Tirumala: ಜನವರಿ 1ಕ್ಕೆ ತಿಮ್ಮಪ್ಪನ ದರ್ಶನ ಆಗ್ಲಿಲ್ವಾ? ಈಗ ಮಾಡಬಹುದು.. ಸರ್ವದರ್ಶನ ಟೋಕನ್‌ಗಳ ಮರುಪ್ರಾರಂಭ..!
ತಿರುಮಲ ತಿರುಪತಿ ಶ್ರೀವಾರಿ ಭಕ್ತರಿಗೆ ಟಿಟಿಡಿಯಿಂದ ಸಂತಸದ ಸುದ್ದಿ ಕೇಳಿ ಬಂದಿದೆ. ಜನವರಿ 2ರಂದು ತಿಮ್ಮಪ್ಪನ ದರ್ಶನಕ್ಕಾಗಿ ಸರ್ವದರ್ಶನ ಟೋಕನ್‌ಗಳನ್ನು ನೀಡುವುದಾಗಿ ಟಿಟಿಡಿ ತಿಳಿಸಿದೆ.
ಡಿಸೆಂಬರ್ 23 ರಿಂದ 2024ರ ಜನವರಿ 1 ರವರೆಗೆ ಶ್ರೀವಾರಿ ವೈಕುಂಠ ದರ್ಶನಕ್ಕೆ ಸಂಬಂಧಿಸಿದಂತೆ ಸರ್ವ ದರ್ಶನ ಟೋಕನ್‌ಗಳನ್ನು ವಿತರಿಸಲಾಯಿತು. ಅವುಗಳನ್ನು ಡಿಸೆಂಬರ್ 25 ರಂದು ಬೆಳಿಗ್ಗೆ 4.27ಕ್ಕೆ ಪೂರ್ಣಗೊಳಿಸಲಾಯಿತು. ಸದ್ಯ ಜನವರಿ 2ರಿಂದ ಮತ್ತೆ ತಿರುಪತಿಯ ಕೌಂಟರ್‌ಗಳಲ್ಲಿ ಸರ್ವದರ್ಶನಂ ಟೋಕನ್‌ಗಳನ್ನು ನೀಡಲಾಗುವುದು ಎಂದು ಟಿಟಿಡಿ ಪ್ರಕಟಿಸಿದೆ.

ಜನವರಿ 2ರಂದು ಬೆಳಗ್ಗೆ 4 ಗಂಟೆಯಿಂದ ಸರ್ವದರ್ಶನ ಟೋಕನ್ಗಳನ್ನು ಮಂಜೂರು ಮಾಡಲಾಗುವುದು. ಅದೇ ದಿನ ಮಧ್ಯಾಹ್ನ 12 ಗಂಟೆಯಿಂದ ದರ್ಶನ್ ಸ್ಲಾಟ್‌ಗಳು ಆರಂಭವಾಗಲಿವೆ. ಇದನ್ನು ಗಮನಿಸಿ ಭಕ್ತರು ಸರ್ವದರ್ಶನ ಟೋಕನ್ ತೆಗೆದುಕೊಳ್ಳುವಂತೆ ಟಿಟಿಡಿ ಸೂಚಿಸಿದೆ.
ಇದೇ ವೇಳೆ ತಿರುಪತಿಯ ಅಲಿಪಿರಿ ಸಪ್ತಗೋಪ್ರದಕ್ಷಿಣಾ ಮಂದಿರದಲ್ಲಿ ನಡೆಯುತ್ತಿರುವ ಶ್ರೀನಿವಾಸ ದಿವ್ಯಾನುಗ್ರಹ ವಿಶೇಷ ಹೋಮದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಇನ್ನು ಮುಂದೆ ಶ್ರೀಗಳ ದರ್ಶನ ನೀಡಲಾಗುವುದು ಎಂದು ಟಿಟಿಡಿ ಅಧ್ಯಕ್ಷ ಕರುಣಾಕರ ರೆಡ್ಡಿ ಪ್ರಕಟಿಸಿದರು. ಹೋಮ ಟಿಕೆಟ್ ಜೊತೆಗೆ ರೂ.300 ಪಾವತಿಸಿದವರಿಗೆ ಸುಪಥದಿಂದ ದೇವಸ್ಥಾನ ಪ್ರವೇಶಿಸಿ ಶ್ರೀಗಳ ದರ್ಶನಕ್ಕೆ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಮತ್ತೊಂದೆಡೆ ತಿರುಪತಿ ವಾದ್ಯ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಗಳ ಸಂಗೀತೋತ್ಸವ ನಡೆಯಲಿದೆ. ಜನವರಿ 6 ಮತ್ತು 7ರಂದು ಸಂಗೀತೋತ್ಸವ ಇರುತ್ತದೆ. ರಾಮಚಂದ್ರ ಪುಷ್ಕರಣಿಯಲ್ಲಿ ಅಂತರಾಷ್ಟ್ರೀಯ ಸಂಗೀತ ಕಾರ್ಯಕ್ರಮವೂ ನಡೆಯಲಿದೆ.
ಬೆಂಗಳೂರು ತಿರುಮಲ ಟೂರ್
ಹೊಸ ವರ್ಷದ ಸಂದರ್ಭದಲ್ಲಿ ನಿಮ್ಮನ್ನು ತಿರುಪತಿಗೆ ಕರೆದೊಯ್ಯಲು IRCTC ಒಂದು ಅದ್ಭುತವಾದ ಪ್ರವಾಸ ಪ್ಯಾಕೇಜ್ ಅನ್ನು ಬಿಡುಗಡೆಗೊಳಿಸಿದೆ. IRCTC ಯ ಈ ಪ್ರವಾಸದ ಪ್ಯಾಕೇಜ್‌ನ ಹೆಸರು ಬೆಂಗಳೂರು ತಿರುಪತಿ ಬಾಲಾಜಿ ದರ್ಶನ ಎಂದಾಗಿದೆ. ಈ ಪ್ರವಾಸ ಪ್ಯಾಕೇಜ್ ಅಡಿಯಲ್ಲಿ ನೀವು ಒಟ್ಟು 1 ರಾತ್ರಿ ಮತ್ತು 2 ಹಗಲು ಪ್ರಯಾಣಿಸುವ ಅವಕಾಶವನ್ನು ಪಡೆಯುತ್ತೀರಿ.
ಈ ಪ್ರವಾಸದ ಪ್ಯಾಕೇಜ್ ಜನವರಿ 2, 2024 ರಂದು ಬೆಂಗಳೂರಿನಿಂದ ಪ್ರಾರಂಭವಾಗುತ್ತದೆ. IRCTCಯ ಈ ಪ್ರವಾಸ ಪ್ಯಾಕೇಜ್ ಅಡಿಯಲ್ಲಿ, ನಿಮ್ಮ ಪ್ರಯಾಣ ಬಸ್ ಮೂಲಕ ಪ್ರಾರಂಭವಾಗಲಿದೆ. ಇದರಲ್ಲಿ ನೀವು ಮಲ್ಟಿ ಎಕ್ಸಲ್ ಎಸಿ ಬಸ್‌ನಲ್ಲಿ ಪ್ರಯಾಣಿಸುವ ಅವಕಾಶವನ್ನು ಪಡೆಯುತ್ತೀರಿ.

