ಖರೀದಿಸುವ ಸಾಮರ್ಥ್ಯವಿಲ್ಲದವರು ಕೆಲವು ತಿಂಗಳು ಈರುಳ್ಳಿ ತಿನ್ನಬೇಡಿ: ಮಹಾರಾಷ್ಟ್ರ ಸಚಿವನ ಉದ್ಘಟ ಹೇಳಿಕೆ

ಮುಂಬೈ, ಆಗಸ್ಟ್ 22: ಭಾರತದಲ್ಲಿ ಹೆಚ್ಚುತ್ತಿರುವ ಈರುಳ್ಳಿ ಬೆಲೆಯ ಮಧ್ಯೆ ಮಹಾರಾಷ್ಟ್ರದ ಸಚಿವರೊಬ್ಬರು ಈರುಳ್ಳಿ ಖರೀದಿಸಲು ಸಾಧ್ಯವಾಗದವರು, ಅವರು ಕೆಲವು ತಿಂಗಳು ಅದನ್ನು ತಿನ್ನದಿದ್ದರೆ ಯಾವುದೇ ವ್ಯತ್ಯಾಸವಾಗಲ್ಲ ಎಂದು ಉದ್ಧಟನತನ ಹೇಳಿಕೆ ನೀಡಿದ್ದಾರೆ.

ಹೆಚ್ಚುತ್ತಿರುವ ಈರುಳ್ಳಿ ಬೆಲೆಗಳ ಕುರಿತು ಮಾತನಾಡಿದ ಮಹಾರಾಷ್ಟ್ರ ಸಚಿವ ದಾದಾ ಭೂಸೆ, "ನೀವು ₹ 10 ಲಕ್ಷ ಮೌಲ್ಯದ ವಾಹನವನ್ನು ಬಳಸಿದಾಗ, ನೀವು ಚಿಲ್ಲರೆ ದರಕ್ಕಿಂತ ₹ 10 ಅಥವಾ ₹ 20 ರಷ್ಟು ಹೆಚ್ಚಿನ ದರದಲ್ಲಿ ಉತ್ಪನ್ನಗಳನ್ನು ಖರೀದಿಸಬಹುದು. ಈರುಳ್ಳಿ ಕೊಳ್ಳಲು ಸಾಧ್ಯವಾಗದವರು ಎರಡು-ನಾಲ್ಕು ತಿಂಗಳು ತಿನ್ನದೇ ಇದ್ದರೆ ಯಾವುದೇ ವ್ಯತ್ಯಾಸವಾಗಲ್ಲ ಎಂದು ಹೇಳಿದ್ದಾರೆ.

Those who cannot afford not to eat onions for a few months: Maharashtra Minister inaugural statement

"ಕೆಲವೊಮ್ಮೆ ಈರುಳ್ಳಿ ಕ್ವಿಂಟಲ್‌ಗೆ ₹ 200 ದರ ಆಗುತ್ತದೆ, ಆದರೆ ಕೆಲವೊಮ್ಮೆ ಅದು ಕ್ವಿಂಟಲ್‌ಗೆ ₹ 2,000 ಆಗುತ್ತದೆ. ಚರ್ಚೆ ನಡೆಸಿ ಇದಕ್ಕೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ ಆಗಸ್ಟ್ 19 ರಂದು ಈರುಳ್ಳಿ ರಫ್ತಿನ ಮೇಲೆ ಶೇಕಡಾ 40 ರಷ್ಟು ಸುಂಕವನ್ನು ವಿಧಿಸಿ ಬೆಲೆ ಏರಿಕೆಯನ್ನು ತಡೆಯಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ಸುಧಾರಿಸಿದೆ. ಆದಾಗ್ಯೂ, ರಫ್ತು ಸುಂಕ ವಿಧಿಸುವ ನಿರ್ಧಾರವನ್ನು ಸರಿಯಾದ ಸಮನ್ವಯದಿಂದ ತೆಗೆದುಕೊಳ್ಳಬೇಕಿತ್ತು ಎಂದು ಅವರು ಹೇಳಿದ್ದಾರೆ.

ಸೋಮವಾರ, ಭಾರತದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾಗಿರುವ ಲಾಸಲ್‌ಗಾಂವ್ ಸೇರಿದಂತೆ ನಾಸಿಕ್‌ನ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಈರುಳ್ಳಿ ಹರಾಜನ್ನು ಅನಿರ್ದಿಷ್ಟಾವಧಿಗೆ ಮುಚ್ಚಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರವು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವವರೆಗೆ ಅನಿರ್ದಿಷ್ಟಾವಧಿಯವರೆಗೆ ಈರುಳ್ಳಿ ಹರಾಜಿನಲ್ಲಿ ಪಾಲ್ಗೊಳ್ಳದಂತೆ ನಾಸಿಕ್ ಜಿಲ್ಲಾ ಈರುಳ್ಳಿ ವರ್ತಕರ ಸಂಘ ಕರೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ರಫ್ತು ಸುಂಕವನ್ನು ಹಿಂಪಡೆಯುವಂತೆ ಒತ್ತಾಯಿಸಿ ಹಲವಾರು ರೈತರು ಮತ್ತು ವ್ಯಾಪಾರಿಗಳು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿದರು.

ತರಕಾರಿ ಬೆಲೆ ಏರಿಕೆ:

ಈ ಹಿಂದೆ, ಈರುಳ್ಳಿ ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಭಾರೀ ಮಳೆಯ ನಂತರ ಟೊಮೆಟೊ ಬೆಲೆ ಎಂಟು ಪಟ್ಟು ಏರಿದ ನಂತರ ಸರ್ಕಾರವು ತೀವ್ರ ಟೀಕೆಗಳನ್ನು ಎದುರಿಸಿತು. ಟೊಮ್ಯಾಟೊ ಬೆಲೆ ಕುಸಿಯುತ್ತಿದೆ, ಆದರೆ ಈರುಳ್ಳಿ ಸ್ಥಿರವಾಗಿ ಏರಿಕೆಯಾಗುತ್ತಿರುವುದು ಅಧಿಕಾರಿಗಳನ್ನು ಹೈ ಅಲರ್ಟ್ ಮಾಡಿದೆ. ಕಳಪೆ ಹವಾಮಾನದಿಂದಾಗಿ ಗೋಧಿ ಮತ್ತು ಅಕ್ಕಿಯಂತಹ ಅನೇಕ ಕೃಷಿ ಸರಕುಗಳಿಗೆ ವೆಚ್ಚಗಳು ಹೆಚ್ಚಾಗುತ್ತಿದ್ದಂತೆ ಈ ಕ್ರಮ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+