ್ರಹ್ಮೋತ್ಸವ ಉತ್ಸವ ಆರಂಭವಾಗುತ್ತದೆ.

Tirumala Good news for Tirupati devotees New facility for devotees to participate in Brahmotsavam

ಅಕ್ಟೋಬರ್ 8ರಂದು ಗರುಡ ಸೇವೆ ನಡೆಯಲಿದ್ದು ಅಕ್ಟೋಬರ್ 12 ರಂದು ಚಕ್ರತಾಳ್ವಾರ್ ತೀರ್ಥವಾರಿಯೊಂದಿಗೆ ಬ್ರಹ್ಮೋತ್ಸವ ಮುಕ್ತಾಯಗೊಳ್ಳುತ್ತದೆ. ತಮಿಳುನಾಡಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಆಂಧ್ರ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ತಮಿಳುನಾಡಿನಿಂದ ಹೆಚ್ಚಿನ ವಿಶೇಷ ಬಸ್ ಸೇವೆಯನ್ನು ಒದಗಿಸಿದ್ದಾರೆ.

ಅದರಂತೆ ಆಂಧ್ರ ರಾಜ್ಯದ ಅಧಿಕಾರಿಗಳು ತಮಿಳುನಾಡು ಸರ್ಕಾರಿ ಸಾರಿಗೆ ಸಂಸ್ಥೆ ಹಾಗೂ ಎಕ್ಸ್ ಪ್ರೆಸ್ ಬಸ್ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಚೆನ್ನೈ, ವೆಲ್ಲೂರು, ತಿರುವಣ್ಣಾಮಲೈ, ತಿರುಪತ್ತೂರು, ಕೃಷ್ಣಗಿರಿ, ಸೇಲಂ, ಕೊಯಮತ್ತೂರು ಸೇರಿದಂತೆ ತಮಿಳುನಾಡಿನ ವಿವಿಧ ಭಾಗಗಳಿಂದ ಸುಮಾರು 150 ವಿಶೇಷ ಎಕ್ಸ್‌ಪ್ರೆಸ್ ಬಸ್‌ಗಳನ್ನು ಸಂಚರಿಸಲು ನಿರ್ಧರಿಸಲಾಗಿದೆ. ಅದೇ ರೀತಿ ತಮಿಳುನಾಡು ಸರಕಾರಿ ಸಾರಿಗೆ ಸಂಸ್ಥೆಯ ವತಿಯಿಂದ ಎಷ್ಟು ಬಸ್ ಗಳನ್ನು ಓಡಿಸಬಹುದು ಎಂಬ ಬಗ್ಗೆ ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Tirumala Good news for Tirupati devotees New facility for devotees to participate in Brahmotsavam

ತಿರುಮಲ ಶ್ರೀವಾರಿಯ ಗುರುವಾರದ ಆದಾಯ

ತಿರುಮಲದಲ್ಲಿ ಭಕ್ತರ ನೂಕು ನುಗ್ಗಲು ಸಹಜ. ಶ್ರೀವಾರಿಯ ಉಚಿತ ಸರ್ವದರ್ಶನಕ್ಕೆ 8 ಗಂಟೆ ಬೇಕಾಗುತ್ತದೆ. ಉಚಿತ ಸರ್ವದರ್ಶನಕ್ಕಾಗಿ 9 ಕಂಪಾರ್ಟ್ ಮೆಂಟ್ ಗಳಲ್ಲಿ ಭಕ್ತರು ಕಾಯುತ್ತಿರುತ್ತಾರೆ. ಹೀಗೆ ಗುರುವಾರ 63,544 ಭಕ್ತರು ತಿರುಮಲ ಶ್ರೀಗಳ ದರ್ಶನ ಪಡೆದರು. 22,942 ಭಕ್ತರು ತಾಳನೀಲ ಸಮರ್ಪಿಸಿದರು. ಶ್ರೀವಾರಿ ಹುಂಡಿಯ ಆದಾಯ ಗುರುವಾ ಒಂದೇ ದಿನ 3.37 ಕೋಟಿ ಸಂಗ್ರಹವಾಗಿದೆ.

ತಿರುಪತಿಗೆ ಹೋಗಿ ಬರುವಾಗ ಅಪಘಾತ

ತಿರುಪತಿಗೆ ಹೋಗಿ ಶ್ರೀವಾರಿಯ ದರ್ಶನ ಪಡೆದು ವಾಪಸ್‌ ಆಗುತ್ತಿದ್ದ ವೇಳೆ ಲಾರಿಯೊಂದು ಕಾರಿನ ಮೇಲೆ ಉರುಳಿದ ಪರಿಣಾಮ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ಭಕ್ತಾಧಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಬಳಿ ನಡೆದಿದೆ.

ಮೃತರನ್ನು ಚಿಕ್ಕಬಳ್ಳಾಪುರ ನಿವಾಸಿಗಳಾದ ಮುನಿವೆಂಕಟ ರೆಡ್ಡಿ, ಮಂಜುನಾಥ್, ರಮೇಶ್ ಎಂದು ಗುರುತಿಸಲಾಗಿದ್ದು ಕಾರಿನಲ್ಲಿ ಪ್ರಯಾಣಿತ್ತಿದ್ದ ಮತ್ತೋರ್ವನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್.ಸುಬ್ಬರಾಯಡು, 'ತಿರುಪತಿಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ಲಾರಿ ಉರುಳಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಂದ್ರಗಿರಿ ಮತ್ತು ಭಾಕರಪೇಟ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+