ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಬ್ರಹ್ಮಾಸ್ತ್ರ!

Posted By:
Subscribe to Oneindia Kannada

ಮುಂದಿನ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಬ್ರಹ್ಮಾಸ್ತ್ರವೊಂದನ್ನು ಸಿದ್ಧ ಮಾಡಿಕೊಂಡಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಡೊನಾಲ್ಡ್ ಟ್ರಂಪ್ ಗೆಲುವಿಗೆ ಸಹಾಯ ಮಾಡಿದ ಕೇಂಬ್ರಿಡ್ಜ್ ಅನಲಿಟಿಕಾ ಕಂಪನಿಯ ಜತೆಗೆ ಕಾಂಗ್ರೆಸ್ ಮಾತುಕತೆ ನಡೆಸಿದೆ. ದತ್ತಾಂಶಗಳನ್ನು ಕಲೆ ಹಾಕಿ, ಮತದಾನದ ಮೇಲೆ ಪರಿಣಾಮ ಬೀರಬಲ್ಲ ಈ ಕಂಪನಿಯು ಕಾಂಗ್ರೆಸ್ ಪರ ಕೆಲಸ ಮಾಡುವ ಸಾಧ್ಯತೆ ಇದೆ.

ಸಂಸತ್ ಚುನಾವಣೇಲಿ ಕಾಂಗ್ರೆಸ್ ನ ಸೋಲಿಸಿದ ಬಿಜೆಪಿಗೆ ಧನ್ಯವಾದ: ರಾಹುಲ್

ಆನ್ ಲೈನ್ ಜಾಲ ತಾಣಗಳು, ಇಮೇಲ್ ಹಾಗೂ ಆನ್ ಲೈನ್ ವೆಬ್ ಸೈಟ್ ಗಳ ಮಾಹಿತಿ ಮೂಲಕ ಈ ಕಂಪನಿಯು ಗ್ರಾಹಕರನ್ನು ವಿಶ್ಲೇಷಣೆ ಮಾಡುತ್ತದೆ. ಆ ಮೂಲಕ ರಾಜಕೀಯ ನಾಯಕರು ನಿರ್ದಿಷ್ಟ ಗುಂಪು ಅಥವಾ ಸಮುದಾಯದ ಮತದಾರರಿಗೆ ತಲುಪಿಸಬೇಕಾದ ಸಂದೇಶವನ್ನು ರೂಪಿಸಿಕೊಳ್ಳಬಹುದು.

ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರನ್ನು ತಲುಪಲು ಅಭಿಯಾನ ಆರಂಭಿಸಿದಾಗ ರಾಜಕೀಯ ಪಂಡಿತರು ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಗ್ರಾಮೀಣ ಭಾಗದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತದಲ್ಲಿ ಇದು ಅಷ್ಟೇನೂ ಪ್ರಯೋಜನಕ್ಕೆ ಬರುವುದಿಲ್ಲ ಅಂತಲೇ ಅಭಿಪ್ರಾಯ ಪಟ್ಟಿದ್ದರು.

ರಾಹುಲ್ ಅವರ ಭಾಷಣ ಬರೆದವನು ನಿಜಕ್ಕೂ ಮಹಾನ್!

ಆದರೆ, ಬಿಜೆಪಿಗೆ ಅದ್ಭುತವಾದ ಗೆಲುವು ಸಿಕ್ಕಿತು. ಮತದಾರರನ್ನು ಗುರುತಿಸಿ, ಆಯಾ ವರ್ಗದವರಿಗೆ ನಿರ್ದಿಷ್ಟ ಸಂದೇಶ ಮುಟ್ಟಿಸುವಲ್ಲಿ ಇಂಟರ್ ನೆಟ್ ಮಹತ್ವದ ಪಾತ್ರ ವಹಿಸಿತು.

ಸಾಂಪ್ರದಾಯಿಕ ತಂತ್ರಗಾರಿಕೆ ಉಪಯೋಗವಿಲ್ಲ

ಸಾಂಪ್ರದಾಯಿಕ ತಂತ್ರಗಾರಿಕೆ ಉಪಯೋಗವಿಲ್ಲ

ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣಗಳ ಮೂಲಕ ಪರಿಣಾಮಕಾರಿ ಅಭಿಯಾನ ನಡೆಸುವುದರಲ್ಲಿ ಪಳಗಿ, ನಿಷ್ಣಾತವಾಗಿ ಆಗಿದೆ. ವಿರೋಧ ಪಕ್ಷಗಳು ಸಾಂಪ್ರದಾಯಿಕವಾಗಿ ಅನುಸರಿಸಿಕೊಂಡು ಬಂದ ತಂತ್ರಗಾರಿಕೆ ಅಷ್ಟೇನೂ ಪರಿಣಾಮಕಾರಿಯಾಗಿ ಉಳಿಯದೆ, ಬುದ್ಧಿವಂತಿಕೆಯ ಆನ್ ಲೈನ್ ಅಭಿಯಾನದ ಯುಗಾರಂಭವಾಗಿದೆ.

