ನೀಟ್ ಫಲಿತಾಂಶ ಪ್ರಕಟಿಸಲು ಸಿಬಿಎಸ್ ಇಗೆ ಸುಪ್ರೀಂ ಅನುಮತಿ
ನವದೆಹಲಿ, ಜೂನ್ 12: ನೀಟ್ (National Eligibility-cum-Entrance Test )ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಸಿಬಿಎಸ್ ಇ ( Central Board of Secondary Education)ಗೆ ನೀಡಿದ್ದ ತಡೆ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದ್ದು, ಸಿಬಿಎಸ್ ಇ ಗೆ ಫಲಿತಾಂಶ ಪ್ರಕಟಿಸಲು ಅನುಮತಿ ನೀಡಿದೆ.
ಪ್ರಶ್ನೆ ಪತ್ರಿಕೆಯಲ್ಲಿ ತಾರತಮ್ಯವಿದೆ ಎಂಬ ಕೆಲ ವಿದ್ಯಾರ್ಥಿಗಳ ದೂರನ್ನು ಪರಿಗಣಿಸಿದ್ದ ಮದ್ರಾಸ್ ಹೈಕೋರ್ಟ್ ಫಲಿತಾಂಶ ಪ್ರಕಟಿಸದಂತೆ ಸಿಬಿಎಸ್ ಇ ಗೆ ತಡೆನೀಡಿತ್ತು. ಇದರಿಂದಾಗಿ ಎಂಬಿಬಿಎಸ್ (Bachelor of Medicine, Bachelor of Surgery,)ಮತ್ತು ಬಿಡಿಎಸ್ (Bachelor of dental surgery)ಕೋರ್ಸಿಗಾಗಿ ನೀಟ್ ಪರೀಕ್ಷೆ ಬರೆದಿದ್ದ ಸುಮಾರು 10.5 ಲಕ್ಷ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು.

ಆದರೆ ಇದೀಗ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದ್ದು, ನೀಟ್ ಪರೀಕ್ಷೆಯ ಫಲಿತಾಂಶದ ದಿನಾಂಕವನ್ನು ಸಿಬಿಎಸ್ ಇ ಸದ್ಯದಲ್ಲೇ ಬಿಡುಗಡೆ ಮಾಡಲಿದೆ.












Click it and Unblock the Notifications