ಬಾಂಗ್ಲಾದೇಶ ಬಡಿದಾಟದ ಪರಿಣಾಮ ಭಾರತಕ್ಕೆ ಭರ್ಜರಿ ಲಾಭ! ಹೇಗೆ ಗೊತ್ತಾ?
ಭಾರತದ ಸಹಾಯದಿಂದ ಸ್ವಾತಂತ್ರ್ಯ ಪಡೆದು, ಭಾರತದ ಸಹಾಯದಿಂದಲೇ ಉದ್ಯಮಗಳನ್ನ ಕಟ್ಟಿ ಬೆಳೆಸುತ್ತಿದ್ದ ಬಾಂಗ್ಲಾದೇಶ ಈಗ ಅನಾಥವಾಗಿದೆ. ಅದರಲ್ಲೂ ಭಾರತವನ್ನು ಬಿಟ್ಟರೆ ಬಾಂಗ್ಲಾದೇಶದಲ್ಲೇ ಗಾರ್ಮೆಂಟ್ಸ್ ಉದ್ಯಮ ಬೃಹತ್ ಮಟ್ಟದಲ್ಲಿ ಬೆಳೆದಿತ್ತು. ಆದರೆ ಇದೀಗ, ಕೆಲವರು ಮಾಡಿದ ತಪ್ಪಿಗೆ ಹಲವರ ಜೀವನ ಹಾಳಾಗಿ ಹೋಗಿದೆ. ಅದು ಏನೆಂದರೆ ಬಾಂಗ್ಲಾದ ನೆಲದಲ್ಲಿ ಸ್ಥಾಪನೆ ಆಗಿದ್ದ ಗಾರ್ಮೆಂಟ್ಸ್ ಸಂಸ್ಥೆಗಳು ಒಂದೊಂದಾಗಿ ಬಾಗಿಲು ಬಡಿಯುತ್ತಿವೆ! ಅಲ್ಲದೆ ಈ ಗಾರ್ಮೆಂಟ್ಸ್ ಕಂಪನಿಗಳು ಮರಳಿ ಭಾರತದ ಕಡೆಗೆ ಓಡೋಡಿ ಬರುತ್ತಿವೆಯಂತೆ.
ಬಾಂಗ್ಲಾದೇಶ ಕಳೆದ ಕೆಲವು ವರ್ಷಗಳಿಂದ, ಜವಳಿ ಉದ್ಯಮದ ರಾಜಧಾನಿ ಆಗುವ ಕನಸು ಕಂಡಿತ್ತು. ಯಾಕಂದ್ರೆ, ಗಾರ್ಮೆಂಟ್ಸ್ ಕಂಪನಿಗಳು ಹೆಚ್ಚಾಗಿ ಬಾಂಗ್ಲಾದೇಶಕ್ಕೆ ಹೋಗಿ ತಮ್ಮ ಉದ್ಯಮ ಆರಂಭ ಮಾಡುತ್ತಿದ್ದವು. ಭಾರತದಿಂದ ಕೂಡ ಹಲವು ಕಂಪನಿಗಳು ಹೀಗೆ ಎಸ್ಕೇಪ್ ಆಗಿದ್ದ ಉದಾಹರಣೆ ಕೂಡ ಇದೆ. ಯಾಕಂದ್ರೆ ಬಾಂಗ್ಲಾದೇಶದಲ್ಲಿ ಆಗ ಅಧಿಕಾರಿ ನಡೆಸಿದ್ದ ಹಸೀನಾ ಅವರ ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ನೀಡಿತ್ತು. ಅಲ್ಲದೆ ಗಾರ್ಮೆಂಟ್ಸ್ ಕಂಪನಿಗಳ ನಿರ್ವಹಣೆಗೆ ಬೇಕಾದ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು. ಹೀಗಿದ್ದಾಗ ಕೆಲವು ದಿನಗಳ ಹಿಂದೆ ಕೋಟ್ಯಂತರ ಬಾಂಗ್ಲಾದೇಶದ ಪ್ರಜೆಗಳ ಕನಸಿಗೆ ಬೆಂಕಿ ಬಿದ್ದಿತ್ತು.

ಮೀಸಲಾತಿ ಚರ್ಚೆಯಿಂದಲೇ ಬೆಂಕಿ!