ಪ್ರಮುಖ ಮುಖಂಡರ ಭೇಟಿ

ಪ್ರಮುಖ ಮುಖಂಡರ ಭೇಟಿ

ಮಾಧ್ಯಮಗಳ ವರದಿಯನ್ನೇ ಉದಾಹರಿಸಿ ಹೇಳುವುದಾದರೆ, ಕೇಂಬ್ರಿಜ್ ಅನಲಿಟಿಕಾ ಸಿಇಒ ಅಲೆಕ್ಸಾಂಡರ್ ನಿಕ್ಸ್ ಈಗಾಗಲೇ ಯುಪಿಎ ಮೈತ್ರಿಕೂಟದ ಹಲವು ಪ್ರಮುಖ ಮುಖಂಡರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಉದ್ದೇಶ ಏನೆಂದರೆ, ಮುಂದಿನ ಲೋಕಸಭೆ ಚುನಾವಣೆಗೆ ರಣತಂತ್ರ ರೂಪಿಸುವುದಾಗಿದೆ. ಆನ್ ಲೈನ್ ಮೂಲಕ ನಿರ್ದಿಷ್ಟ ವರ್ಗದ ಮತದಾರರನ್ನು ಆನ್ ಲೈನ್ ಮೂಲಕ ತಲುಪುವುದು ಹೇಗೆ ಎಂದು ಪ್ರಸಂಟೇಷನ್ ಮೂಲಕ ವಿವರಣೆ ಕೂಡ ನೀಡಿದ್ದಾರೆ.

ಟ್ರಂಪ್ ನೇ ಗೆಲ್ಲಿಸಿರಬೇಕಾದರೆ...

ಟ್ರಂಪ್ ನೇ ಗೆಲ್ಲಿಸಿರಬೇಕಾದರೆ...

ಟ್ರಂಪ್ ಗೆಲುವಿನ ನಂತರ ಕೇಂಬ್ರಿಜ್ ಅನಲಿಟಿಕಾ ಬ್ರೆಕ್ಸ್ ಇಟ್ ಮತದಾನದ ಮೇಲೂ ಪರಿಣಾಮ ಬೀರಿದೆ. ಜಗತ್ತಿನ ನಾನಾ ದೇಶಗಳ ರಾಜಕೀಯ ನಾಯಕರು ಈ ಕಂಪನಿಯ ಜತೆಗೆ ಸಂಪರ್ಕದಲ್ಲಿದ್ದಾರೆ. ಟ್ರಂಪ್ ಗೆಲ್ಲುವುದಕ್ಕೆ ಸಾಧ್ಯವೆ ಇಲ್ಲ ಎಂಬ ಪರಿಸ್ಥಿತಿ ಚುನಾವಣೆ ಪ್ರಚಾರದ ಆರಂಭದಲ್ಲಿತ್ತು. ಆದರೆ ಎಲ್ಲ ನಿರೀಕ್ಷೆಯೂ ಉಲ್ಟಾ ಆಗಿ ಟ್ರಂಪ್ ಗೆದ್ದುಬಿಟ್ಟರು. ಅಂಥದ್ದರಲ್ಲಿ ಈ ಕಂಪನಿಯು ಅದೇ ಜಾದೂ ಉಳಿದೆಡೆ ಮಾಡಲು ಕೂಡ ಸಾಧ್ಯವಿದೆ ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಮಾತು.

