ಅಕ್ಕಿ ರಫ್ತಿನ ಮೇಲೆ ನಿರ್ಬಂಧ ವಿಧಿಸಲ್ಲ; ಕೇಂದ್ರ ಸರ್ಕಾರ
ನವದೆಹಲಿ, ಮೇ 31: ದೇಶದಲ್ಲಿ ಅಗತ್ಯಕ್ಕೆ ತಕ್ಕಷ್ಟು ಅಕ್ಕಿ ದಾಸ್ತಾನು ಲಭ್ಯವಿದ್ದು, ಬೆಲೆ ನಿಯಂತ್ರಣದಲ್ಲಿದೆ, ಅಕ್ಕಿಯ ರಫ್ತಿನ ಮೇಲೆ ನಿಷೇಧ ಹೇರುವ ವದಂತಿ ಸತ್ಯಕ್ಕೆ ದೂರವಾದುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಸ್ಮತಿ ಇತರೆ ಅಕ್ಕಿ ದಾಸ್ತಾನು ಲಭ್ಯವಿದೆ ಎಂದು ಹೇಳಿದ್ದಾರೆ. 2021-22ನೇ ಮಾರುಕಟ್ಟೆ ವರ್ಷದಲ್ಲಿ ಗೋಧಿ ರಫ್ತು ನಿಷೇಧ ಮಾಡಿದ್ದ ಕೇಂದ್ರ, ಸಕ್ಕರೆ ರಫ್ತಿನ ಮೇಲೆ ಮಿತಿ ಹೇರಿತ್ತು. ಈ ಬೆನ್ನಲ್ಲೇ ಅಕ್ಕಿ ರಫ್ತಿಗು ಕಡಿವಾಣ ಹಾಕಲಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು ಕೇಂದ್ರ ಈಗ ಸ್ಪಷ್ಟನೆ ನೀಡಿದೆ.
"ಅಕ್ಕಿಯ ರಫ್ತು ನಿಯಂತ್ರಣಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರದ ಗೋದಾಮುಗಳಲ್ಲಿ ಮತ್ತು ಖಾಸಗಿ ವ್ಯಾಪಾರಿಗಳಲ್ಲಿ ಸಾಕಷ್ಟು ದಾಸ್ತಾನು ಇದೆ. ಸದ್ಯಕ್ಕೆ ದೇಶೀಯ ಬೆಲೆಗಳು ಸಹ ನಿಯಂತ್ರಣದಲ್ಲಿವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರ ಭಾರತವು 2021-22ರಲ್ಲಿ 6.11 ಶತಕೋಟಿ ಡಾಲರ್ ಮೌಲ್ಯದ ಬಾಸ್ಮತಿ, ಮತ್ತು ಇತರೆ ತಳಿಯ ಅಕ್ಕಿಯನ್ನು ರಫ್ತು ಮಾಡಿದೆ, ಇದು 2020-21 ರಲ್ಲಿ 4.8 ಶತಕೋಟಿ ಡಾಲರ್‌ನಷ್ಟಿತ್ತು. 2021-22ನೇ ಸಾಲಿನಲ್ಲಿ ಭಾರತ 150 ದೇಶಗಳಿಗೆ ಬಾಸ್ಮತಿ, ಮತ್ತು ಇತರೆ ತಳಿಯ ಅಕ್ಕಿಯನ್ನು ರಫ್ತು ಮಾಡಿದೆ.
ಗೋಧಿ ರಫ್ತು ನಿಷೇಧಿಸಿದ್ದ ಭಾರತ; ಗೋಧಿಯ ರಪ್ತು ನಿಷೇಧಿಸುವ ಮುನ್ನ 10 ದಶಲಕ್ಷ ಮೆಟ್ರಿಕ್ ಟನ್ ಗೋಧಿ ರಫ್ತು ಮಾಡುವ ಗುರಿಯನ್ನು ಹೊಂದಿತ್ತು. ಉತ್ತರ ಭಾರತದಲ್ಲಿ ಬಿಸಿಗಾಳಿ, ಅಧಿಕ ತಾಪಮಾನದ ಪರಿಣಾಮ ಗೋಧಿ ಇಳುವರಿ ಕುಸಿತ ಕಂಡಿತ್ತು. ದೇಶೀಯ ಬೇಡಿಕೆ ಹೆಚ್ಚಿರುವ ಕಾರಣ ಗೋಧಿ ರಫ್ತು ನಿಷೇಧಿಸಿತ್ತು.
ಭಾರತದ ಗೋಧಿ ರಫ್ತು ನಿಷೇಧ ಕ್ರಮಕ್ಕೆ ಜಗತ್ತಿನ ಹಲವು ದೇಶಗಳು ವಿರೋಧ ವ್ಯಕ್ತಪಡಿಸಿದ್ದವು. ಅಮೆರಿಕ ಸೇರಿದಂತೆ ಇತರೆ ದೇಶಗಳು ಗೋಧಿ ರಫ್ತು ನಿಷೇಧ ತೆರವು ಮಾಡಲು ಒತ್ತಾಯ ಮಾಡುತ್ತಲೇ ಇವೆ.

ಅಕ್ಕಿ ರಫ್ತು ನಿಷೇಧ ಚಿಂತನೆ ಇಲ್ಲ; ಅಕ್ಕಿ ರಫ್ತಿ ನಿಷೇಧ ವದಂತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಯೊಬ್ಬರು, ರಫ್ತಿನ ಮೇಲೆ ನಿಷೇಧ ಮಾಡುವ ಬಗ್ಗೆಯಾಗಲೀ ಅಥವಾ ರಫ್ತಿನ ಮೇಲೆ ಮಿತಿ ಹೇರುವ ನಿಯಮ ಜಾರಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಭಾರತ ಈಗಾಗಲೇ ಬಾಸ್ಮತಿ ಸೇರಿ ವಿವಿಧ ತಳಿಯ 21.1 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಅಕ್ಕಿಯನ್ನು ರಫ್ತು ಮಾಡಿದೆ. ಮಾಹಿತಿ ಪ್ರಕಾರ ಭಾರತೀಯ ಆಹಾರ ನಿಗಮದ ವ್ಯಾಪ್ತಿಯಲ್ಲಿ 33.27 ಮಿಲಿಯನ್ ಟನ್ ಅಕ್ಕಿ, 26.61 ಮಿಲಿಯನ್ ಟನ್ ಭತ್ತ ದಾಸ್ತಾನು ಮಾಡಿದೆ.
-
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications