ನಗರ ಸ್ವಚ್ಛವಾಗಿಡಿ.. ಇಲ್ಲದಿದ್ದರೆ ಇವನಿಗಾದಂತೆ ಆದೀತು!
ಬೆಂಗಳೂರು, ನವೆಂಬರ್. 23: 'ಸುಶಿಕ್ಷಿತ' ವ್ಯಕ್ತಿಯೊಬ್ಬ ತನ್ನ ಕಾರು ಏರಿ ಹೊರಡುತ್ತಾನೆ. ಕಾರಿನಲ್ಲೇ ಜ್ಯೂಸ್ ಹೀರಿ ಪ್ಲಾಸ್ಟಿಕ್ ಕವರ್ ಅನ್ನು ರಸ್ತೆಗೆ ಬಿಸಾಡುತ್ತಾನೆ. ಅಂಗಡಿಯೊಂದರಲ್ಲಿ ಬೀಡಾ ಕಟ್ಟಿಸಿಕೊಂಡು ಸರಿಯಾಗಿ ಜಗಿದು ರಸ್ತೆಗೆ ಉಗಿಯುತ್ತಾನೆ, ಮುಂದೆ ತೆರಳಿ ಗೆಳತಿಯೊಂದಿಗೆ ಕುಳಿತುಕೊಂಡು ಫಿಜ್ಜಾ ತಿಂದು ಕಸವನ್ನು ರಸ್ತೆಗೆ ಎಸೆಯುತ್ತಾನೆ....
ಹೌದು ಇಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೆಂಕಟ್ ರಮೇಶ್ ಗಂಗರಾಜು ಎನ್ನುವವರು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿರುವ ವಿಡಿಯೋವನ್ನು 8 ಲಕ್ಷ ಜನ ನೋಡಿದ್ದಾರೆ. ಅರೇ ಅಂಥದ್ದು ಇದರಲ್ಲಿ ಏನಿದೆಯಪ್ಪಾ ಅಂದುಕೊಳ್ಳಬೇಡಿ.[ಸತ್ತ ಕರುವಿಗೆ ನ್ಯಾಯ ಕೇಳುತ್ತಿರುವ 'ಪುಣ್ಯಕೋಟಿ'ಯ ಕಥೆ]

ಇಷ್ಟೆಲ್ಲಾ ಆವಾಂತರ ಮಾಡಿ ಕಾರಿನಲ್ಲಿ ಜುಮ್ಮೆಂದು ಹೋದ ವ್ಯಕ್ತಿಗೆ ಯುವ ಪಡೆಯೊಂದು ಶಿಕ್ಷೆ ನೀಡುತ್ತದೆ ಅದು ಏನು ಎಂಬುದೇ 5 ನಿಮಿಷದ ವಿಡಿಯೋದ ಜೀವಾಳ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಕಲ್ಪನೆ ಮತ್ತು ಅದು ರಾಷ್ಟ್ರಾದ್ಯಂತ ಸಾಕಾರಗೊಂಡ ಬಗೆ ಬಗ್ಗೆ ಹೊಸದಾಗಿ ಹೇಳುವುದು ಏನೂ ಉಳಿದಿಲ್ಲ.
ಸ್ವಚ್ಛ ಭಾರತ ಕಲ್ಪನೆಯಿಂದ ದೂರವಿರುವ ವ್ಯಕ್ತಿಗಳಿಗೆ ಈ ವಿಡಿಯೋ ಸರಿಯಾದ ಟಾಂಗ್ ನೀಡುತ್ತದೆ. ಯಾವ ಯಾವ ವಸ್ತುಗಳನ್ನು ವ್ಯಕ್ತಿ ಬಿಸಾಡಿದ್ದನೋ ಅದು ಅವನ ಮನೆಗೆ ಬಂದೇ ಬೀಳುತ್ತವೆ. ಬಾಲಕನೊಬ್ಬ ಅವನ ಮನೆಯ ಸೋಫಾ ಮೇಲೆ ಸು.... ಕೂಡಾ ಮಾಡುತ್ತಾನೆ.[ಬಾಪೂ ಇನ್ನೂ ಸತ್ತಿಲ್ಲ, ಇಲ್ಲೊಂದು ಪತ್ರ ಬರೆದಿದ್ದಾರೆ ಓದಿ!]
ರೊಚ್ಚಿಗೇಳುವ ವ್ಯಕ್ತಿ' ಇದು ನನ್ನ ಮನೆ, ಏನೆಂದು ತಿಳಿದುಕೊಂಡಿದ್ದೀರಿ? ಎಂದು ಗದರಿಸಲು ಮುಂದಾಗುತ್ತಾನೆ. ಈ ವೇಳೆಗಾಗಲೇ ಆತನ ಮನೆ ಗುಡಿಸಿ ಗುಂಡಾಂತರವಾಗಿರುತ್ತದೆ...
Superb video.....Swatch Bharat..Must watch....
Posted by Venkata Ramesh Gangaraju on Wednesday, November 26, 2014
ನೀವು ವಾಸಿಸುವ ನಗರವೂ ನಿಮ್ಮ ಮನೆಯೇ, ನಮ್ಮ ಮನೆ ಹೇಗೆ ಸ್ವಚ್ಛವಾಗಿರಲಿ ಎಂದು ಬಯಸುತ್ತೆವೆಯೋ, ಅದೆ ರೀತಿ ನಮ್ಮ ನಗರವನ್ನು ಸ್ವಚ್ಛವಾಗಿರಿಸುವುದು, ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ... ಹೌದು ತಾನೆ?












Click it and Unblock the Notifications