ಕಠಿಣ ನಿಲುವು ಮತಗಳನ್ನು ತಡೆಯಲಿಲ್ಲ್

ಕಠಿಣ ನಿಲುವು ಮತಗಳನ್ನು ತಡೆಯಲಿಲ್ಲ್

ಚುನಾವಣೆ ಪ್ರಚಾರದ ವೇಳೆ ವಿದೇಶಿ ಉದ್ಯೋಗಿಗಗಳು ಹಾಗೂ ನೌಕರರ ವಿಚಾರದಲ್ಲಿ ಟ್ರಂಪ್ ಕಠಿಣ ನಿಲುವುಗಳನ್ನೇ ತಾಳಿದರೂ ಪ್ರಮುಖ ರಾಜ್ಯಗಳಲ್ಲಿ ನಿರ್ಣಾಯಕವಾದ ಹಿಂದೂ ಮತಗಳು ಅವರಿಗೆ ಸಿಗುವಂತೆ ಮಾಡುವಲ್ಲಿ ಈ ಕಂಪನಿ ಯಶಸ್ವಿಯಾಗಿತ್ತು.

ಟ್ರಂಪ್ ರಿಂದ ಹಿಂದಿ ಜಾಹೀರಾತು

ಟ್ರಂಪ್ ರಿಂದ ಹಿಂದಿ ಜಾಹೀರಾತು

ಅಷ್ಟಕ್ಕೂ ಆಗ ಮಾಡಿದ ರಣತಂತ್ರ ಏನು ಗೊತ್ತಾ? ಟ್ರಂಪ್ ಹಿಂದಿಯಲ್ಲಿ ಜಾಹೀರಾತು ನೀಡಿದರು. ಟ್ರಂಪ್ ರ ಸೊಸೆ ಲಾರಾ ಯುನಾಸ್ಕ ವರ್ಜಿನಿಯಾದ ಹಿಂದೂ ದೇವಾಲಯದಲ್ಲಿ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡರು. "ಟ್ರಂಪ್ ಗೆ ಮತ ಹಾಕಿದರೆ ಭಾರತೀಯರು ಹಾಗೂ ಹಿಂದೂಗಳ ನಿಜ ಸ್ನೇಹಿತರೊಬ್ಬರು ವೈಟ್ ಹೌಸ್ ನಲ್ಲಿ ಇರುತ್ತಾರೆ" ಎಂಬ ನಂಬಿಕೆ ಮೂಡಿಸುವಲ್ಲಿ ಸಫಲವಾದರು.

ಮೋದಿ ರಣತಂತ್ರ ಮುರಿಯಲು ಆಗುತ್ತಿಲ್ಲ

ಮೋದಿ ರಣತಂತ್ರ ಮುರಿಯಲು ಆಗುತ್ತಿಲ್ಲ

ಪ್ರಧಾನಿ ನರೇಂದ್ರ ಮೋದಿ ಅವರು ತುಂಬ ಬುದ್ಧಿವಂತಿಕೆಯಿಂದ ರೂಪಿಸಿದ ಆನ್ ಲೈನ್ ಅಭಿಯಾನವನ್ನು ಮುರಿಯಲು ಇದುವರೆಗೆ ಸಾಧ್ಯವಾಗಿಲ್ಲ. ಲೋಕಸಭೆ ಚುನಾವಣೆ ನಂತರವೂ ಸಾಲುಸಾಲು ಗೆಲುವು ಕಾಣುತ್ತಿರುವ ಬಿಜೆಪಿಯ ತಂತ್ರಗಾರಿಕೆಯು ವಿರೋಧ ಪಕ್ಷಗಳಿಗೂ ಹಾಗೂ ರಾಜಕೀಯ ಪಂಡಿತರಿಗೂ ಗೊಂದಲವುಂಟು ಮಾಡುತ್ತಿದೆ.

ಭಾರತದ ಡೊನಾಲ್ಡ್ ಟ್ರಂಪ್ ಆಗ್ತಾರಾ ರಾಹುಲ್

ಭಾರತದ ಡೊನಾಲ್ಡ್ ಟ್ರಂಪ್ ಆಗ್ತಾರಾ ರಾಹುಲ್

ಕೇಂಬ್ರಿಜ್ ಅನಲಿಟಿಕಾ ನೆರವಿನಿಂದ ರಾಹುಲ್ ಗಾಂಧಿ ಅವರು ಭಾರತದ ಡೊನಾಲ್ಡ್ ಟ್ರಂಪ್ ಆಗುತ್ತಾರಾ? ನರೇಂದ್ರ ಮೋದಿ ಅವರನ್ನು ಕಟ್ಟಿ ಹಾಕಲು ಸಾಧ್ಯವಾಗುತ್ತದಾ ಎಂಬುದನ್ನು ಕಾಲವೇ ನಿರ್ಧರಿಸಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Has the Congress found the Brahmastra for the next general elections? Perhaps it has, if one goes by reports that Congress is in touch with Big Data firm Cambridge Analytica that helped US President Donald Trump win last year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