ಬಾಂಗ್ಲಾದೇಶದ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದ ರೀತಿ ಇದ್ದು, ಆತಂಕ ಇದೆ. ಅಷ್ಟಕ್ಕೂ, ನೆಮ್ಮದಿಯಾಗಿದ್ದ ಬಾಂಗ್ಲಾದೇಶದ ನೆಮ್ಮದಿ ಹಾಳು ಮಾಡಿದ್ದೇ ಮೀಸಲಾತಿ ಚರ್ಚೆ. 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ಹೋರಾಟಗಾರರಿಗೆ ಸರ್ಕಾರದ ಉದ್ಯೋಗದಲ್ಲಿ ಮೀಸಲಾತಿ ನೀಡುವ ನಿರ್ಧಾರವೇ ಬಾಂಗ್ಲಾದೇಶದ ನೆಮ್ಮದಿ ಹಾಳು ಮಾಡಿದೆ.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಸರ್ಕಾರದ ನಿರ್ಧಾರ ವಿರೋಧಿಸಿ ಮೊದಲಿಗೆ ಪ್ರತಿಭಟನೆ ಶುರು ಮಾಡಿದ್ದ ವಿದ್ಯಾರ್ಥಿ ಸಂಘಟನೆಗಳು, ಆ ನಂತರ ಹಿಂಸಾಚಾರಕ್ಕೆ ಇಳಿದವು. ಹೀಗೆ ಶುರು ಆಗಿದ್ದ ಕಿತ್ತಾಟ ಕೊನೆಗೆ ದೊಡ್ಡ ಹಂತಕ್ಕೆ ಬಂದು ನಿಂತು ಬಾಂಗ್ಲಾದೇಶದ ಗಾರ್ಮೆಂಟ್ಸ್ & ಇತರ ಉದ್ಯಮಗಳ ಮೇಲೂ ಭಾರಿ ದೊಡ್ಡ ಪರಿಣಾಮ ಬೀರಿದೆ.
ಆರ್ಥಿಕವಾಗಿ ಬೀದಿಗೆ ಬೀಳುತ್ತಿದೆ ಬಾಂಗ್ಲಾ?
ಬಾಂಗ್ಲಾದೇಶದ ಗಾರ್ಮೆಂಟ್ಸ್ ಉದ್ಯಮಿಗಳು ಯಾವಾಗ ಹಿಂಸಾಚಾರದ ಪರಿಣಾಮ ನಷ್ಟದ ಸುಳಿಗೆ ಸಿಲುಕಿದರೋ, ಆಗ ನೆನಪಾಗಿದ್ದು ಭಾರತ. ಯಾಕಂದ್ರೆ ಭಾರತದಲ್ಲಿ ಅವರಿಗೆ ಭಾರಿ ಸೌಲಭ್ಯಗಳ ಜೊತೆಗೆ ನೆಮ್ಮದಿ ಕೂಡ ಸಿಕ್ಕಿತ್ತು. ಹೀಗಾಗಿ ಇದೀಗ ಭಾರತಕ್ಕೆ ವಾಪಸ್ ಬಂದು ತಮ್ಮ ಉದ್ಯಮಗಳನ್ನ ಕಟ್ಟಿಕೊಳ್ಳಲು ಅವರೆಲ್ಲಾ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ಸಮಯದಲ್ಲಿ ಬಾಂಗ್ಲಾದೇಶ ಆರ್ಥಿಕವಾಗಿ ಕೂಡ ಸಂಕಷ್ಟದ ಸುಳಿಗೆ ಸಿಲುಕುತ್ತಿದೆ. ಜನರು ಕೆಲಸ ಇಲ್ಲದೆ ನರಳಾಡುವ ಪರಿಸ್ಥಿತಿ ಎದುರಾಗುತ್ತಿದೆ. ಇದು ಜಾಗತಿಕ ಮಟ್ಟದಲ್ಲಿ ಸೌಂಡ್ ಮಾಡುವ ಜೊತೆಗೆ, ಬಾಂಗ್ಲಾದೇಶದ ಆರ್ಥಿಕತೆ ಬೀದಿಪಾಲು ಮಾಡುತ್ತಿದೆ, ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ.












Click it and Unblock the Notifications