Uttar Pradesh: ರಸ್ತೆ ಬದಿ ನಿಂತಿದ್ದ ರೈತರ ಮೇಲೆ ಹರಿದ ಸರ್ಕಾರಿ ಅಧಿಕಾರಿಯ ಕಾರು, ಮೂವರು ಸಾವು

ಲಕ್ನೋ, ಜೂನ್. 13: ಸೋಮವಾರ ರಾತ್ರಿ ಕಾನ್ಪುರದ ಬಿಲ್ಹೌರ್ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರ ವಾಹನಕ್ಕೆ ಸಿಲುಕಿ ಮೂವರು ರೈತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಅಯೋಧ್ಯೆಯ ಪಿಡಬ್ಲ್ಯುಡಿ ಕಿರಿಯ ಇಂಜಿನಿಯರ್‌ಗೆ ಸೇರಿದ್ದು ಎಂದು ವರದಿಯಾಗಿದೆ.

ಪಿಡಬ್ಲ್ಯುಡಿ ಅವರ ವಾಹನವನ್ನು ಚಾಲಕ ಅಜೀತ್ ಕುಮಾರ್ ಪಾಂಡೆ ಚಾಲನೆ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅಜೀತ್ ಪಾಂಡೆ ಅವರು ಕಾರನ್ನು ಚಾಲನೆ ಮಾಡುವಾಗ ಮದ್ಯ ಸೇವಿಸಿದ್ದರು ಎಂದು ತಿಳಿದುಬಂದಿದೆ ಎಂದು ಎಸ್‌ಎಚ್‌ಒ (ಬಿಲ್ಹೌರ್) ಸುರೇಂದ್ರ ಸಿಂಗ್ ಹೇಳಿದ್ದಾರೆ.

Uttar Pradesh News In Kannada

ಆರೋಪಿ ಚಾಲಕ ಅಜೀತ್ ಪಾಂಡೆ ಅವರು ಜೂನಿಯರ್ ಇಂಜಿನಿಯರ್ ಕುಟುಂಬವನ್ನು ಕಾನ್ಪುರ ದೇಹತ್‌ನ ಸಿಕಂದರಾದಲ್ಲಿ ಇಳಿಸಿ ಅಯೋಧ್ಯೆಗೆ ತೆರಳುತ್ತಿದ್ದಾಗ ಲಕ್ನೋ - ಇಟಾವಾ ರಸ್ತೆಯಲ್ಲಿ ವಾಹನದ ನಿಯಂತ್ರಣ ತಪ್ಪಿ ಸುರೇಂದ್ರ ಸಿಂಗ್ (62), ಅಹಿಬರನ್ ಸಿಂಗ್ (63) ಮತ್ತು ಘಸೀತೆ ಯಾದವ್ (65) ಮೇಲೆ ಹರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಿಲ್ಹಾರ್ ನಿವಾಸಿಗಳಾದ ಮೂವರು ವೃದ್ಧ ರೈತರು ತಮ್ಮ ತೋಟಗಳನ್ನು ನೋಡಿಕೊಳ್ಳಲು ರಸ್ತೆಯ ಬದಿಯಲ್ಲಿ ನಿಂತಿದ್ದರು. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ. "ಮಾರಣಾಂತಿಕ ಅಪಘಾತ ಸಂಭವಿಸಿದಾಗ ಅಜೀತ್ ಪಾಂಡೆ ವಾಹನವನ್ನು ವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದಾನೆ ಎಂದು ನಮಗೆ ಅನುಮಾನವಿದೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮೂವರು ರೈತರನ್ನು ದಾರುಣವಾಗಿ ಕೊಂದು ಅಪಘಾತದ ನಂತರ ಸ್ಥಳದಲ್ಲಿಯೇ ಹಾನಿಗೊಳಗಾದ ಎಸ್‌ಯುವಿ ಕಾರನ್ನು ಬಿಟ್ಟು ಆರೋಪಿ ಚಾಲಕ ಪರಾರಿಯಾಗಿದ್ದರು. ನಂತರ ಆತನನ್ನು ಬಂಧಿಸಲಾಗಿದೆ. ಬಿಲ್ಹೌರ್ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ಕೂಡ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+