ಈ ಪ್ರವಾಸದ ಪ್ಯಾಕೇಜ್ ಅಡಿಯಲ್ಲಿ ಪ್ರಯಾಣಿಸುವಾಗ ಮಾರ್ಗದರ್ಶನದ ಸೌಲಭ್ಯವನ್ನು ಸಹ ನೀಡಲಾಗಿದೆ. ಇದಲ್ಲದೇ ಉಚಿತವಾಗಿ ದರ್ಶನ ಟಿಕೆಟ್ ಕೂಡ ನೀಡಲಾಗುವುದು. ಇದಕ್ಕಾಗಿ ನೀವು ಪ್ರತ್ಯೇಕವಾಗಿ ಖರ್ಚು ಮಾಡುವ ಅಗತ್ಯವಿಲ್ಲ.
IRCTC ಯ ಈ ಪ್ರವಾಸ ಪ್ಯಾಕೇಜ್ ಅಡಿಯಲ್ಲಿ ನಿಮ್ಮನ್ನು ತಿರುಪತಿಗೆ ಕರೆದೊಯ್ಯಲಾಗುತ್ತದೆ. ಪ್ಯಾಕೇಜ್‌ನ ಭಾಗವಾಗಿ ನಿಮ್ಮ ವಾಸ್ತವ್ಯಕ್ಕಾಗಿ ಹೋಟೆಲ್ ವ್ಯವಸ್ಥೆಗಳನ್ನು ಸಹ ಮಾಡಲಾಗುತ್ತದೆ. IRCTCಯ ಈ ತಿರುಪತಿ ಬಾಲಾಜಿ ಪ್ರವಾಸದ ಪ್ಯಾಕೇಜ್‌ನ ದರ ಕೇವಲ 1930 ರೂಪಾಯಿ ಮಾತ್ರ. ಇದನ್ನು ಪಾವತಿಸಿದರೆ ನೀವು ಆರಾಮದಾಯಕವಾಗಿ ಯಾವುದೇ ಗೊಂದಲ ಗಡಿಬಿಡಿಯಿಲ್ಲದೆ ತಿರುಪತಿ ತಿಮ್ಮಪ್ಪನ ದರ್ಶನವನ್ನು ಮಾಡಬಹುದು. ಹೊಸ ವರ್ಷವನ್ನು ತಿಮ್ಮಪ್ಪನ ಆಶೀರ್ವಾದದ ಮೂಲಕ ಬರಮಾಡಿಕೊಳ್ಳಬಹುದು.












Click it and Unblock the Notifications