ಸಂಗಾತಿ ಹುಡುಕಿಕೊಂಡು 2 ಸಾವಿರ ಕಿಮೀ ನಡೆದ ಹುಲಿರಾಯ

ಬೆಂಗಳೂರು, ಮಾರ್ಚ್ 6: ಹುಲಿಯೊಂದು ಸಂಗಾತಿ ಹುಡುಕಿಕೊಂಡು 2 ಸಾವಿರ ಕಿ.ಮೀ ನಡೆದುಕೊಂಡು ಹೋಗಿರುವ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಪಕ್ಷಿಗಳು ಋತುಗಳು ಬದಲಾದಂತೆ ನಮ್ಮ ಸ್ಥಾನವನ್ನು ಕೂಡ ಬದಲಾಯಿಸುತ್ತವೆ. ಕಾಡು ಪ್ರಾಣಿಗಳೂ ಕೂಡ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗುವುದು ಸಾಮಾನ್ಯ ಆದರ ಈ ಹುಲಿ ಬರೋಬ್ಬರಿ 2 ಸಾವಿರ ಕಿ.ಮೀ ಕ್ರಮಿಸಿದೆ.

ಹುಲಿ ತನ್ನ ವ್ಯಾಪ್ತಿಯನ್ನು ಬಿಟ್ಟು ಬೇರೆಡೆಗೆ ಹೋಗುವುದು ತುಂಬಾ ಕಡಿಮೆ, ಅದರದ್ದೇ ಆದ ಸಾಮ್ರಾಜ್ಯವನ್ನು ಕಟ್ಟಿಕೊಂಡು ಜೀವಿಸುತ್ತದೆ. ತನ್ನ ವ್ಯಾಪ್ತಿಯಲ್ಲಿ ಮತ್ಯಾವ ಪ್ರಾಣಿಗಳು ಬಂದರೂ ಅವುಗಳನ್ನು ತಿಂದು ಬದುಕುತ್ತವೆ. ಆದರೆ ಇದೇ ಮೊದಲ ಬಾರಿಗೆ ಸಂಗಾತಿಯನ್ನು ಅರಸಿ 2 ಸಾವಿರ ಕಿ.ಮೀ ನಡೆದಿದೆ.

ಹುಲಿಗೆ ಮ್ಯಾಪ್ ಟ್ರ್ಯಾಕಿಂಗ್ ಸಾಧನ ಅಳವಡಿಸಲಾಗಿತ್ತು

ಹುಲಿಗೆ ಮ್ಯಾಪ್ ಟ್ರ್ಯಾಕಿಂಗ್ ಸಾಧನ ಅಳವಡಿಸಲಾಗಿತ್ತು. ಇದರಿಂದಾಗಿ ಅದು ಎಷ್ಟು ದೂರ ಕ್ರಮಿಸಿದೆ ಎನ್ನುವುದು ತಿಳಿದುಬಂದಿದೆ. ಭಾರತೀಯ ಅರಣ್ಯ ಅಧಿಕಾರಿ ಪ್ರವೀಣ ಕಸ್ವಾನ್ ಈ ಕುರಿತು ಟ್ವೀಟ್ ಮಾಡಿದ್ದು, ಹುಲಿ ತನ್ನ ಸಂಗಾತಿಯನ್ನು ಗುಡುಕೊಂಡು ಅಲದಾಡಿರುವ ಕತೆಯನ್ನು ಬರೆದುಕೊಂಡಿದ್ದಾರೆ.

ಹುಲಿ ಜ್ಞಾನಗಂಗಾ ಅರಣ್ಯ ಪ್ರದೇಶದಲ್ಲಿದೆ

ಹುಲಿ ಜ್ಞಾನಗಂಗಾ ಅರಣ್ಯ ಪ್ರದೇಶದಲ್ಲಿದೆ

ಹುಲಿಯು ಜ್ಞಾನಗಂಗಾ ಅರಣ್ಯಪ್ರದೇಶದಲ್ಲಿದೆ. ಸೂಕ್ತವಾದ ಸಂಗಾತಿಯನ್ನು ಸೇರಲು ಕಾಲುವೆ, ಹೊಲಗದ್ದೆಗಳು, ಅರಣ್ಯ , ರಸ್ತೆಗಳಲ್ಲಿ ಅಲೆದಾಟ ನಡೆಸಿದೆ. ವಿಶೇಷವೆಂದರೆ ಹುಲಿಗಳು ಸಂಗಾತಿಯನ್ನು ಸೇರಲು ರಾತ್ರಿ ಹೊತ್ತು ಅಲಡದಾಡುತ್ತವೆ. ಅದರಂತೆ ಈ ಹುಲಿಯು ಕೂಡ ಹಗಲು ವಿಶ್ರಾಂತಿ ಪಡೆದು, ರಾತ್ರಿ ವೇಳೆಯಲ್ಲಿ ಸಂಗಾತಿಗಾಗಿ ಹುಡುಕಾಟ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.

ರೇಡಿಯೋ ಕಾಲರ್ ಟ್ಯಾಗ್ ಅಳವಡಿಕೆ

ರೇಡಿಯೋ ಕಾಲರ್ ಟ್ಯಾಗ್ ಅಳವಡಿಕೆ

ಹುಲಿಗಳ ಚಲನವಲನದ ಮೇಲೆ ನಿಗಾ ಇಡಲು ಅರಣ್ಯ ಇಲಾಖೆ 2019ರಲ್ಲಿ ಈ ಹುಲಿಗೆ ರೇಡಿಯೋ ಕಾಲರ್ ಟ್ಯಾಗ್ ಹಾಕಿದೆ. ಅಲ್ಲದೇ ವಿಎಸ್‌ಪಿ ರೇಡಿಯೋ ಮತ್ತು ಜಿಪಿಎಸ್ ಟ್ರ್ಯಾಕರ್ ಮೂಲಕ ಅದು ಅಲೆದಾಡಿದ ಸಮಯ ಮತ್ತು ಎಷ್ಟು ದೂರ ಕ್ರಮಿಸಿದೆ ಎಂಬುದನ್ನು ಲೆಕ್ಕ ಹಾಕಬಹುದಾಗಿದೆ.

ಈ ರೀತಿ ಘಟನೆಗಳು ಹಿಂದೂ ನಡೆದಿರಬಹುದು

ಈ ರೀತಿ ಘಟನೆಗಳು ಹಿಂದೂ ನಡೆದಿರಬಹುದು

ಈ ರೀತಿಯ ಘಟನೆಗಳು ಹಿಂದೂ ನಡೆದಿರಬಹುದು. ಆದರೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ, ಇದೇ ಮೊದಲ ಬಾರಿ ಟ್ರ್ಯಾಕಿಂಗ್ ಸಿಸ್ಟಂ ಅಳವಡಿಸಿರುವ ಕಾರಣ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+