ರಾಷ್ಟ್ರಪತಿ ವೇತನ ಮೂರು ಪಟ್ಟು ಹೆಚ್ಚಿಸಲು ಪ್ರಸ್ತಾವ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 26: ರಾಷ್ಟ್ರಪತಿ, ಉಪ ರಾಷ್ಟ್ರಪತಿ ವೇತನ ಮೂರು ಪಟ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಏಳನೇ ವೇತನ ಆಯೋಗದ ಶಿಫಾರಸಿನ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಏಕೆಂದರೆ ದೇಶದ ಅತ್ಯುನ್ನತ ಅಧಿಕಾರಿ ಸ್ಥಾನದಲ್ಲಿರುವ ಸಂಪುಟ ಕಾರ್ಯದರ್ಶಿಗೆ ವೇತನ ಆಯೋಗದ ಶಿಫಾರಸಿನಂತೆ 2.5 ಲಕ್ಷ ರುಪಾಯಿ ವೇತನ ಆಗಲಿದೆ.

ರಾಷ್ಟ್ರಪತಿಗಳ ವೇತನ ಅದಕ್ಕಿಂತ ಒಂದು ಲಕ್ಷ ಕಡಿಮೆ, ಅಂದರೆ 1.5 ಲಕ್ಷ ಇದೆ. ಈ ವೇತನ ಹೆಚ್ಚಳದ ಪ್ರಸ್ತಾವವನ್ನು ಶೀಘ್ರದಲ್ಲೇ ಕೇಂದ್ರ ಸಂಪುಟದ ಒಪ್ಪಿಗೆಗಾಗಿ ಮಂಡಿಸಲಾಗುವುದು ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ. ಸದ್ಯಕ್ಕೆ ರಾಷ್ಟ್ರಪತಿ ವೇತನ 1.5 ಲಕ್ಷ, ಉಪ ರಾಷ್ಟ್ರಪತಿಗೆ 1.25 ಲಕ್ಷ ಹಾಗೂ ರಾಜ್ಯಪಾಲರಿಗೆ 1.10 ಲಕ್ಷ ಇದೆ.

Three-fold salary hike proposed for President

ಈಗಿನ ಪ್ರಸ್ತಾವನೆಯಲ್ಲಿ ರಾಷ್ಟ್ರಪತಿಗೆ 5 ಲಕ್ಷ ಹಾಗೂ ಉಪ ರಾಷ್ಟ್ರಪತಿಗೆ 3.5 ಲಕ್ಷಕ್ಕೆ ವೇತನ ಹೆಚ್ಚಿಸುವ ಇರಾದೆ ಇದೆ ಎಂದು ಮೂಲಗಳು ತಿಳಿಸಿವೆ. ಅಂದಹಾಗೆ ಇದು ತಿಂಗಳ ಲೆಕ್ಕಾಚಾರ ಕಣ್ರೀ. ಏಳನೇ ವೇತನ ಆಯೋಗದ ಶೀಫಾರಸಿನಂತೆ ಸಂಪುಟ ಕಾರ್ಯದರ್ಶಿ ಪ್ರತಿ ತಿಂಗಳು 2.5 ಲಕ್ಷ ಹಾಗೂ ಕೇಂದ್ರಸರಕಾರದ ಕಾರ್ಯದರ್ಶಿಗೆ 2.25 ಲಕ್ಷ ವೇತನ ದೊರೆಯುತ್ತದೆ.

ಸಂಪುಟದ ಒಪ್ಪಿಗೆ ಪಡೆದ ನಂತರ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಕರಡು ಮಂಡನೆ ಮಾಡಲಾಗುತ್ತದೆ. 2008ರಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ ವೇತನ ಹೆಚ್ಚಳ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The salaries of the President, the Vice President may go up three fold as the Union Home Ministry has prepared a proposal for raising the emoluments. The move comes following the implementation of the 7th Pay Commission’s recommendations which have created an anomalous situation in which the salary of the President is 1 lakh less than that of the country’s topmost bureaucrat
Please Wait while comments are loading...